Advertisement

Asian games ಪುರುಷರ ಹಾಕಿ ಫೈನಲ್‌; ಭಾರತಕ್ಕೆ ಜಪಾನ್‌ ಸವಾಲು

10:47 PM Oct 05, 2023 | Team Udayavani |

ಹ್ಯಾಂಗ್‌ಝೂ: ಗೇಮ್ಸ್‌ನ ಪುರುಷರ ಹಾಕಿ ಸ್ಪರ್ಧೆಯ ಚಿನ್ನದ ಪದಕ ನಿರ್ಣಯ ಫೈನಲ್‌ ಹೋರಾಟವು ಶುಕ್ರವಾರ ನಡೆಯಲಿದೆ. ಚಿನ್ನದ ನಿರೀಕ್ಷೆಯಲ್ಲಿರುವ ಭಾರತೀಯ ತಂಡವು ಹಾಲಿ ಚಾಂಪಿಯನ್‌ ಜಪಾನ್‌ ತಂಡದ ಸವಾಲನ್ನು ಎದುರಿಸಬೇಕಾಗಿದೆ.

Advertisement

ಲೀಗ್‌ ಮತ್ತು ಸೆಮಿಫೈನಲ್‌ನಲ್ಲಿ ಅದ್ಭುತ ಆಟದ ಪ್ರದರ್ಶನ ನೀಡಿದ ಭಾರತೀಯ ತಂಡವು ಫೈನಲ್‌ನಲ್ಲೂ ಇದೇ ಉತ್ಸಾಹದಿಂದ ಆಡಿದರೆ ಗೆಲುವಿಗೆ ಪ್ರಯತ್ನಿಸಬಹುದು. ಈ ಮೂಲಕ 9 ವರ್ಷಗಳ ಹಿಂದೆ ಗಳಿಸಿದ ಚಿನ್ನವನ್ನು ಮರಳಿ ಪಡೆಯಬಹುದು.

ಭಾರತ ಈ ಹಿಂದೆ 2014ರ ಗೇಮ್ಸ್‌ನಲ್ಲಿ ಚಿನ್ನ ಜಯಿಸಿತ್ತು. ಈ ಬಾರಿ ಮರಳಿ ಪಡೆಯುವುದರ ಜತೆ ಮುಂದಿನ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಳಿಸುವುದು ಭಾರತದ ಗುರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next