Advertisement
ಜು. 9 ರಂದು ಕೊನೆಯ ದಿನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಮಿತಿ ಮತ್ತು ಜಿಎಫ್‌ಎ ಸಂಸ್ಥೆಗಳ ಆಶ್ರಯ ದಲ್ಲಿ ನಡೆದ ಹದಿನೇಳನೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳ ನದಲ್ಲಿ ಆರ್ಥಿಕ ರಾಜಧಾನಿ ಮುಂಬಯಿ ಮಹಾನಗರದ ಪ್ರಸಿದ್ಧ ಸಮಾಜ ಸೇವಕರಾದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ, ಕನ್ನಡ ಸಂಘ ಸಾಂತಾಕ್ರೂಜ್‌ನ ಅಧ್ಯಕ್ಷ ಎಲ್. ವಿ. ಅಮೀನ್, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್. ಬೆಳ್ಚಡ, ವಾಸ್ತುತಜ್ಞ ಪಂಡಿತ್ ನವೀನ್‌ಚಂದ್ರ ಆರ್. ಸನಿಲ್, ಎನ್. ಪಿ. ಸುವರ್ಣ, ಪಲ್ಲವಿ ಮಣಿ ಮತ್ತಿತರರ ಸಾಧನೀಯ ಸೇವೆಯನ್ನು ಪರಿಗಣಿಸಿ “ಏಯಾ ಪೆಸಿಫಿಕ್ ಅಚೀವರ್ ಅವಾರ್ಡ್’ನ್ನು ಸ್ವರ್ಣ ಪದಕದೊಂದಿಗೆ ಪ್ರದಾನಿಸಿ ಗೌರವಿಸಲಾಯಿತು.
ನಗರದ ಪ್ರಭಾ ಎನ್. ಸುವರ್ಣ, ಸುಧಾ ಎಲ್. ವಿ. ಅಮೀನ್, ದಿವಿಜಾ ಚಂದ್ರಶೇಖರ್ ಸೇರಿದಂತೆ ವಿವಿಧ ರಾಷ್ಟ್ರಗಳ ಗಣ್ಯರು ಉಪಸ್ಥಿತರಿದ್ದರು. ಜಿಎಎಫ್‌ನ ಸಂಜೀವ ಸೂರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಎಫ್‌ಎ ಕಾರ್ಯದರ್ಶಿ ಎ. ಕೆ. ಶರ್ಮ ವಂದಿಸಿದರು. ಉತ್ಸವದಲ್ಲಿ ಭಾರತೀಯ ಹಾಗೂ ಇತರ ರಾಷ್ಟ್ರಗಳ ತಂಡಗಳು ಭಾರತೀಯ ಸಂಸ್ಕೃತಿ ಸಾರುವ ವೈವಿಧ್ಯಮಯ ನೃತ್ಯಾವಳಿ, ನೃತ್ಯರೂಪಕ, ಜಾನಪದ ಮತ್ತು ಸಾಹಿತ್ಯಕ ಕಾರ್ಯಕ್ರಮಗಳ “ಸಾಂಸ್ಕೃತಿಕ ಸೌರಭ’ ಪ್ರಸುತಪಡಿಸಿದರು. ಐಸಿಎಫ್ ಪ್ರಧಾನ ಕಾರ್ಯದರ್ಶಿ ಗೋ. ನಾ. ಸ್ವಾಮಿ ಬೆಂಗಳೂರು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಚಿತ್ರ-ವರದಿ : ರೋನ್ಸ್ ಬಂಟ್ವಾಳ್