Advertisement
ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬಾಂಗ್ಲಾದೇಶ ತಂಡ ನಾಯಕ ಶಕೀಬ್ ಅಲ್ ಹಸನ್ ಮತ್ತು ತೋವಿದ್ ಹೃದಯ್ ಅವರ ಅರ್ಧಶತಕಗಳ ನೆರವಿನಿಂದ ಭಾರತದ ವಿರುದ್ಧ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು.
Related Articles
Advertisement
9 ಬಾಲ್ ಗೆ 12 ರನ್ ಅಗತ್ಯವಿದ್ದ ವೇಳೆ 42 ರನ್ ಗಳಿಸಿ ಭರವಸೆಯಾಗಿ ಆಡುತ್ತಿದ್ದ ಅಕ್ಷರ್ ಪಟೇಲ್ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತು ನಿರ್ಗಮಿಸಿದರು. ಶಮಿ ಅವರಿಗೆ ಕೊನೆಯಲ್ಲಿ ದೊಡ್ಡ ಹೊಡೆತಗಳ ಮೂಲಕ ಗೆಲುವು ತಂದುಕೊಡುವುದು ಸಾಧ್ಯವಾಗಲಿಲ್ಲ.
ಅಮೋಘ ಶತಕ ಸಿಡಿಸಿದ ಗಿಲ್
ಆರಂಭಿಕನಾಗಿ ಬಂದ ಶುಭಮನ್ ಗಿಲ್ ಒಂದೊಂದೇ ವಿಕೆಟ್ ಉದುರುತ್ತಿದ್ದರೂ ನೆಲಕಚ್ಚಿ ನಿಂತು ಜವಾಬ್ದಾರಿಯುತ ಆಟವಾಡಿದರು. 121(133 ಎಸೆತ) ರನ್ ಗಳಿಸುವ ಮೂಲಕ ಈ ಏಷ್ಯಾ ಕಪ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಮಹೇದಿ ಹಸನ್ ಎಸೆದ ಚೆಂಡನ್ನು ತೌಹಿದ್ ಹೃದಯ್ ಕೈಗಿತ್ತು ನಿರ್ಗಮಿಸಿದರು. ಗಿಲ್ ಅವರ ಇನ್ನಿಂಗ್ಸ್ ನಲ್ಲಿ 8 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಒಳಗೊಂಡಿತ್ತು.
ಶಕೀಬ್, ಹೃದಯ್ ಅರ್ಧ ಶತಕಶಕೀಬ್ (85 ಎಸೆತಗಳಲ್ಲಿ 80) ಮತ್ತು ಟೋವಿಡ್ ಹೃದಯ್ (81 ಎಸೆತಗಳಲ್ಲಿ 54 ರನ್ ) ಆರಂಭಿಕ ವಿಕೆಟ್‌ಗಳು ಪತನ ಗೊಂಡ ಬಳಿಕ ತಂಡಕ್ಕೆ ಆಧಾರವಾದರು. ನಸುಮ್ ಅಹ್ಮದ್ 44, ಮಹೇದಿ ಹಸನ್ 29 ಮತ್ತು ತಂಜಿಮ್ ಹಸನ್ ಸಾಕಿಬ್ 14 ರನ್ ಗಳಿಸಿ ಔಟಾಗದೆ ಉಳಿದರು. ಭಾರತದ ಪರ ವೇಗಿಗಳಾದ ಮೊಹಮ್ಮದ್ ಶಮಿ (2/32), ಶಾರ್ದೂಲ್ ಠಾಕೂರ್ (3/65) ಮತ್ತು ಪ್ರಸಿದ್ಧ್ ಕೃಷ್ಣ (1/43) ಆರು ವಿಕೆಟ್‌ಗಳನ್ನು ಹಂಚಿಕೊಂಡರು.