Advertisement

SDPI ಮುಖಂಡ ಅಶ್ರಫ್ ಹತ್ಯೆ: 4 ತಾಲೂಕುಗಳಲ್ಲಿ ನಿಷೇಧಾಜ್ಞೆ 

01:14 PM Jun 21, 2017 | |

ಬಂಟ್ವಾಳ : ಇಲ್ಲಿನ ಬೆಂಜನಪದವಿನಲ್ಲಿ ಎಸ್‌ಡಿಪಿಐ ಸಂಘಟನೆಯ ಮುಖಂಡ ಕಲಾಯಿ ಅಶ್ರಫ್ರನ್ನು ಬುಧವಾರ ದುಷ್ಕರ್ಮಿಗಳು ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಹತ್ಯೆಯ ಬಳಿಕ ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

Advertisement

ಕಲ್ಲಡ್ಕ ಗಲಭೆಯ ಬಳಿಕ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು,ನಿಷೇಧಾಜ್ಞೆಯ ನಡುವೆಯೂ ನಡೆದ 
ಹತ್ಯೆಯ ಬಳಿಕ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.ಸ್ಥಳಕ್ಕೆ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 

ಹತ್ಯೆಗೀಡಾದ ಅಶ್ರಫ್ (30)ಪೊಳಲಿ ಸಮೀಪದ ಅಮ್ಮುಂಜೆ ನಿವಾಸಿಯಾಗಿದ್ದು. ಪೂರ್ವ ದ್ವೇಷದಿಂದಲೆ ಕೊಲೆ ನಡೆಸಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇಂದು ಬೆಳಿಗ್ಗೆ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಲಾಯಿಯಲ್ಲಿ ಧ್ವಜಾರೋಹಣ ನೆರೆವೇರಿಸಿ,ಕಲಾಯಿ ರಸ್ತೆಯಲ್ಲಿ ಹೊಂಡಗಳಿದ್ದು ನೀರು ತುಂಬಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು,ಅದನ್ನು ಆಶ್ರಫ್ ರವರ ನೇತೃತ್ವದಲ್ಲಿ  ಗುಂಡಿಗಳಿಗೆ ಕಲ್ಲುಗಳನ್ನು ಹಾಕಿ ಸರಿಪಡಿಸಿ ಜನಸಾಮಾನ್ಯರಿಗೆ ಉಪಕಾರವಾಗುವ ಸಾಮಾಜ ಸೇವೆಯನ್ನು ಮಾಡಿ  ಅಟೋ ರಿಕ್ಷಾದ ಮೂಲಕ ತೆರಳಿದ್ದ ವೇಳೆ ಬಾಡಿಗೆಯ ನೆಪವೊಡ್ಡಿ ಕರೆದುಕೊಂಡು ಹೋದ ದುಷ್ಕರ್ಮಿಗಳು ಬೆಂಜನಪದವಿನಲ್ಲಿ  ತಲವಾರು ದಾಳಿ ನಡೆಸಿ ಭೀಕರವಾಗಿ ಹತೈಗೈದಿದ್ದಾರೆ.

4 ತಾಲೂಕುಗಳಲ್ಲಿ ನಿಷೇದಾಜ್ಞೆ 
ಬೆಂಜನಪದವು ಅಶ್ರಫ್ ಕೊಲೆ ಪ್ರಕರಣ ಉದ್ವಿಗ್ನಗೊಡಿರುವ ಕಾರಣ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕಿನಲ್ಲಿ ಸೆಕ್ಷನ್ 144ರ ಅನ್ವಯ ನಿಷೇದಾಜ್ಞೆಯನ್ನು ಜೂನ್ 27ರವರೆಗೆ ವಿಸ್ತರಿಸಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next