ಮನೆ, ಸ್ನೇಹಿತರು ಹೀಗೆ ಎಲ್ಲರೂ, ಎಲ್ಲವನ್ನೂ ಕಳೆದುಕೊಂಡು ಬೀದಿಗೆಬಿದ್ದ ಕುಟುಂಬಗಳಿಗೆ ಸೂರು ಕಲ್ಪಿಸಲು ಜಾರಿಗೆ ಬಂದ ‘ಆಶ್ರಯ ಕೇಂದ್ರ’ ಯೋಜನೆ ಈಗ ಆಮೆವೇಗ ಪಡೆದುಕೊಂಡಿದೆ. ಸಮೀಕ್ಷೆೆ ಕಾರ್ಯವೂ ಸಕಾಲದಲ್ಲಿ ನಡೆಯುತ್ತಿಲ್ಲ. ಹೀಗಾಗಿ, ಈಗಲೂ ಸಾವಿರಾರು ಜನ ರಸ್ತೆೆಗಳಲ್ಲೇ ಕಾಲ ಕಳೆಯುವಂತಾಗಿದೆ. ನಗರದಲ್ಲಿರುವ ನಿರ್ಗತಿಕರು, ನಿರ್ಗತಿಕ ಕೇಂದ್ರ ಹಾಗೂ ಅಲ್ಲಿನ ವ್ಯವಸ್ಥೆೆಯ ವಸ್ತುಸ್ಥಿಿತಿಯ ಬಗ್ಗೆೆ ಬೆಳಕುಚೆಲ್ಲುವ ಪ್ರಯತ್ನ ಈ ಬಾರಿಯ ‘ಸುದ್ದಿ ಸುತ್ತಾಟದಲ್ಲಿ…
ನಿರ್ಗತಿಕರಿಗೆ ಸೂರು ಕಲ್ಪಿಸಲು ‘ವಸತಿರಹಿತ ಆಶ್ರಯ ಕೇಂದ್ರ’ ಸೇರಿದಂತೆ ಹಲವಾರು ಯೋಜನೆಗಳಿವೆ. ಅವುಗಳ ಅನುಷ್ಠಾಾನಕ್ಕಾಾಗಿ ಕೋಟ್ಯಂತರ ರೂ. ಹರಿಯುತ್ತದೆ. ಆದರೂ ಇವರಿಗೆ ಭೂಮಿಯೇ ಹಾಸಿಗೆ, ಮೇಲ್ಸೇತುವೆಗಳೇ ಹೊದಿಕೆಗಳು!
ಸಾರ್ವಜನಿಕ ಸ್ಥಳಗಳಲ್ಲಿ ವಾಸಿಸುವ ನಗರದ ಸಾವಿರಾರು ಕುಟುಂಬಗಳಿಗೆ ಆಶ್ರಯ ಕಲ್ಪಿಿಸುವ ಆಶ್ರಯ ಕೇಂದ್ರಕ್ಕೆ ಅಕ್ಷರಶಃ ಗ್ರಹಣ ಹಿಡಿದಿದೆ ಪರಿಣಾಮ ಈಗಲೂ ನಿರ್ಗತಿಕರು ರಸ್ತೆೆ ಬದಿ, ಬಸ್ ನಿಲ್ದಾಾಣ, ಮೇಲ್ಸೇತುವೆ ಕೆಳಗೆ ಎಲ್ಲೆೆಂದರಲ್ಲಿ ಆಶ್ರಯ ಪಡೆದುಕೊಳ್ಳುವ ಅನಿವಾರ್ಯ ಸ್ಥಿಿತಿ ಸೇರಿದಂತೆ ಬಯಲು ಪ್ರದೇಶದಲ್ಲಿ ವಾಸಿಸುವವರಿಗೆ ವಸತಿ ರಹಿತ ಆಶ್ರಯ ಕೇಂದ್ರ ಆಸರೆ ಆಗಬೇಕಾಗಿತ್ತು. ಆದರೆ, ಸಕಾಲದಲ್ಲಿ ನಗರದಲ್ಲಿರುವ ನಿರಾಶ್ರಿಿತರ ಬಗ್ಗೆ ಸರ್ವೇ ಕಾರ್ಯ ನಡೆಯದಿರುವುದು ಹಾಗೂ ಸರ್ವೇ ವರದಿಯ ಆಧಾರದ ಮೇಲೆ ಯೋಜನೆ ರೂಪಿಸಿಕೊಳ್ಳಲು ಪಾಲಿಕೆ ವಿಫಲವಾಗುತ್ತಿರುವುದರಿಂದ ನಿರ್ಗತಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಿಸುವುದು ಕನಸಾಗಿಯೇ ಉಳಿದಿದೆ.
