Advertisement

Asia Cup: ಭಾರತಕ್ಕೆ 8ನೇ ಬಾರಿ ಪ್ರಶಸ್ತಿ: ನಿರ್ಮಾಣಗೊಂಡ ಹಲವು ದಾಖಲೆಗಳ ಪಟ್ಟಿ ಇಲ್ಲಿದೆ

09:30 PM Sep 17, 2023 | Team Udayavani |

ಕೊಲಂಬೊ: ಏಷ್ಯಾಕಪ್‌ನ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಭಾರತ 10 ವಿಕೆಟ್‌ಗಳಿಂದ ದಾಖಲೆಯ ಜಯ ಸಾಧಿಸಿ ಐದು ವರ್ಷಗಳ ನಂತರ ಪ್ರಶಸ್ತಿ ಎತ್ತಿಹಿಡಿಯುವುದರೊಂದಿಗೆ ಹಲವು ದಾಖಲೆಗಳು ಪತನಗೊಂಡಿವೆ. ಅವುಗಳ ವಿವರ ಹೀಗಿದೆ.

Advertisement

ಶ್ರೀಲಂಕಾ ತನ್ನ ಐದನೇ ವಿಕೆಟ್ (12ಕ್ಕೆ5) ಪತನದ ನಂತರ ಭಾರತದ ವಿರುದ್ಧ ತನ್ನ ಕಡಿಮೆ ಏಕದಿನ ಸ್ಕೋರ್ ದಾಖಲಿಸಿತು.

12ಕ್ಕೆ 6, ಲಂಕಾ ಐಸಿಸಿ ಪೂರ್ಣ-ಸದಸ್ಯ ರಾಷ್ಟ್ರದ ಎದುರು ಆರನೇ ವಿಕೆಟ್ ಪತನದ ಸಮಯದಲ್ಲಿ ಕಡಿಮೆ ಏಕದಿನ ಸ್ಕೋರ್ ದಾಖಲಿಸಿತು.

ಸಿರಾಜ್ ತಮ್ಮ 50 ನೇ ಏಕದಿನ ವಿಕೆಟ್ ಪಡೆದರು, ಇದು 1,002 ಎಸೆತಗಳಲ್ಲಿ ಬಂದಿತು, ಏಕದಿನ ಸ್ವರೂಪದಲ್ಲಿ ಈ ದಾಖಲೆ ಮಾಡಿದ ಎರಡನೇ ವೇಗದ ಬೌಲರ್. ಈ ದಾಖಲೆ ಅಜಂತಾ ಮೆಂಡಿಸ್ (847 ಎಸೆತ) ಹೆಸರಿನಲ್ಲಿದೆ. ಮೆಂಡಿಸ್ ನಂತರ ಏಷ್ಯಾ ಕಪ್ ಏಕದಿನ ಪಂದ್ಯದಲ್ಲಿ ಆರು ವಿಕೆಟ್ ಗಳಿಸಿದ ಎರಡನೇ ಬೌಲರ್ ಸಿರಾಜ್.

ಆರಂಭಿಕ ಹತ್ತು ಓವರ್‌ಗಳಲ್ಲಿ ಭಾರತ ಆರು ವಿಕೆಟ್‌ಗಳನ್ನು ಕಬಳಿಸಿತು, ಇದು ಇಲ್ಲಿಯವರೆಗೆ ಏಕದಿನ ಪಂದಯದಲ್ಲಿ ಅಗ್ರ ಸಾಧನೆ.

Advertisement

ಈ ಪಂದ್ಯದಲ್ಲಿ ಲಂಕಾದ ಒಟ್ಟು ಸ್ಕೋರ್ 50. ಭಾರತದ ವಿರುದ್ಧ ಏಕದಿನ ಸ್ವರೂಪದಲ್ಲಿ ಅತ್ಯಂತ ಕಡಿಮೆ ಮೊತ್ತ ಅಲ್ಲದೆ, ಇಲ್ಲಿಯವರೆಗಿನ ಯಾವುದೇ ಏಕದಿನ ಫೈನಲ್‌ನಲ್ಲಿ ಅತ್ಯಂತ ಕಡಿಮೆ ಮೊತ್ತ.

