Advertisement

ಮುಂಡಾಜೆ-ಸತ್ಯನಪಲೆ ರಸ್ತೆಗೆ ಡಾಮರು ಭಾಗ್ಯ 

12:08 PM Mar 03, 2018 | Team Udayavani |

ಬೆಳ್ತಂಗಡಿ: ಮುಂಡಾಜೆ – ಸತ್ಯನಪಲ್ಕೆ ರಸ್ತೆಗೆ ಅನುದಾನ ಮಂಜೂರುಗೊಂಡು ಡಾಮರು ಕಾಮಗಾರಿ ನಡೆಯುತ್ತಿದ್ದು, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಯಾತ್ರಿಕರಿಗೆ, ಗ್ರಾಮಸ್ಥರಿಗೆ ಬಹಳ ಹತ್ತಿರದ ದಾರಿಯಾಗಲಿದೆ. ಮುಂಡಾಜೆ ಭಿಡೆ ಕ್ರಾಸ್‌ನಿಂದ ಸತ್ಯನಪಲ್ಕೆಯ ಕರಿಯನೆಲದವರೆಗೆ ಡಾಮರೀಕರಣ ನಡೆಯುತ್ತಿದೆ.

Advertisement

ಬೇಡಿಕೆ ಈಡೇರಿಕೆ
ಜನರ ಬಹು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಗ್ರಾಮಸ್ಥರು ರಸ್ತೆ ದುರಸ್ತಿಗೊಳಿಸುವಂತೆ ಅನೇಕ ಪ್ರತಿಭಟನೆ, ರಾ.ಹೆ. ತಡೆ, ಧರಣಿ ಸತ್ಯಾಗ್ರಹ ನಡೆಸಿದ್ದರು. ಅನೇಕ ಮನವಿಗಳನ್ನು ಸಲ್ಲಿಸಿದ್ದರು. ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ರಸ್ತೆ ದುರಸ್ತಿಗೊಳಿಸುವಂತೆ ಪ್ರಧಾನ ಮಂತ್ರಿಗೂ ಪತ್ರ ಬರೆದಿದ್ದರು.

ಸುಮಾರು 9 ಕಿ.ಮೀ.ನ ಈ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಪರಿಸರದಿಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಶಾಲಾ ಕಾಲೇಜು ಗಳಿಗೆ ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದು, ಮಳೆಗಾಲದ ಸಂದರ್ಭ ತೀವ್ರ ತೊಂದರೆಯನ್ನು ಅನುಭವಿಸುತ್ತಿ ದ್ದರು. ಹೊಂಡಗಳಿಂದಲೇ ತುಂಬಿದ್ದ ರಸ್ತೆಯಲ್ಲಿ ಸಾರ್ವಜನಿಕರು ಶಾಪ ಹಾಕಿಕೊಂಡೇ ಹೋಗುತ್ತಿದ್ದರು.

ಈ ರಸ್ತೆಯ ದುರವಸ್ಥೆ ಕುರಿತು ಉದಯವಾಣಿ ಹಲವು ಬಾರಿ ವರದಿ ಮಾಡಿ ಇಲಾಖಾಧಿಕಾರಿಗಳ, ಜನಪ್ರತಿನಿಧಿಗಳ ಗಮನ ಸೆಳೆದಿತ್ತು

ಸಂತಸ ತಂದಿದೆ
ಬಹು ವರ್ಷಗಳ ಬೇಡಿಕೆ ಈಡೇರುತ್ತಿರುವುದು ಸಂತಸ ತಂದಿದೆ. ಧರ್ಮಸ್ಥಳಕ್ಕೆ ತೆರಳುವ ಯಾತ್ರಿಕರಿಗೂ ಇದು ಹತ್ತಿರದ ದಾರಿಯಾಗಲಿದೆ. ಶಿವರಾತ್ರಿಯ ಸಂದರ್ಭ ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ಪಾದಯಾತ್ರಿಗಳು ಈ ರಸ್ತೆಯ ಮೂಲಕ ಶ್ರೀಕ್ಷೇತ್ರಕ್ಕೆ ತೆರಳಿದ್ದಾರೆ ಎಂದು ರಸ್ತೆ ಹೋರಾಟ ಸಮಿತಿಯ ಬಾಲಕೃಷ್ಣ ನಾಯ್ಕ ಪಡೀಲು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next