ಒಂದು ಲಕ್ಷ ಜನ ಸಂಖ್ಯೆೆಗೆ 50 ಹಾಸಿಗೆಗಳ ಸಾಮರ್ಥ್ಯ ಇರುವಂತೆ ಒಂದು ನಿರಾಶ್ರಿತ ಕೇಂದ್ರ ನಿರ್ಮಾಣ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ಮಾಡಿದೆ. ಬೆಂಗಳೂರಿನ ಜನಸಂಖ್ಯೆ 1.30 ಕೋಟಿ ಇದೆ. ನಗರದಲ್ಲಿ ಕೇವಲ 10 ವಸತಿ ರಹಿತ ಕೇಂದ್ರಗಳಿದ್ದು, ಈ ಕೇಂದ್ರಗಳ ಜನ ಸಂಖ್ಯೆ ಸಾಮರ್ಥ್ಯ 777 ಮಾತ್ರ. ಬಿಬಿಎಂಪಿ, ಸ್ವಯಂ ಸೇವಾ ಸಂಸ್ಥೆೆ- ಸಂಘಗಳ ಸಹಕಾರದೊಂದಿಗೆ 2019-20ನೇ ಸಾಲಿನಲ್ಲಿ ಪಾಲಿಕೆಯ 198 ವಾರ್ಡ್‌ಗಳಲ್ಲಿ ನಿರ್ಗತಿಕರ ಸರ್ವೇ ನಡೆಸಿತ್ತು. ಈ ವೇಳೆ ನಗರದಲ್ಲಿ 4,246 ಜನ ನಿರ್ಗತಿಕರು ಇರುವುದು ಬೆಳಕಿಗೆ ಬಿಂದಿತ್ತು.
20ರಲ್ಲಿ ಒಂದೂ ಆಗಲಿಲ್ಲ! :
ನಗರದಲ್ಲಿ ಮಾರ್ಚ್ ಒಳಗಾಗಿ 20 ನಿರಾಶ್ರಿತ ಕೇಂದ್ರ ನಿರ್ಮಾಣ ಮಾಡುವುದಾಗಿ ಸ್ವತಂತ್ರ್ಯ ನಿಷ್ಪಕ್ಷಪಾತ ಸಮಿತಿಗೆ ಪಾಲಿಕೆಯ ಅಧಿಕಾರಿಗಳು 2020ರ ಡಿಸೆಂಬರ್‌ನಲ್ಲಿ ನಡೆದ ಸಭೆಯಲ್ಲಿ ಹೇಳಿದ್ದರು. ಆದರೆ, ಇದುವರೆಗೆ ಹೊಸದಾಗಿ ಯಾವುದೇ ನಿರಾಶ್ರಿಿತ ಕೇಂದ್ರ ಪ್ರಾಾರಂಭಿಸಿಲ್ಲ. ಅಲ್ಲದೆ, ನಗರದ ಕುಂಬಾರಗುಂಡಿಯಲ್ಲಿ ತಲಾ 50 ಜನ ನಿರ್ಗತಿಕರಿಗೆ ಆಶ್ರಯ ಕಲ್ಪಿಸುವ ಎರಡು ಮತ್ತು ತುಳಸಿ ತೋಟದಲ್ಲಿ 50 ಜನ ನಿರ್ಗತಿಕರಿಗೆ ಆಶ್ರಯ ಕಲ್ಪಿಸುವ ಒಂದು ನಿರ್ಗತಿಕರ ಕೇಂದ್ರ ಪ್ರಾಾರಂಭಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕೇಂದ್ರಗಳಲ್ಲಿ ನಿರ್ಗತಿಕರಿಗೆ ಆಶ್ರಯ ಕಲ್ಪಿಿಸಲು ಸಿದ್ಧವಾಗಿದ್ದರೂ, ಇದರ ನಿರ್ವಹಣೆ ಟೆಂಡರ್ ಪ್ರಕ್ರಿಯೆಯಲ್ಲಿ ಜಾರಿ ಯಲ್ಲಿರುವುದರಿಂದ ನಿರ್ಗತಿಕರ ಕೇಂದ್ರ ಪ್ರಾಾರಂಭವಾಗಿಲ್ಲ ಎನ್ನುತ್ತಾರೆ ಪಾಲಿಕೆಯ ಅಧಿಕಾರಿಗಳು. ಈ ಕೇಂದ್ರಗಳನ್ನು ಜನವರಿಯಲ್ಲಿ ಒಂದು ಮತ್ತು ಮಾರ್ಚ್ ಮೊದಲು ಪ್ರಾಾರಂಭಿಸುವುದಾಗಿ ಹೇಳಲಾಗಿತ್ತು. ನಗರದ ಕೇಂದ್ರ ಭಾಗದಲ್ಲೇ ಇರುವ ಈ ಎರಡು ನಿರಾಶ್ರಿಿತ ಕೇಂದ್ರಗಳು ಪ್ರಾರಂಭವಾದರೆ 150 ಜನ ನಿರ್ಗತಿಕರಿಗೆ ಆಶ್ರಯ ತಾಣವಾಗಲಿದೆ.
ಮಹಿಳಾ ನಿರ್ಗತಿಕರ ಕೇಂದ್ರಕ್ಕೂ ಆದ್ಯತೆ ನೀಡಿಲ್ಲ: ನಗರದಲ್ಲಿ ಪುರುಷರ ಜತೆಗೆ ಮಹಿಳಾ ನಿರ್ಗತಿಕರು ಸಹ ಇದ್ದಾಾರೆ. 2019ರಲ್ಲಿ ಸರ್ವೇ ಮಾಡಿದ ಸಂದರ್ಭದಲ್ಲಿ ನಗರದಲ್ಲಿ 857 ಜನ ಮಹಿಳಾ ನಿರ್ಗತಿಕರು ಇರುವುದು ಬೆಳಕಿಗೆ ಬಂದಿದೆ. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ ಮೂರು ಮತ್ತೊಂದು ಕೇಂದ್ರಗಳಷ್ಟೇ ಇವೆ. ಇದರಲ್ಲಿ ಪೂರ್ವ ವಲಯದ ಮರ್ಫಿಟೌನ್‌ನ ನಿರ್ಗತಿಕರ ಕೇಂದ್ರ ಹಾಗೂ ಯಲಹಂಕದ ಒಂದು ನಿರ್ಗತಿಕರ ಕೇಂದ್ರದ ಒಂದು ಭಾಗ ಮಾತ್ರ ಮಹಿಳಾ ನಿರ್ಗತಿಕರಿಗೆ ಮೀಸಲಿಡಲಾಗಿದೆ. ನಗರದಲ್ಲಿ ಮಹಿಳಾ ನಿರ್ಗತಿಕರಿಗೆ ಕನಿಷ್ಠ 16 ‘ವಸತಿ ರಹಿತಿ ಆಶ್ರಯ ಕೇಂದ್ರ’ ನಿರ್ಮಾಣ ಮಾಡುವ ಅವಶ್ಯಕತೆ ಇದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಅವಶ್ಯಕತೆಯ ಸಂಖ್ಯೆ ಇನ್ನು ಹೆಚ್ಚಾಾಗಿರುವ ಸಾಧ್ಯತೆ ಇದೆ. ಆದರೆ, ನಗರದಲ್ಲಿರುವ ಮಹಿಳಾ ನಿರ್ಗತಿಕರಿಗೆ ಪ್ರತ್ಯೇಕ ಕೇಂದ್ರ ಸ್ಥಾಾಪನೆ ಮಾಡುವ ನಿಟ್ಟಿನಲ್ಲಿ ಇಲ್ಲಿಯವರೆಗೆ ಪಾಲಿಕೆಯಿಂದ ಯಾವುದೇ ಪ್ರಗತಿ ಆಗಿಲ್ಲ. ಹೀಗಾಗಿ, ನಗರದಲ್ಲಿ ಮಹಿಳಾ ನಿರ್ಗತಿಕರಗೆ ಭದ್ರತೆ ಮತ್ತುಆಶ್ರಯ ಕಲ್ಪಿಸುವುದರಲ್ಲೂ ಹಿನ್ನಡೆ ಆಗಿದೆ.
