Advertisement

ಏಷ್ಯನ್‌ ಮಹಿಳಾ ಬಾಸ್ಕೆಟ್‌ಬಾಲ್‌: ಇಂದಿನಿಂದ ಕ್ವಾರ್ಟರ್‌ಫೈನಲ್‌

07:05 AM Jul 27, 2017 | |

ಬೆಂಗಳೂರು: ಉದ್ಯಾನಗರಿಯಲ್ಲಿ ನಡೆಯುತ್ತಿರುವ ಮಹಿಳಾ ಫಿಬಾ ಏಷ್ಯಾ ಕಪ್‌ ಬಾಸ್ಕೆಟ್‌ಬಾಲ್‌ ಕೂಟದ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಗುರುವಾರದಿಂದ ಆರಂಭವಾಗಲಿವೆ. ಲೀಗ್‌ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಕ್ವಾರ್ಟರ್‌ಗೆ ಪ್ರವೇಶಿಸಿರುವ ಭಾರತ ತಂಡ ಫಿಜಿ ತಂಡವನ್ನು ಎದುರಿಸಲಿದೆ.

Advertisement

ಎ ಮತ್ತು ಬಿ ಎರಡೂ ವಿಭಾಗದ ಕ್ವಾರ್ಟರ್‌ಫೈನಲ್‌ಗ‌ಳು ಆರಂಭವಾಗಲಿವೆ. ಕ್ವಾರ್ಟರ್‌ನಲ್ಲಿ ಎ ವಿಭಾಗದಲ್ಲಿ ನ್ಯೂಜಿಲೆಂಡ್‌-ಕೊರಿಯಾ, ಆಸ್ಟ್ರೇಲಿಯಾ-ದಕ್ಷಿಣ ಕೊರಿಯಾ, ಚೀನಾ ಫಿಲಿಫೈನ್ಸ್‌, ಜಪಾನ್‌-ಚೀನಿ ತೈಪೈ ಸ್ಪರ್ಧಿಸಲಿವೆ. ಬಿವಿಭಾಗದಲ್ಲಿ ಉಜ್ಬೇಕಿಸ್ತಾನ್‌-ಸಿಂಗಾಪುರ, ಲೆಬೆನಾನ್‌-ಶ್ರೀಲಂಕಾ, ಭಾರತ-ಫಿಜಿ ತಂಡಗಳು ಸ್ಪರ್ಧಿಸಲಿವೆ.

ಲೀಗ್‌ ಹಂತದಲ್ಲಿ ಭಾರತದ ಮಹಿಳೆಯರು ಮೊದಲ ಪಂದ್ಯದಲ್ಲಿ ಉಜ್ಬೇಕಿಸ್ತಾನ್‌ ಮತ್ತು 2ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿತು. ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಹುಮ್ಮಸ್ಸಿನಲ್ಲಿಯೇ ಭಾರತ ಕ್ವಾರ್ಟರ್‌ ಫೈನಲ್‌ ಪಂದ್ಯವನ್ನು ಆಡಲಿದೆ. ಬಲಾಬಲದ ದೃಷ್ಟಿಯಲ್ಲಿ ನೋಡಿದರೆ ಪಿಜಿ ತಂಡ ಭಾರತಕ್ಕೆ ಕಠಿಣ ಎದುರಾಳಿ ಅಲ್ಲ. ಎರಡೂ ತಂಡಗಳು ಸಮಾನವಾಗಿವೆ. ಹೀಗಾಗಿ ತೀವ್ರ ಸ್ಪರ್ಧೆಯನ್ನು ನಿರೀಕ್ಷಿಸಬಹುದಾಗಿದೆ.

ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್‌ ಕೂಟ ನಡೆಯುತ್ತಿದೆ. ಹೀಗಾಗಿ ಭಾರತ ತಂಡದ ಆಟಗಾರರಿಗೆ ತವರಿನ ಅಂಕಣದ ಲಾಭವೂ ಇದೆ. ಉಳಿದಂತೆ ಗುರುವಾರ ನಡೆಯಲಿರುವ ಜಪಾನ್‌ ಮತ್ತು ಚೀನಾ ನಡುವಿನ ಹೋರಾಟವೂ ತೀವ್ರ ಕುತೂಹಲ ಹುಟ್ಟಿಸಿದೆ. ಎರಡೂ ತಂಡಗಳು ಬಲಾಡ್ಯವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next