Advertisement

Asian Games ಬಾಕ್ಸಿಂಗ್‌: ಲವ್ಲಿನಾ ಬೆಳ್ಳಿಗೆ ತೃಪ್ತಿ

11:17 PM Oct 04, 2023 | Team Udayavani |

ಹ್ಯಾಂಗ್‌ಝೂ: ಒಲಿಂಪಿಕ್ಸ್‌ ಪದಕ ವಿಜೇತೆ ಲವ್ಲಿನಾ ಬೊರ್ಗೊಹೇನ್‌ ವನಿತೆಯರ 75 ಕೆ.ಜಿ. ಫೈನಲ್‌ನಲ್ಲಿ ನೀರಸ ಪ್ರದರ್ಶನ ನೀಡಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಇನ್ನೊಂದು ಹೋರಾಟದಲ್ಲಿ ಪರ್ವೀಣ್‌ ಹೂಡಾ ಅವರು ಕಂಚಿನ ಪದಕ ಪಡೆದರು.

Advertisement

ಹಾಲಿ ವಿಶ್ವ ಚಾಂಪಿಯನ್‌ ಆಗಿರುವ ಲವ್ಲಿನಾ ಅವರು ಸ್ಥಳೀಯ ಫೇವರಿಟ್‌ ಮತ್ತು ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಲೀ ಕ್ವಿಯಾನ್‌ ಅವರೆದುರು ಕಳಪೆಯಾಗಿ ಆಡಿ ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡರು.

ವನಿತೆಯರ 57 ಕೆ.ಜಿ. ವಿಭಾಗದ ಸೆಮಿಫೈನಲ್‌ ಹೋರಾಟದಲ್ಲಿ ಪರ್ವೀಣ್‌ ಹೂಡಾ ಅವರು ಎರಡು ಬಾರಿಯ ವಿಶ್ವ ಚಾಂಪಿಯನ್‌ ಚೈನೀಸ್‌ ತೈಪೆಯ ಲಿನ್‌ ಯು ಟಿಂಗ್‌ ಅವರೆದುರು ಸೋತು ಕಂಚು ಪಡೆದರು.

ಲವಿÉನಾ ಅವರ ಸ್ಪರ್ಧೆಯೊಂದಿಗೆ ಬಾಕ್ಸಿಂಗ್‌ನಲ್ಲಿ ಭಾರತದ ಹೋರಾಟ ಅಂತ್ಯಗೊಂಡಿತು. ಬಾಕ್ಸರ್‌ಗಳು ಒಂದು ಬೆಳ್ಳಿ ಸೇರಿದಂತೆ ಐದು ಪದಕ ಗೆದ್ದರು. ಕಳೆದ ಗೇಮ್ಸ್‌ನಲ್ಲಿ ಭಾರತ ಒಂದು ಚಿನ್ನ ಮತ್ತು ಒಂದು ಕಂಚು ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next