Advertisement

Asian TT: ಭಾರತ ಪುರುಷರಿಗೂ ಕಂಚು

12:46 AM Oct 11, 2024 | Team Udayavani |

ಹೊಸದಿಲ್ಲಿ: ಕಜಕ್‌ಸ್ಥಾನದ ಅಸ್ತಾನಾದಲ್ಲಿ ನಡೆದ ಏಷ್ಯನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ಭಾರತೀಯ ಪುರುಷರು ಚೈನೀಸ್‌ ತೈಪೆ ವಿರುದ್ಧ ಸೋಲುವುದರೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

Advertisement

ಈ ಮೊದಲು ಭಾರತೀಯ ವನಿತೆಯರು ಕೂಡ ಸೆಮಿಫೈನಲ್‌ನಲ್ಲಿ ಜಪಾನ್‌ ವಿರುದ್ಧ ಎಡವಿ ಕಂಚಿನ ಪದಕ ಗೆದ್ದುಕೊಂಡಿತು. ಆದರೆ 1972ರಲ್ಲಿ ಈ ಸ್ಪರ್ಧೆ ಆರಂಭವಾದ ಬಳಿಕ ವನಿತೆಯರು ಪದಕ ಗೆದ್ದಿರುವುದು ಇದೇ ಮೊದಲ ಸಲವಾಗಿದೆ.

ಅನುಭವಿ ಅಚಂತಾ ಶರತ್‌ ಕಮಲ್‌ ಸಹಿತ ಭಾರತೀಯರು ಚೈನೀಸ್‌ ತೈಪೆಯ ಆಟಗಾರ ಹೊಡೆತಕ್ಕೆ ಉತ್ತರಿಸಲು ಅಸಮರ್ಥರಾಗಿ ಶರಣಾದರು.

Advertisement

Udayavani is now on Telegram. Click here to join our channel and stay updated with the latest news.

Next