ಸ್ವತಂತ್ರ್ಯ ನಿಷ್ಪಕ್ಷಪಾತ ಸಮಿತಿ ನಿರ್ದೇಶನ ಪಾಲಿಸಿಲ್ಲ: ನಗರದಲ್ಲಿರುವ ನಿರ್ಗತಿಕರ ಬಗ್ಗೆೆ ಫೆ.ಯಲ್ಲಿ ಸರ್ವೇ ಮಾಡುವಂತೆ ಸ್ವತಂತ್ರ್ಯ ನಿಷ್ಪಕ್ಷಪಾತ ಸಮಿತಿ ಪಾಲಿಕೆಗೆ ನಿರ್ದೇಶನ ನೀಡಿತ್ತು. ಆದರೆ, ನಗರದಲ್ಲಿರುವ ನಿರ್ಗತಿಕರ ಬಗ್ಗೆ ಇಲ್ಲಿಯವರೆಗೆ ಸರ್ವೇ ಕಾರ್ಯ ಪ್ರಾಾರಂಭವಾಗಿಲ್ಲ. ನಿವೃತ್ತ ನ್ಯಾಾಯಾಧೀಶರ ನೇತೃತ್ವದ ಸ್ವತಂತ್ರ್ಯ ನಿಷ್ಪಕ್ಷಪಾತ ಸಮಿತಿ ರಚನೆ ಮಾಡಲಾಗಿದ್ದು, ಈ ಸಮಿತಿ ನಗರದ ನಿರ್ಗತಿಕರ ಸರ್ವೇ ಕಾರ್ಯ ಹಾಗೂ ನಿರಾಶ್ರಿಿತ ಕೇಂದ್ರ ನಿರ್ಮಾಣ ಸೇರಿದಂತೆ ಹಲವು ಸೂಚನೆಗಳನ್ನು ಪಾಲಿಕೆಗೆ ನೀಡುತ್ತಿಿದೆ.ಆದರೆ, ಸಮಿತಿ ನೀಡುವ ಶೇ.75ರಷ್ಟು ನಿರ್ದೇಶನಗಳನ್ನು ಪಾಲಿಕೆಯ ಕಲ್ಯಾಾಣ ವಿಭಾಗದ ಅಧಿಕಾರಿಗಳು ಪಾಲನೆ ಮಾಡುತ್ತಿಿಲ್ಲ.
