Advertisement

Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು

07:37 PM Dec 21, 2024 | Team Udayavani |

ನವದೆಹಲಿ: ಉತ್ತರ ದೆಹಲಿಯ ತಿಮಾರ್‌ಪುರ ಪ್ರದೇಶದಲ್ಲಿ ತನ್ನ ಶಿಷ್ಯೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 89 ವರ್ಷದ ಮಹಂತರೊಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ(ಡಿ 21) ತಿಳಿಸಿದ್ದಾರೆ.

Advertisement

ತಿಮಾರ್‌ಪುರದ ಲಕ್ನೋ ರಸ್ತೆಯ ಕಬೀರ್ ಮಂದಿರದ ರಾಜಾ ರಾಮ್ ದಾಸ್ ವಿರುದ್ಧ ಆಪಾದಿತ ಅಪರಾಧವನ್ನು ವರದಿ ದೂರು ಡಿಸೆಂಬರ್ 13 ರಂದು ದಾಖಲಾಗಿತ್ತು. ಈ ಸಂಬಂಧ ದಾಸ್ ವಿರುದ್ಧ ಐಪಿಸಿ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಿಮಾರ್‌ಪುರದ ಕಬೀರ್ ವಿಜ್ಞಾನ ಆಶ್ರಮ ನಡೆಸುತ್ತಿರುವ ಸದ್ಗುರು ರಾಜಾ ರಾಮ್ ಸಾಹಬ್ ಧಾರ್ಮಿಕ್ ಟ್ರಸ್ಟ್‌ನ ಮಹಂತ್ , ಏಪ್ರಿಲ್ 14 ರ ರಾತ್ರಿ ತನ್ನ ಆಶ್ರಮದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ 51 ವರ್ಷದ ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ. ದಾಸ್ ಅವರು ತಿಮಾರ್‌ಪುರದ ಸದ್ಗುರು ಕಬೀರ್ ಮಂದಿರ ಪ್ರಚಾರ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.

ಏತನ್ಮಧ್ಯೆ, ಆಶ್ರಮವನ್ನು ಅಕ್ರಮವಾಗಿ ದೋಚಲು ಪ್ರಯತ್ನಿಸಿದರು ಎಂದು ಆರೋಪಿಸಿ ಸಂತ್ರಸ್ತೆ ಮತ್ತು ಇತರ ಐದು ಜನರ ವಿರುದ್ಧ ಮಹಂತ್ ದಾಸ್ ಅವರು ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಎರಡೂ ವಿಷಯಗಳ ಕುರಿತು ವಿಚಾರಣೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next