Advertisement

Karkala: ರಾಷ್ಟ್ರಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಕಳದ ಅಮೂಲ್ಯ ಹೆಗ್ಡೆಗೆ ಕಂಚು

01:34 AM Oct 02, 2024 | Team Udayavani |

ಬೆಂಗಳೂರು/ಕಾರ್ಕಳ: ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ನ್ಯಾಶನಲ್‌ ಇನ್ನೋವೇಶನ್‌ ಫೌಂಡೇಶನ್‌ ಸಹಯೋಗದೊಂದಿಗೆ ಹೊಸದಿಲ್ಲಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ “ಇನ್‌ಸ್ಪೈರ್‌ ಮಾನಕ್‌ ಅವಾರ್ಡ್‌ ರಾಷ್ಟ್ರಮಟ್ಟದ ಸ್ಪರ್ಧೆ’ಯಲ್ಲಿ ಕಾರ್ಕಳದ ಅಮೂಲ್ಯ ಹೆಗ್ಡೆ ಸಹಿತ ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಕಂಚಿನ ಪದಕದೊಂದಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Advertisement

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಗ್ರಾಮೀಣ ಪ್ರದೇಶದ ಕುಕ್ಕುಜೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೂಲ್ಯ ಹೆಗ್ಡೆ ಸಿದ್ಧಪಡಿಸಿದ “ಫುಡ್‌ ಡಿಟೆಕ್ಟಿಂಗ್‌ ಪೋಲ್‌’ ಮಾದರಿಯನ್ನು ಪ್ರದರ್ಶಿಸಿ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಅದೇ ರೀತಿ, ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ವಲಯ-4ರಲ್ಲಿರುವ ವೈದೇಹಿ ಸ್ಕೂಲ್‌ ಆಫ್‌ ಎಕ್ಸಲೆನ್ಸ್ ನ ವಿದ್ಯಾರ್ಥಿನಿ ಈಶ್ವರಿ ಮೋರೆ ಸಿದ್ಧಪಡಿಸಿರುವ “ಫಾಲ್‌ ಡಿಟೆಕ್ಷನ್‌ ಇನ್‌ ದಿ ಟಾಯ್ಲೆಟ್‌ ಯೂಸಿಂಗ್‌ ಥರ್ಮಲ್‌ ಇಮೇಜಿಂಗ್‌’ ಮಾದರಿಯನ್ನು ಪ್ರದರ್ಶಿಸಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಒಟ್ಟು 39 ವಿದ್ಯಾರ್ಥಿಗಳು ಭಾಗವಹಿಸಿದ್ದು ಅತಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ವಿದ್ಯಾರ್ಥಿನಿಯರ ಈ ಸಾಧನೆ ಇತರ ವಿದ್ಯಾರ್ಥಿಗಳಿಗೆ ಮಾದರಿ ಎಂದು ಡಿಎಸ್‌ಇಆರ್‌ಟಿ ನಿರ್ದೇಶಕ ಎಚ್‌. ಎನ್‌. ಗೋಪಾಲಕೃಷ್ಣ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next