77 ನಿರಾಶ್ರಿತ ಕೇಂದ್ರಗಳ ನಿರ್ಮಾಣಕ್ಕೆ ಶಿಫಾರಸು: ನಗರದಲ್ಲಿ ಈ ಹಿಂದೆ ಸರ್ವೇ ಮಾಡಿದ್ದ ಸಂಘ- ಸಂಸ್ಥೆಗಳು ಪಾಲಿಕೆಯ ಎಂಟು ವಲಯಗಳಲ್ಲಿ 77 ನಿರಾಶ್ರಿತ ಕೇಂದ್ರಗಳನ್ನು ನಿರ್ಮಿಸುವಂತೆ ಶಿಫಾರಸು ಮಾಡಿದ್ದವು. ಪ್ರತಿ ವರ್ಷವೂ ನಿರ್ಗತಿಕರ ಬಗ್ಗೆೆ ನಡೆಯುವ ಸರ್ವೇಯ ವರದಿಯ ಆಧಾರದ ಮೇಲೆ ಪಾಲಿಕೆ ಕ್ರಿಿಯಾ ಯೋಜನೆ ರೂಪಿಸಿಕೊಳ್ಳಬೇಕು. ನಿರ್ಗತಿಕರ ಸರ್ವೇ ಮತ್ತು ಕ್ರಿಿಯಾ ಯೋಜನೆ ಎರಡೂ ವಿಚಾರದಲ್ಲಿ ಪಾಲಿಕೆ ಸಕ್ರಿಯವಾಗಿ ತೊಡಗಿಸಿಕೊಳ್ಳದೆ ಇರುವುದು ಈ ಯೋಜನೆಗಳ ಪ್ರಗತಿಯಲ್ಲಿ ಕಾಣಿಸುತ್ತಿದೆ.
ನಿರಾಶ್ರಿತರಿಗೆ ಕೌಶಲ್ಯ ತರಬೇತಿ ಕೊಡಲು ನಿರಾಸಕ್ತಿ: ನಗರದಲ್ಲಿರುವ ನಿರ್ಗತಿಕರಿಗೆ ಕನಿಷ್ಠ ಮೂರು ತಿಂಗಳು ನಿರ್ಗತಿಕ ಕೇಂದ್ರದಲ್ಲಿ ಆಶ್ರಯ ಕಲ್ಪಿಿಸಲಾಗುತ್ತದೆ. ಈ ಹಂತದಲ್ಲಿ ಅವರು ಜೀವನೋಪಾಯಕ್ಕೆೆ ಒಂದು ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೆ, ಇದು ಕಡ್ಡಾಾಯವಲ್ಲ. ಅನಿವಾರ್ಯ ಪರಿಸ್ಥಿಿತಿಯಲ್ಲಿ ವಸತಿರಹಿತರು ಅವರ ಜೀವನಕ್ಕೆ ಬೇರೆ ದಾರಿ ಮಾಡಿಕೊಳ್ಳುವವರೆಗೆ ಆಶ್ರಯ ಕೇಂದ್ರದಲ್ಲಿ ಇರಲು ಅವಕಾಶ ಕಲ್ಪಿಿಸಲಾಗುತ್ತಿದೆ. ಇಲ್ಲಿ ನಿರ್ಗತಿಕರು ಇರಲು ಬೇಕಾದ ಬಹುತೇಕ ಎಲ್ಲ ವ್ಯವಸ್ಥೆೆ ಇದೆ. ಇದೇ ಸಂದರ್ಭದಲ್ಲಿ ನಿರ್ಗತಿಕರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ದೃಷ್ಟಿಿಯಿಂದ ಕೌಶಲ್ಯ ತರಬೇತಿ ಶಿಬಿರಗಳನ್ನು ಆಯೋಜಿಸುವ ಅವಶ್ಯಕತೆ ಇದೆ. ಸ್ವತಂತ್ರ್ಯ ನಿಷ್ಪಕ್ಷಪಾತ ಸಮಿತಿ ಸಹ ಪಾಲಿಕೆಯ ಕಲ್ಯಾಾಣ ವಿಭಾಗದ ಅಧಿಕಾರಿಗಳಿಗೆ ಈ ನಿಟ್ಟಿಿನಲ್ಲಿ ಕ್ರಮ ವಹಿಸಲು ನಿರ್ದೇಶನ ನೀಡದೆ. ಪಾಲಿಕೆಯ ಯಾವೊಂದು ವಲಯದಲ್ಲಿ ನಿರ್ಗತಿಕರಿಗೆ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಗೊಂಡಿಲ್ಲ.
