Advertisement

Junior ವಿಶ್ವ ಶೂಟಿಂಗ್‌: ಭಾರತಕ್ಕೆ ಎರಡು ಕಂಚು

12:15 AM Oct 01, 2024 | Team Udayavani |

ಲಿಮಾ (ಪೆರು): ಐಎಸ್‌ಎಸ್‌ಎಫ್ ಜೂನಿಯರ್‌ ವಿಶ್ವ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ 2 ಕಂಚಿನ ಪದಕ ಜಯಿಸಿದೆ.

Advertisement

10 ಮೀ. ಮಿಶ್ರ ಪಿಸ್ತೂಲ್‌ ತಂಡ ಸ್ಪರ್ಧೆಯಲ್ಲಿ ಗೌತಮಿ ಭಾನೋಟ್‌-ಅಜಯ್‌ ಮಲಿಕ್‌ ಕ್ರೊವೇಶಿಯಾದ ಅನಾಮರಿಜಾ ತುರ್ಕ್‌-ಡಾರ್ಕೊ ಟೊಮಸೆವಿಕ್‌ ವಿರುದ್ಧ 17-9 ಅಂತರದ ಗೆಲುವು ಸಾಧಿಸಿದರು. ಫ್ರಾನ್ಸ್‌ ತಂಡವನ್ನು ಪರಾಭವಗೊಳಿಸಿದ ಚೀನಕ್ಕೆ ಚಿನ್ನ ಒಲಿಯಿತು.ಮತ್ತೂಂದು ಮಿಶ್ರ ಡಬಲ್ಸ್‌ ಸ್ಪರ್ಧೆಯ ಆಲ್‌ ಇಂಡಿಯನ್‌ ಕಾಳಗದಲ್ಲಿ ಲಕ್ಷಿತಾ-ಪ್ರಮೋದ್‌ 16-8ರಿಂದ ಕಾನಿಷ್ಕಾ ಡಾಗರ್‌-ಮುಕೇಶ್‌ ನೇವಾವಲಿ ವಿರುದ್ಧ 16-8 ಮೇಲುಗೈ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next