ಉಡುಪಿ: ಕರಾವಳಿ ಕರ್ನಾಟಕದ ಅತಿ ವಿಶಾಲವಾದ ಮಳಿಗೆಯಾದ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಪುರುಷರ ಬಟ್ಟೆಗಳ ವಿಶಾಲ ವಿಭಾಗದ ಉದ್ಘಾಟನೆ “ಗ್ರಾಹಕರೇ ದೇವರು’ ಪರಿಕಲ್ಪನೆಯಡಿ ಸಂಸ್ಥೆಯ ಒಂದನೇ ಮಹಡಿಯಲ್ಲಿ ಅ.9ರಂದು ಬೆಳಗ್ಗೆ 9.45ಕ್ಕೆ ನೆರವೇರಲಿದೆ ಎಂದು ಗೀತಾಂಜಲಿ ಸಂಸ್ಥೆಯ ಪ್ರವರ್ತಕರಾದ ಸಂತೋಷ್ ವಾಗ್ಲೆ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಥೆಯ ಅಭಿವೃದ್ಧಿ ಪಥದಲ್ಲಿ ಗ್ರಾಹಕರು ನೀಡಿದ ಸಹಕಾರದ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ ಸೇರುವ ಗ್ರಾಹಕರೇ ಉದ್ಘಾಟನೆ ನೆರವೇರಿಸುವುದು ಕಾರ್ಯಕ್ರಮದ ವಿಶೇಷತೆಯಾಗಿದೆ.
ನೂತನ ಒಂದನೇ ಮಹಡಿಯಲ್ಲಿ ಸ್ವದೇಶಿ ಹಾಗೂ ವಿದೇಶಿಯ ಎಲ್ಲ ಪ್ರಮುಖ ಬ್ರ್ಯಾಂಡ್‌ಗಳು, ಮದುವೆ ಹಾಗೂ ಸಮಾರಂಭಗಳಿಗೆ ಬೇಕಾದ ಆಧುನಿಕ-ಪಾರಂಪರಿಕ ಶೈಲಿಯ ವಸ್ತ್ರಗಳು, ಆಫೀಸ್‌ವೇರ್, ಕ್ಯಾಶುಯಲ್ ವೇರ್, ಗ್ರಾಹಕರ ಅಭಿರುಚಿಗೆ ಅನುಸಾರವಾಗಿ ಸೂಟಿಂಗ್-ಶರ್ಟಿಂಗ್ ಹಾಗೂ ಪುರುಷರ ಒಳ ಉಡುಪುಗಳನ್ನು ಒಳಗೊಂಡ ವಿಶಾಲ ವಿಭಾಗವಿದೆ. ಈಗಾಗಲೇ ಸಂಸ್ಥೆಯ 3ನೇ ಮಹಡಿಯಲ್ಲಿ ಮಕ್ಕಳು ಹಾಗೂ ಮಹಿಳೆಯರಿಗೆ ಬೇಕಿರುವ ವಸ್ತ್ರಗಳಿವೆ. 2ನೇ ಮಹಡಿಯಲ್ಲಿ ಸೀರೆಗಳ ಅಪಾರ ಸಂಗ್ರಹವಿದೆ ಎಂದರು.
ಪ್ರವರ್ತಕ ರಾಮಕೃಷ್ಣ ವಾಗ್ಲೆ ಮಾತನಾಡಿ, ಗ್ರಾಹಕರ ಆಶೀರ್ವಾದದಿಂದ ಸಂಸ್ಥೆಯು ಉಡುಪಿಯಲ್ಲಿ ನಾಲ್ಕು ದಶಕಗಳಿಂದ ಹಲವಾರು ಉದ್ಯಮ ನಡೆಸಿಕೊಂಡು ಬಂದಿದೆ. ವರ್ಷದಿಂದ ವರ್ಷಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದ್ದು, ಜನರು ಗೀತಾಂಜಲಿ ಸಿಲ್ಕ್ಸ್ ಅನ್ನು ಒಪ್ಪಿ ಕೊಂಡಿದ್ದಾರೆ ಎಂಬು ದಕ್ಕೆ ಇದು ಸಾಕ್ಷಿ. ಈಗ ಮದುವೆ ಸಮಾರಂಭಗಳಿಗೆ ಬೇಕಾದ ವಸ್ತ್ರಗಳಿಗೂ ಪ್ರತ್ಯೇಕ ಸಂಗ್ರಹಾ ಲಯ ಮಾಡಲಾಗಿದೆ ಎಂದರು.
ದೇಶಾದ್ಯಂತ ವಿಭಿನ್ನ ಸಂಸ್ಕೃತಿಯಲ್ಲಿ ವಿಭಿನ್ನ ವಸ್ತ್ರಗಳ ಧಾರಣೆ ಇಲ್ಲಿನ ವಿಶೇಷತೆ. ಗ್ರಾಹಕರ ಆಯ್ಕೆಗೆ ವಿಪುಲ ಅವಕಾಶವಿದೆ. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಹಾಗೂ ವ್ಯಾಲೆಟ್ ಪಾರ್ಕಿಂಗ್ ಇಲ್ಲಿದೆ. ಪಕ್ಕದಲ್ಲೇ ಹೊಟೇಲ್ ಕೂಡ ಇದೆ ಎಂದರು. ಪ್ರವರ್ತಕರಾದ ಲಕ್ಷ್ಮಣ ವಾಗ್ಲೆ, ರಮೇಶ್ ವಾಗ್ಲೆ, ಹರೀಶ್ ವಾಗ್ಲೆ ಉಪಸ್ಥಿತರಿದ್ದರು.
ಈಗ ಪುರುಷರಿಗೂ ಬೃಹತ್ ಮಳಿಗೆ
ಗೀತಾಂಜಲಿ ಸಿಲ್ಕ್ಸ್ ನ ನೂತನ ಪುರುಷರ ವಿಭಾಗವು 15 ಸಾವಿರ ಚದರಡಿಗೂ ಅಧಿಕ ವಿಸ್ತೀರ್ಣ ಹೊಂದಿದ್ದು, ಅಲೈನ್ ಸೊಲ್ಲಿ, ಪೀಟರ್ ಇಂಗ್ಲೆಡ್, ಲಿವೈಸ್, ಬ್ಲ್ಯಾಕ್ ಬೆರ್ರಿ, ಕಿಲ್ಲರ್ ಸಹಿತ ಒಟ್ಟು 22ಕ್ಕೂ ಅಧಿಕ ವಿವಿಧ ಬ್ರ್ಯಾಂಡ್‌ಗಳ ಉತ್ಪನ್ನಗಳು ಇಲ್ಲಿವೆ. ಇತರ ಬ್ರ್ಯಾಂಡ್‌ಗಳ ಬಟ್ಟೆಗಳು ಇಲ್ಲಿವೆ. ಪ್ರತ್ಯೇಕ ಟೈಲರಿಂಗ್ ವಿಭಾಗವೂ ಇಲ್ಲಿದೆ. ಕಂಪೆನಿಯ ಆಫರ್‌ಗಳೂ ಗ್ರಾಹಕರಿಗೆ ನೇರವಾಗಿ ಸಿಗಲಿದೆ ಎಂದು ಪ್ರವರ್ತಕರು ತಿಳಿಸಿದರು.