ಹೊಸದಿಲ್ಲಿ: ಶುಕ್ರವಾರ ಮಧ್ಯಾಹ್ನದ ನಮಾಜ್‌ಗೆ ಮುಸ್ಲಿಮ್ ಶಾಸಕರು ಮತ್ತು ಅಧಿಕಾರಿಗಳಿಗೆ ನೀಡಲಾಗುತ್ತಿದ್ದ 2 ತಾಸುಗಳ ವಿರಾಮವನ್ನು ಅಸ್ಸಾಂ ವಿಧಾನಸಭೆ ಶುಕ್ರವಾರ ರದ್ದುಪಡಿಸಿದೆ.
ಈ ಸೌಲಭ್ಯವನ್ನು ರದ್ದುಪಡಿ ಸುವ ಮೂಲಕ ವಿಧಾನಸಭೆಯ ಉತ್ಪಾದಕತೆಗೆ ಆದ್ಯತೆ ನೀಡಿ ವಸಾಹತುಶಾಹಿಯ ಮತ್ತೊಂದು ಕುರುಹನ್ನು ಕಿತ್ತೂಗೆಯಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಈ ಪದ್ಧತಿಯನ್ನು ಮುಸ್ಲಿಂ ಲೀಗ್‌ನ ಸೈಯದ್ ಸಾದುಲ್ಲಾ 1937ರಲ್ಲಿ ಆರಂಭಿಸಿದ್ದರು. ಕಳೆದ ಚಳಿಗಾಲದ ಅಧಿವೇಶನದ ಕೊನೆಯ ದಿನ ಶುಕ್ರವಾರ ನೀಡಲಾಗಿದ್ದ 2 ತಾಸು ಗಳ ವಿರಾಮವೇ ಕೊನೆಯದು ಎನಿಸಿಕೊಳ್ಳಲಿದೆ.
ಈ ಪದ್ಧತಿಯನ್ನು ಕಿತ್ತು ಹಾಕುವ ಐತಿಹಾಸಿಕ ನಿರ್ಧಾರವನ್ನು ಜಾರಿಗೆ ತರಲೊಪ್ಪಿದ ಸ್ಪೀಕರ್ ಬಿಸ್ವಜಿತ್ ದೈಮಾರಿ ಹಾಗೂ ಶಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ.
ವಿಧಾನಸಭೆಯ ನಿಯಮಗಳ ಸಮಿತಿ ಈ ಪದ್ಧತಿಯನ್ನು ಕೈಬಿಡಲು ಅವಿರೋಧವಾಗಿ ಒಪ್ಪಿಕೊಂಡಿದೆ. ಇದೊಂದು ವಸಾಹತುಶಾಹಿ ಪದ್ಧತಿ ಆಗಿತ್ತು ಎಂದು ಅಸ್ಸಾಂ ಸರಕಾರ ತಿಳಿಸಿದೆ.
ವಸಾಹತು ಶಾಹಿ ಕಾಲದ ಪದ್ಧತಿಯನ್ನು ಕೈಬಿಡಲು ನೆರವಾದ ಸ್ಪೀಕರ್ ಹಾಗೂ ಎಲ್ಲ ಶಾಸಕರಿಗೆ ಕೃತಜ್ಞತೆ.
-ಹಿಮಾಂತ ಬಿಸ್ವ ಶರ್ಮಾ, ಅಸ್ಸಾಂ ಸಿಎಂ