ಕೋವಿಡ್ ಸಮಯದಲ್ಲಿ ಆಸರೆಯಾದ ಕೇಂದ್ರಗಳು :
ಕೆಲವು ನಿರ್ದಿಷ್ಟ ನ್ಯೂನ್ಯತೆಗಳ ಹೊರತಾಗಿಯೂ ನಗರದಲ್ಲಿರುವ ನಿರ್ಗತಿಕ ಕೇಂದ್ರಗಳು ಹಲವು ನಿರ್ಗತಿಕರಿಗೆ ನೆಮ್ಮದಿಯ ತಾಣವಾಗಿದೆ. ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದವರಿಗೆ ನೆಮ್ಮದಿ ನೀಡಿವೆ. ಕೊರೊನಾ ಸೋಂಕು ಉಲ್ಬಣಿಸಿದ ಸಂದರ್ಭದಲ್ಲಿ ಹಾಗೂ ಇಡೀ ರಾಜ್ಯವೇ ಲಾಕ್‌ಡೌನ್ ಆದ ಸಂದರ್ಭದಲ್ಲಿ ಬೀದಿಯಲ್ಲಿದ್ದ ಸಾವಿರಾರು ಜನರಿಗೆ ಪಾಲಿಕೆಯ ಇದೇ ನಿರ್ಗತಿಕರ ಕೇಂದ್ರದಲ್ಲಿ ಆಶ್ರಯ ಕಲ್ಪಿಿಸಲಾಗಿತ್ತು. ಹೆಚ್ಚು ಜನ ಬಂದ ಹಿನ್ನೆೆಲೆಯಲ್ಲಿ ಪೆಂಡಾಲ್‌ಗಳನ್ನು ಹಾಕಿ ಆಶ್ರಯ ಕಲ್ಪಿಿಸಲಾಗಿತ್ತು. ಕೊರೊನಾ ಸೋಂಕಿನ ನಂತರದ ದಿನಗಳಲ್ಲಿ
ಹಲವು ನಿರ್ಗತಿಕ ಕೇಂದ್ರಗಳ ಮೂಲಸೌಕರ್ಯ ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ.
ಗುಣಮಟ್ಟದ ಟೆಂಡರ್‌ಗೆ ಆದ್ಯತೆ ನೀಡಲು ನಿರ್ದೇಶನ: ನಿರ್ಗತಿಕರ ಕೇಂದ್ರಗಳ ನಿರ್ವಹಣೆಗೆ ಟೆಂಡರ್ ಕರೆಯುವ ಸಂದರ್ಭದಲ್ಲಿ ಕಡಿಮೆ ಬಿಡ್ ಮಾಡುವವರಿಗೆ ಟೆಂಡರ್ ನೀಡಲಾಗುತ್ತಿಿದೆ. ಈ ಕ್ರಮವನ್ನು ಕೈಬಿಟ್ಟು, ಉತ್ತಮ ಗುಣಮಟ್ಟದ ಕಾರ್ಯಕ್ಕೆ ಒತ್ತು ನೀಡಿ ಹಾಗೂ ಕೂಡಲೇ ಹೊಸದಾಗಿ ಟೆಂಡರ್ ಕರೆಯಲು ಸೂಕ್ತ ಕ್ರಮ ವಹಿಸುವಂತೆ ಸ್ವತಂತ್ರ್ಯ ನಿಷ್ಪಕ್ಷಪಾತ ಸಮಿತಿ ಇತ್ತೀಚೆಗೆ ನಡೆದ ಸಭೆಯಲ್ಲಿ ಪಾಲಿಕೆಗೆ ನಿರ್ದೇಶನ ನೀಡುತ್ತು.
