Advertisement

Bihar ಆತಿಥ್ಯದಲ್ಲಿ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ

11:42 PM Oct 06, 2024 | Team Udayavani |

ಭುವನೇಶ್ವರ: ಬಿಹಾರದ ರಾಜ್ಗಿರ್‌ನ ನೂತನವಾಗಿ ಕ್ರೀಡಾಂಗಣದಲ್ಲಿ ವನಿತಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಪಂದ್ಯಾವಳಿ ನಡೆಯಲಿದೆ.

Advertisement

ನ. 11ರಿಂದ 20ರ ತನಕ ನಡೆಯುವ ಈ ಕೂಟದಲ್ಲಿ ಭಾರತ ಸೇರಿದಂತೆ 6 ತಂಡಗಳು ಪಾಲ್ಗೊಳ್ಳಲಿವೆ. ಉಳಿದ ತಂಡಗಳೆಂದರೆ ಚೀನ, ಥಾಯ್ಲೆಂಡ್‌, ಮಲೇಷ್ಯಾ, ದಕ್ಷಿಣ ಕೊರಿಯಾ ಮತ್ತು ಜಪಾನ್‌. ಕೂಟದ ಲಾಂಛನವಾದ “ಗುಡಿಯಾ’ವನ್ನು ಮುಖ್ಯ ಮಂತ್ರಿ ನಿತೀಶ್‌ ಕುಮಾರ್‌ ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿದರು.

ಜೂನಿಯರ್‌ ಹಾಕಿ ತಂಡಕ್ಕೆ ಅಮಿರ್‌ ಅಲಿ ನಾಯಕ
ಬೆಂಗಳೂರು: “ಸುಲ್ತಾನ್‌ ಆಫ್ ಜೋಹರ್‌ ಕಪ್‌’ ಜೂನಿಯರ್‌ ಹಾಕಿ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಅಮಿರ್‌ ಅಲಿ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ವಿಶ್ವ ದರ್ಜೆಯ ಗೋಲ್‌ಕೀಪರ್‌ ಆಗಿದ್ದ ಪಿ.ಆರ್‌. ಶ್ರೀಜೇಶ್‌ ಈ ತಂಡದ ಕೋಚ್‌ ಆಗುವ ಮೂಲಕ ನೂತನ ಜವಾಬ್ದಾರಿ ವಹಿಸಲಿದ್ದಾರೆ.

ಈ ಪಂದ್ಯಾವಳಿ ಅ. 19ರಂದು ಮಲೇಷ್ಯಾದಲ್ಲಿ ಆರಂಭವಾಗಲಿದೆ. ಭಾರತ ತನ್ನ ಪಂದ್ಯಗಳನ್ನು ಗ್ರೇಟ್‌ ಬ್ರಿಟನ್‌ (ಅ. 20), ಮಲೇಷ್ಯಾ (ಅ. 22), ಆಸ್ಟ್ರೇಲಿಯ (ಅ. 23) ಮತ್ತು ನ್ಯೂಜಿಲ್ಯಾಂಡ್‌ (ಅ. 25) ವಿರುದ್ಧ ಆಡಲಿದೆ. ಅಗ್ರ 2 ತಂಡಗಳು ಅ. 26ರ ಫೈನಲ್‌ನಲ್ಲಿ ಸೆಣಸಲಿವೆ. ನವಂಬರ್‌ನಲ್ಲಿ ಮಸ್ಕತ್‌ನಲ್ಲಿ ನಡೆಯುವ ಜೂನಿಯರ್‌ ಏಷ್ಯಾ ಕಪ್‌ ಹಿನ್ನೆಲೆಯಲ್ಲಿ ಈ ಪಂದ್ಯಾವಳಿ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next