Advertisement

Women’s Asia Cup ಇಂದು ಸೆಮಿಫೈನಲ್‌ ಹೋರಾಟ: ಭಾರತ vs ಬಾಂಗ್ಲಾ, ಪಾಕ್‌ vs ಲಂಕಾ

11:38 PM Jul 25, 2024 | Team Udayavani |

ಡಂಬುಲ: ವನಿತಾ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ಸೆಮಿಫೈನಲ್‌ ಹೋರಾಟ ಶುಕ್ರವಾರ ಡಂಬುಲದಲ್ಲಿ ನಡೆಯಲಿದೆ. ಮೊದಲ ಸೆಮಿಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ಹಾಟ್‌ ಫೇವರಿಟ್‌ ಭಾರತವು ಬಾಂಗ್ಲಾದೇಶವನ್ನು ಎದುರಿಸಲಿದೆ. ಎರಡನೇ ಸೆಮಿಫೈನಲ್ಸ್‌ ಪಾಕಿಸ್ಥಾನ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಜು. 28ರಂದು ಫೈನಲ್‌ ಹೋರಾಟ ಜರಗಲಿದೆ.

Advertisement

ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠ ಆಟಗಾರ್ತಿಯರನ್ನು ಒಳಗೊಂಡ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಲೀಗ್‌ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಅಮೋಘ ಗೆಲುವು ದಾಖಲಿಸಿದ ಭಾರತ ಸೆಮಿಫೈನಲಿಗೇರಿದೆ. ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮ ಮತ್ತು ಸ್ಮತಿ ಮಂಧನಾ ಅವರ ಪ್ರಚಂಡ ಫಾರ್ಮ್ ಸೆಮಿಫೈನಲ್‌ನಲ್ಲೂ ಮುಂದುವರಿಯುವ ನಿರೀಕ್ಷೆಯಿದೆ.

ಒಟ್ಟಾರೆ 158 ರನ್‌ ಗಳಿಸಿರುವ ಶಫಾಲಿ ಈ ಕೂಟದಲ್ಲಿ ಗರಿಷ್ಠ ರನ್‌ ಗಳಿಸಿದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ನಿಗರ್‌ ಸುಲ್ತಾನಾ ನೇತೃತ್ವದ ತಂಡದ ನಿಧಾನಗತಿಯ ಬೌಲರಗಳ ದಾಳಿಯನ್ನು ಸಮರ್ಥವಾಗಿ ಎದುರಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸುವ ಸಾಧ್ಯತೆಯಿದೆ. ಆದರೆ ಹರ್ಮನ್‌ಪ್ರೀತ್‌ ಕೌರ್‌ ಪಡೆ ಬಾಂಗ್ಲಾವನ್ನು ಹಗುರವಾಗಿ ಕಾಣುವ ಸಾಧ್ಯತೆಯಿಲ್ಲ. ಕೆಲವೊಂದು ದಿನ ಬಾಂಗ್ಲಾ ಅಪಾಯಕಾರಿ ತಂಡವಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂಬುದನ್ನು ಭಾರತೀಯ ತಂಡ ತಿಳಿದಿದೆ.

ಲೀಗ್‌ ಹಂತದಲ್ಲಿ ಭಾರತವು ಅನುಕ್ರಮವಾಗಿ ಪಾಕಿಸ್ಥಾನ, ಯುಎಇ ಮತ್ತು ನೇಪಾಲ ತಂಡವನ್ನು ಅಧಿಕಾರಯುತವಾಗಿ ಸೋಲಿಸಿದ ಸಾಧನೆ ಮಾಡಿ ಅಜೇಯ ತಂಡವಾಗಿ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಶಫಾಲಿ, ಸ್ಮತಿ ಅವರಲ್ಲದೇ ಹರ್ಮನ್‌ಪ್ರೀತ್‌, ರಿಚಾ ಘೋಷ್‌, ದೀಪ್ತಿ ಶರ್ಮ, ಜೆಮಿಮಾ ರಾಡ್ರಿಗಸ್‌, ಪೂಜಾ ವಸ್ತ್ರಾಕರ್‌ ಉತ್ತಮ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್‌ನಲ್ಲಿಯೂ ಭಾರತೀಯ ತಂಡ ಬಲಿಷ್ಠವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next