ನಿರಾಶ್ರಿತ ಕೇಂದ್ರಗಳಲ್ಲಿ ಆಗಬೇಕಿರುವ ಬದಲಾವಣೆ :
* ಹಲವು ನಿರಾಶ್ರಿತ ಕೇಂದ್ರಗಳಲ್ಲಿ ಹ್ಯಾಾಂಡ್ ಸ್ಯಾಾನಿಟೈಸರ್ ವ್ಯವಸ್ಥೆೆ ಹಾಗೂ ಥರ್ಮಲ್ ಸ್ಕ್ಯಾಾನಿಂಗ್ ತಪಾಸಣೆ ನಡೆಯುತ್ತಿಲ್ಲ. ಕೋವಿಡ್ ಭೀತಿ ಹಿನ್ನೆೆಲೆಯಲ್ಲಿ ಇದು ಕಡ್ಡಾಾಯ ಮಾಡಬೇಕು.
* ಸ್ವಚ್ಛತೆಗೆ ಮತ್ತಷ್ಟು ಆದ್ಯತೆ ನೀಡುವ ಕೆಲಸವಾಗಬೇಕಿದೆ.
* ನೊಂದವರಿಗೆ ಮತ್ತು ಭರವಸೆ ಕಳೆದುಕೊಂಡವರಿಗೆ ಜೀವನುತ್ಸಾಾಹ ಮೂಡಿಸುವ ಯೋಜನೆ ರೂಪಗೊಳ್ಳಬೇಕಿದೆ.
* ಇಲ್ಲಿರುವವರು ಕ್ರಿಿಯಾಶೀಲರಾಗಲು ಪುಸ್ತಕ, ಪೇಪರ್ ಮತ್ತು ದೈಹಿಕ ಶಿಸ್ತು ಮೂಡಲು ಅವಶ್ಯವಿರು ಕಾರ್ಯಕ್ರಮಗಳ ಅನುಷ್ಠಾಾನವಾಗಬೇಕಿದೆ.
* ನಿರ್ಗತಿಕರಿಗೆ ಸಾಮಾಜಿಕ ಭದ್ರತೆ ನೀಡುವ ಹಾಗೂ ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಅವಶ್ಯಕತೆ ಇದೆ.
* ನಿರ್ಗತಿಕರ ಕೇಂದ್ರದಲ್ಲಿ ಕೌನ್ಸಿಿಲ್ ನಡೆಯುತ್ತಿಿದೆಯಾದರೂ, ನಿರಂತರವಾಗಿ ಮುಂದುವರಿಸಬೇಕಿದೆ.
ವಲಯ ನಿರಾಶ್ರಿಿತ ಕೇಂದ್ರ ಕೇಂದ್ರದ ಸಾಮರ್ಥ್ಯ (ಜನ) :
ಪಶ್ಚಿಮ ಗೂಡ್‌ಶೆಡ್ ರಸ್ತೆ ಕೇಂದ್ರ- 1 40
ಗೂಡ್‌ಶೆಡ್ ರಸ್ತೆ ಕೇಂದ್ರ- 2 40
ರಾಮಮಂದಿರ ರಾಜಾಜಿನಗರ 14
ಹೆಲ್‌ತ್ ಕಿಯೋಸ್‌ಕ್, ಉಪ್ಪಾಾರಪೇಟೆ 90
——————
ಪೂರ್ವ ಮರ್ಫಿಟೌನ್ (ಮಾರುಕಟ್ಟೆ ಸಮೀಪ) 54
ದಾಸರಹಳ್ಳಿ ತುಮಕೂರು ರಸ್ತೆ 30
ಚೊಕ್ಕಸಂದ್ರ ಮುಖ್ಯರಸ್ತೆ 50
——————
ಮಹದೇವಪುರ ನಗರಸಭೆ ಕಟ್ಟಡ, ಹೂಡಿ ಮುಖ್ಯರಸ್ತೆ 14
ಬೊಮ್ಮನಹಳ್ಳಿ ಅಂಬೇಡ್ಕರ್ ಭವನ, ಜಂಬೂಸವಾರಿ ದಿಣ್ಣೆ 40
ಯಲಹಂಕ ಬಾಗಲೂರು ರಸ್ತೆ 40
ಒಟ್ಟು 10 777
ನಿರಾಶ್ರಿತ ಕೇಂದ್ರ ಹೆಚ್ಚಿಸಲು ಕ್ರಮ: ನಗರದಲ್ಲಿ ನಿರಾಶ್ರಿಿತರ ಕೇಂದ್ರ ಹೆಚ್ಚಿಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಪಾಲಿಕೆಯ ಕಲ್ಯಾಾಣ ವಿಭಾಗದ ವಿಶೇಷ ಆಯುಕ್ತ ಎಸ್.ಜಿ.ರವೀಂದ್ರ ತಿಳಿಸಿದರು.
ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ಅವರು, ಪಾಲಿಕೆ ವ್ಯಾಾಪ್ತಿಿಯ ಎಂಟು ವಲಯಗಳಲ್ಲಿ ನಿರಾಶ್ರಿತ ಕೇಂದ್ರಗಳನ್ನು ನಿರ್ಮಿಸಲು ಸ್ಥಳ ಗುರುತಿಸಿ,ಪ್ರಸ್ತಾಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಾಗದ ಕೊರತೆ ಇರುವ ಕಡೆ ಕಟ್ಟಡಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಕ್ರಮವಹಿಸಲಾಗುವುದು ಎಂದು ಹೇಳಿದರು.
ನಿರಾಶ್ರಿತ ಕೇಂದ್ರಕ್ಕೆ ಬಂದು ಎರಡು ತಿಂಗಳ ಮೇಲಾಗಿದೆ. ಕೇಂದ್ರದಲ್ಲಿ ನಡೆಸಿದ ಕೌನ್ಸಿಿಲಿಂಗ್‌ನಿಂದಾಗಿ ಸಹಾಯವಾಗಿದೆ.
-ದೊರೆಸ್ವಾಾಮಿ.
ನಿರಾಶ್ರಿತ ಕೇಂದ್ರದಲ್ಲಿ ಊಟದ ವ್ಯವಸ್ಥೆ, ನಿದ್ದೆ ಮಾಡಲು ಅವಕಾಶ ಇದೆ ಹಾಗೂ ಆರೋಗ್ಯ ತಪಾಸಣೆಯೂ ನಡೆಯುತ್ತಿದೆ. ಇಷ್ಟು ಸೌಲಭ್ಯ ಸಿಕ್ಕಿರುವುದು ಪುಣ್ಯ.
-ಸಿದ್ದು.
ನಾನು ಕೇರಳದಿಂದ ಬೆಂಗಳೂರಿಗೆ ಬಂದಿದ್ದು, ಯಾರು ಆಸರೆ ಇರಲಿಲ್ಲ. ಕೇಂದ್ರದಲ್ಲಿ ಎಲ್ಲ ಸೌಲಭ್ಯ ಇದೆ.
-ಮಧುಸೂದನ್.
ನಿರಾಶ್ರಿತ ಕೇಂದ್ರಕ್ಕೆ ಬಂದು ಎರಡು ತಿಂಗಳಾಗಿದ್ದು ನೆಮ್ಮದಿಯ ಜೀವನ ನಡೆಸಲು ಸಹಾಯವಾಗಿದೆ.
-ನಾಗರಾಜ್.
ಕೇಂದ್ರಕ್ಕೆ ಬಂದ ಮೇಲೆ ಇಲ್ಲಿನ ಸಿಬ್ಬಂದಿ ಕೌನ್ಸಿಲಿಂಗ್, ಕೋವಿಡ್ ಸೋಂಕು ಪರೀಕ್ಷೆ ಮಾಡಿಸಿದರು. ಮೂಲಸೌಕರ್ಯ ವ್ಯವಸ್ಥೆಯೂ ಉತ್ತಮವಾಗಿದೆ.
-ರವಿ
-ಹಿತೇಶ್ ವೈ