Advertisement

ಏಶ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ : ಸೆಮಿಫೈನಲ್‌ಗೆ ಅಮಿತ್‌, ಸಾಕ್ಷಿ

02:04 AM May 27, 2021 | Team Udayavani |

ದುಬಾೖ : ಹಾಲಿ ಚಾಂಪಿಯನ್‌ ಅಮಿತ್‌ ಪಂಘಲ್‌ (52 ಕೆ.ಜಿ.) ಏಶ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಸೆಮಿಫೈನಲ್‌ಗೆ ತಲುಪಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ನಿರೀಕ್ಷೆ ಮೂಡಿಸಿದ್ದಾರೆ.

Advertisement

ಇದಕ್ಕೂ ಮೊದಲು ನಡೆದ ಸ್ಪರ್ಧೆಗಳಲ್ಲಿ ಜಯ ಸಾಧಿಸಿದ ಸಂಜೀತ್‌ (91 ಕೆ.ಜಿ.), ಸಾಕ್ಷಿ (54 ಕೆ.ಜಿ.), ಜಾಸ್ಮಿನ್‌ (57 ಕೆ.ಜಿ.), ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಿದ ಸಿಮ್ರನ್‌ಜಿàತ್‌ ಕೌರ್‌ (60 ಕೆ.ಜಿ.) ಮತ್ತು ಶಿವ ಥಾಪ (64 ಕೆ.ಜಿ.) ಕೂಡ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಬುಧವಾರದ ಕ್ವಾ. ಫೈನಲ್‌ನಲ್ಲಿ ಅಮಿತ್‌ ಮಂಗೋಲಿಯದ ಖಾಖುì ಎನ್‌ಕಮಾಂಡಖ್‌ ವಿರುದ್ಧ ಭಾರೀ ಹೋರಾಟ ನಡೆಸಿ 3-2 ಅಂತರದ ಜಯ ಸಾಧಿಸಿದರು. ಕೊನೆಯ ಎರಡು ಸುತ್ತುಗಳಲ್ಲಿ ಅಮಿತ್‌ ದಿಟ್ಟ ಪ್ರದರ್ಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next