ಸಿರಾಜ್ ಅವರ 21 ರನ್ ಗಳಿಗೆ 6 ವಿಕೆಟ್ ಗಳಿಸಿದ್ದು, ಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಬೌಲರ್‌ ಒಬ್ಬರ ಅತ್ಯುತ್ತಮ ಸಾಧನೆಯಾಗಿದೆ.

ಏಕದಿನ ಇತಿಹಾಸದಲ್ಲಿ ವೇಗಿಗಳು ಎಲ್ಲಾ ಹತ್ತು ವಿಕೆಟ್‌ಗಳನ್ನು ಪಡೆದಿದ್ದು ಇದು ಎರಡನೇ ಬಾರಿ. ಪಾಕಿಸ್ಥಾನದ ಸೀಮರ್‌ಗಳು ವಾಶ್ ಔಟ್ ಗ್ರೂಪ್ ಮ್ಯಾಚ್‌ನಲ್ಲಿ ಭಾರತದ ವಿರುದ್ಧ ಈ ಸಾಧನೆಯನ್ನು ಮಾಡಿದ ಇನ್ನೊಂದು ಉದಾಹರಣೆಯೂ ಇದೆ.

ಶ್ರೀಲಂಕಾ ಏಕದಿನ ಪಂದ್ಯವೊಂದರಲ್ಲಿ (15.2) ಅತ್ಯಂತ ಕಡಿಮೆ ಓವರ್‌ಗಳಲ್ಲಿ ಸರ್ವಪತನ ಕಂಡ ಏಷ್ಯಾದ ಪೂರ್ಣ ಸದಸ್ಯ ತಂಡವಾಗಿದೆ.

1993 ರ ಹೀರೋ ಕಪ್ ಫೈನಲ್‌ನಲ್ಲಿ ಅನಿಲ್ ಕುಂಬ್ಳೆ 12ಕ್ಕೆ 6 ರನ್ ಗಳಿಸಿದ ನಂತರ ಸಿರಾಜ್ ಅವರ ಏಕದಿನ ಫೈನಲ್‌ನಲ್ಲಿ ಅತ್ಯುತ್ತಮವಾದ ಸಾಧನೆ

ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸಿರಾಜ್ ಕೇವಲ 16 ಎಸೆತಗಳನ್ನು ಎಸೆದು ತಮ್ಮ ಐದನೇ ವಿಕೆಟ್ ಅನ್ನು ಕಬಳಿಸಿದರು, ಇದು ಏಕದಿನದಲ್ಲಿ ಮೊದಲ ಸಾಧನೆಯಾಗಿದೆ.

ಆಶಿಶ್ ನೆಹ್ರಾ ನಂತರ ಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಆರು ವಿಕೆಟ್ ಪಡೆದ ಎರಡನೇ ಬೌಲರ್ ಸಿರಾಜ್.

ಭಾರತವು ಎರಡು ಸಂದರ್ಭಗಳಲ್ಲಿ ಹತ್ತು ವಿಕೆಟ್‌ಗಳಿಂದ ಏಕದಿನ ಫೈನಲ್‌ನಲ್ಲಿ ಗೆದ್ದ ಏಕೈಕ ತಂಡವಾಗಿದೆ, 1998 ರಲ್ಲಿ ಶಾರ್ಜಾದಲ್ಲಿ ಜಿಂಬಾಬ್ವೆ ವಿರುದ್ಧ (197 ಕ್ಕೆ 0) ಇನ್ನೊಂದು ಪಂದ್ಯವಾಗಿದೆ.

ಬಾಕಿ ಉಳಿದ (263) ಬಾಲ್‌ಗಳ ವಿಷಯದಲ್ಲಿ ಭಾರತದ ಅತಿ ದೊಡ್ಡ ಏಕದಿನ ಪಂದ್ಯದ ಗೆಲುವಾಗಿದೆ , ಜತೆಗೆ ಏಕದಿನ ಫೈನಲ್‌ನಲ್ಲಿ ಅತಿ ದೊಡ್ಡ ಗೆಲುವಾಗಿದೆ.

ಭಾರತ ತಂಡ ಆಡಿರುವ ಅತ್ಯಂತ ಸಂಕ್ಷಿಪ್ತ ಏಕದಿನ ಪಂದ್ಯವಾಗಿದೆ, ಕೇವಲ 129 ಎಸೆತಗಳನ್ನು ಮಾತ್ರ ಬೌಲ್ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next