Advertisement

Junior World Shooting: ಖುಷಿಗೆ ಕಂಚು

12:58 AM Oct 04, 2024 | Team Udayavani |

ಲಿಮಾ (ಪೆರು): ಐಎಸ್‌ಎಸ್‌ಎಫ್ ವಿಶ್ವ ಜೂನಿಯರ್‌ ಶೂಟಿಂಗ್‌ ಸ್ಪರ್ಧೆಯ ವನಿತೆಯರ 50ಮೀ. ರೈಫ‌ಲ್‌ 3 ಪೊಸಿಸನ್‌ನಲ್ಲಿ ಭಾರತದ ಖುಷಿ ಅವರು ಕಠಿನ ಹೋರಾಟದಲ್ಲಿ ಕಂಚಿನ ಪದಕ ಗೆದ್ದರು. ನಾಟಕೀಯ ರೀತಿಯಲ್ಲಿ ಫೈನಲಿಗೇರಿದ ಅವರು ತೀವ್ರ ಪೈಪೋಟಿಯ ಕಾದಾಟದಲ್ಲಿ ಮೂರನೇ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.

Advertisement

ಖುಷಿ ಅವರ ಈ ಪದಕದಿಂದಾಗಿ ಭಾರತದ ಪದಕಗಳ ಸಂಖ್ಯೆ 15ಕ್ಕೇರಿದೆ. ಇದರಲ್ಲಿ 10 ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕ ಸೇರಿದ್ದು ಪದಕಪಟ್ಟಿದಲ್ಲಿ ಅಗ್ರಸ್ಥಾನದಲ್ಲಿದೆ.

ಯುವ ಶೂಟರ್‌ ಖುಷಿ ಫೈನಲ್‌ನಲ್ಲಿ 447.3 ಅಂಕ ಪಡೆದು ಕಂಚಿನ ಪದಕ ಪಡೆದರು. ನಾರ್ವೆಯ ಕ್ಯಾರೋಲಿನ್‌ ಲುಂಡ್‌ 458.3 ಅಂಕದೊಂದಿಗೆ ಬೆಳ್ಳಿ ಮತ್ತು ಅದೇ ದೇಶದ ಸಿನ್ನೋವಿ ಬರ್ಗ್‌ 458.4 ಅಂಕದೊಂದಿಗೆ ಚಿನ್ನ ಗೆದ್ದರು.
ಖುಷಿ ಅವರ ಪದಕ ಗೆಲ್ಲುವ ದಾರಿ ಸುಲಭವಾಗಿರಲಿಲ್ಲ. ಅರ್ಹತಾ ಸುತ್ತಿನಲ್ಲಿ ಖುಷಿ ಜತೆ ಇತರ ನಾಲ್ವರು ತಲಾ 585 ಅಂಕ ಗಳಿಸಿದ್ದರು. ಆಬಳಿಕ ಇನ್ನೆರಡು ಅರ್ಹತಾ ಪ್ರಯತ್ನದಲ್ಲಿ ಖುಷಿ ಮತ್ತು ಇಟೆಲಿಯ ಅನ್ನಾ ಶಿಯಾವೋನ್‌ ತಲಾ 29 ಅಂಕ ಪಡೆದರು. ಆಬಳಿಕದ ಪ್ರಯತ್ನದಲ್ಲಿ ಅನ್ನಾ ಅವರನ್ನು ಹಿಂದಿಕ್ಕಿದ ಖುಷಿ ಫೈನಲಿಗೇರಿದರು. ಫೈನಲ್‌ನಲ್ಲಿಯೂ ಅವರು ಇತರ ಸ್ಪರ್ಧಿಗಳೊಂದಿಗೆ ತೀವ್ರ ಹೋರಾಡಿ ಕಂಚಿನ ಪದಕ ಗೆಲ್ಲಲು ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next