Advertisement

ಆಸ್ಟ್ರೇಲಿಯಕ್ಕೆ ಇನ್ನಿಂಗ್ಸ್‌ ಮುನ್ನಡೆ

06:35 AM Dec 05, 2017 | Team Udayavani |

ಅಡಿಲೇಡ್‌: ಆತಿಥೇಯ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ನಡುವೆ ಅಡಿಲೇಡ್‌ನ‌ಲ್ಲಿ ನಡೆಯುತ್ತಿರುವ ಆ್ಯಶಸ್‌ ಸರಣಿಯ ಅಹರ್ನಿಶಿ ಪಂದ್ಯ ಕುತೂಹಲದಿಂದ ಸಾಗುತ್ತಿದೆ.

Advertisement

ಮೂರನೇ ದಿನದಾಟದಲ್ಲಿ ಇಂಗ್ಲೆಂಡ್‌ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಗಿದ್ದು ಕೇವಲ 227 ರನ್ನಿಗೆ ಆಲೌಟಾಗಿದೆ. 215 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದರೂ ಫಾಲೋಆನ್‌ ಹೇರದ ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಘಾತಕ್ಕೆ ಒಳಗಾಗಿದೆ. ದಿನದಾಟದ ಅಂತ್ಯಕ್ಕೆ 4 53 ರನ್ನಿಗೆ 4 ವಿಕೆಟ್‌ ಕಳೆದುಕೊಂಡಿದೆ. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಒಟ್ಟಾರೆ 268 ರನ್‌ ಮುನ್ನಡೆಯಲ್ಲಿರುವ ಆಸ್ಟ್ರೇಲಿಯ ಗೆಲುವಿನ ನಿರೀಕ್ಷೆಯಲ್ಲಿದೆ.

ಒಂದು ವಿಕೆಟಿಗೆ 29 ರನ್ನಿನಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್‌ ಆರಂಭದಲ್ಲಿಯೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಅಗ್ರ ಕ್ರಮಾಂಕದಲ್ಲಿ ಆರಂಭಿಕ ಅಲಸ್ಟೇರ್‌ ಕುಕ್‌ ಬಿಟ್ಟರೆ ಉಳಿದ ಯಾವುದೇ ಆಟಗಾರರು ಉತ್ತಮ ಬ್ಯಾಟಿಂಗ್‌ ಮಾಡಲಿಲ್ಲ. ಇದರಿಂದಾಗಿ 102 ರನ್ನಿಗೆ ತಂಡ 5 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಕುಕ್‌ 90 ಎಸೆತ ಎದುರಿಸಿ 37 ರನ್‌ ಹೊಡೆದರು.

ಕ್ರಿಸ್‌ ವೋಕ್ಸ್‌ ಮತ್ತು ಕ್ರೆಗ್‌ ಓವರ್ಟನ್‌ ಎಂಟನೇ ವಿಕೆಟಿಗೆ 66 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಕಾರಣ ಇಂಗ್ಲೆಂಡ್‌ ಮೊತ್ತ 200ರ ಗಡಿ ದಾಟುವಂತಾಯಿತು. ವೋಕ್ಸ್‌ 36 ರನ್‌ ಗಳಿಸಿದರೆ ಚೊಚ್ಚಲ ಟೆಸ್ಟ್‌ ಆಡುತ್ತಿರುವ ಓವರ್ಟನ್‌ 41 ರನ್‌ ಗಳಿಸಿ ಅಜೇಯರಾಗಿ ಉಳಿದರು.

ನಥನ್‌ ಲಿಯೋನ್‌ 60 ರನ್ನಿಗೆ 4 ವಿಕೆಟ್‌ ಉರುಳಿಸಿದರೆ ಸ್ಟಾರ್ಕ್‌ 49 ರನ್ನಿಗೆ 3 ವಿಕೆಟ್‌ ಪಡೆದರು. 2 ವಿಕೆಟ್‌ ಕಮಿನ್ಸ್‌ ಪಾಲಾಯಿತು.

Advertisement

215 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದ ಆಸ್ಟ್ರೇಲಿಯ ಫಾಲೋಆನ್‌ ಹೇರಲಿಲ್ಲ. ಬದಲಾಗಿ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿತು. ಆ್ಯಂಡರ್ಸನ್‌ ಮತ್ತು ವೋಕ್ಸ್‌ ದಾಳಿಗೆ ಆಸ್ಟ್ರೇಲಿಯ ರನ್‌ ಗಳಿಸಲು ಒದ್ದಾಡಿತು. ಅವರಿಬ್ಬರು ತಲಾ ಎರಡು ವಿಕೆಟ್‌ ಕಿತ್ತರು. ಇದರಿಂದಾಗಿ ಆಸ್ಟ್ರೇಲಿಯ 53 ರನ್ನಿಗೆ 4 ವಿಕೆಟ್‌ ಕಳೆದುಕೊಂಡಿದೆ.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ 8 ವಿಕೆಟಿಗೆ 442 ಡಿಕ್ಲೇರ್‌x ಮತ್ತು 4 ವಿಕೆಟಿಗೆ 53 (ಉಸ್ಮಾನ್‌ ಖ್ವಾಜಾ 20, ಆ್ಯಂಡರ್ಸನ್‌ 16ಕ್ಕೆ 2, ವೋಕ್ಸ್‌ 13ಕ್ಕೆ 2); ಇಂಗ್ಲೆಂಡ್‌ 227 (ಅಲಸ್ಟೇರ್‌ ಕುಕ್‌ 37, ಮೊಯಿನ್‌ ಅಲಿ 25, ಬೇರ್‌ಸ್ಟೋ 21, ವೋಕ್ಸ್‌ 36, ಕ್ರೆಗ್‌ ಓವರ್ಟನ್‌ 41 ಔಟಾಗದೆ, ಮಿಚೆಲ್‌ ಸ್ಟಾರ್ಕ್‌ 49ಕ್ಕೆ 3, ಪ್ಯಾಟ್‌ ಕಮಿನ್ಸ್‌ 47ಕ್ಕೆ 2, ನಥನ್‌ ಲಿಯೋನ್‌ 60ಕ್ಕೆ 4).

Advertisement

Udayavani is now on Telegram. Click here to join our channel and stay updated with the latest news.

Next