Advertisement
ಲಸಿತ ಮಾಲಿಂಗ ದಾಳಿಗೆ ಆರಂಭಿಕ ಕುಸಿತ ಕಂಡಿದ್ದ ಬಾಂಗ್ಲಾದೇಶವನ್ನು ಮುಶಫಿಕರ್ ರಹೀಂ ಆಧರಿಸಿದರು. ಅವರು ಮತ್ತು ಮೊಹಮ್ಮದ್ ಮಿಥುನ್ ಮೂರನೇ ವಿಕೆಟಿಗೆ ಸೇರಿಸಿದ ಶತಕದ ಜತೆಯಾಟದಿಂದಾಗಿ ಬಾಂಗ್ಲಾ ಚೇತರಿಸುವಂತಾಯಿತು. ಅಂತಿಮವಾಗಿ 49.3 ಓವರ್‌ಗಳಲ್ಲಿ 261 ರನ್ ಗಳಿಸಿ ಆಲೌಟಾಯಿತು.
ದೀರ್ಘ ಸಮಯದ ಬಳಿಕ ತಂಡಕ್ಕೆ ಮರಳಿದ್ದ ಲಸಿತ ಮಾಲಿಂಗ ಆರಂಭದಲ್ಲಿ ಬಾಂಗ್ಲಾ ಮೇಲೆ ಮಾರಕ ದಾಳಿ ಸಂಘಟಿಸಿದರು. ಆರಂಭಿಕ ತಮಿಮ್ ಇಕ್ಬಾಲ್ ಅವರನ್ನು ಗಾಯಗೊಳಿಸಿದ್ದ ಅವರು 1 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಹಾರಿಸಿದ್ದರು. ಈ ಆಘಾತದ ನಡುವೆಯೂ ಮುಶ್ಫಿàಕರ್ ರಹೀಂ ಎಚ್ಚರಿಕೆಯ ಆಟವಾಡಿದರು. ಅವರು ಮತ್ತು ಮಿಥುನ್ ಶ್ರೀಲಂಕಾ ದಾಳಿಯನ್ನು ಸಮರ್ಥವಾಗಿ ಎದುರಿಸಿ ಇನ್ನಿಂಗ್ಸ್ ಕಟ್ಟತೊಡಗಿದರು. ಮೂರನೇ ವಿಕೆಟಿಗೆ 131 ರನ್ನುಗಳ ಜತೆಯಾಟ ನಡೆಸಿದ ಅವರಿಬ್ಬರು ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದ ಈ ಜೋಡಿಯನ್ನು ಮತ್ತೆ ಮಾಲಿಂಗ ಮುರಿಯುವಲ್ಲಿ ಯಶಸ್ವಿಯಾದರು. 63 ರನ್ ಗಳಿಸಿದ ಮೊಹಮ್ಮದ್ ಮಿಥುನ್ ಅವರು ಮಾಲಿಂಗ ಅವರ ಮೂರನೇ ಬಲಿಯಾದರು. ಆಬಳಿಕ ಬಾಂಗ್ಲಾ ಮತ್ತೆ ಹಠಾತ್ ಕುಸಿಯತೊಡಗಿತು. 142 ರನ್ ತಲುಪುವಷ್ಟರಲ್ಲಿ ತಂಡ ಇನ್ನೆರಡು ವಿಕೆಟ್ ಕಳೆದುಕೊಂಡಿತು. ಆಬಳಿಕ ಮುಶ್ಫಿàಕರ್ ಬಾಲಂಗೋಚಿಗಳ ನೆರವು ಪಡೆದು ತಂಡದ ಮೊತ್ತ ಏರಿಸಲು ಪ್ರಯತ್ನಿಸಿದರು. ವೈಯಕ್ತಿಕವಾಗಿ ಶತಕ ಪೂರೈಸಿದ ಬಳಿಕ ಸ್ಫೋಟಕವಾಗಿ ಆಡಿದರು.
Related Articles
Advertisement
ತಮಿಮ್ ಇಕ್ಬಾಲ್‌ಗೆ ಗಾಯಢಾಕಾ: ಬಾಂಗ್ಲಾದೇಶ ಆರಂಭಿಕ ತಮಿಮ್ ಇಕ್ಬಾಲ್ ಅವರು ಶ್ರೀಲಂಕಾ ವಿರುದ್ಧ ಶನಿವಾರ ನಡೆದ ಏಶ್ಯಕಪ್ ಕ್ರಿಕೆಟ್ ಕೂಟದ ಆರಂಭಿಕ ಪಂದ್ಯದ ವೇಳೆ ಎಡಕೈಗೆ ಗಾಯ ಮಾಡಿಕೊಂಡಿದ್ದಾರೆ. ಕಡಿಮೆಪಕ್ಷ ಆರು ವಾರ ವಿಶ್ರಾಂತಿ ಪಡೆಯಬೇಕಾಗಿದೆ. ಅವರು ಬಾಂಗ್ಲಾ ಇನ್ನಿಂಗ್ಸ್‌ನ ಕೊನೆಯಲ್ಲಿ ಆಡಲು ಬಂದಿದ್ದರು. ಅವರು ಈ ಸರಣಿಯಲ್ಲಿ ಆಡುವುದು ಅನುಮಾನವಾಗಿದೆ.
ದ್ವಿತೀಯ ಓವರ್ ವೇಳೆ ಸುರಂಗ ಲಕ್ಮಲ್ ಅವರ ಎಸೆತವೊಂದು ಇಕ್ಬಾಲ್ ಅವರ ಎಡ ಕೈಗೆ ಬಡಿದಿತ್ತು. ತತ್‌ಕ್ಷಣವೇ ಫಿಸಿಯೋ ಅವರಿಗೆ ಬರುವಂತೆ ಸನ್ನೆ ಮಾಡಿದರು. ಆಬಳಿಕ ಆಸ್ಪತ್ರೆಗೆ ಕೊಂಡೊಯ್ದು ಸ್ಕ್ಯಾನ್ ನಡೆಸಲಾಯಿತು. ತೋರು ಬೆರಳಿನ ಬದಿ ಕ್ರ್ಯಾಕ್ ಆಗಿರುವುದು ಸ್ಕ್ಯಾನ್‌ನಲ್ಲಿ ಗೋಚರಿಸಿದ್ದು ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ಇಕ್ಬಾಲ್ ಗಾಯಗೊಂಡಿರುವುದು ಬಾಂಗ್ಲಾಕ್ಕೆ ಬಲವಾದ ಹೊಡೆತ ಬಿದ್ದಿದೆ.