Advertisement

ಆಶಾ ಕಾರ್ಯಕರ್ತೆಯರ ಸಮಸ್ಯೆ ಪರಿಹರಿಸುವಂತೆ ಸಂಸದ ಉಣ್ಣಿತ್ತಾನ್‌ಆಗ್ರಹ

08:40 AM Dec 22, 2022 | Team Udayavani |

ಕುಂಬಳೆ : ಆಶಾ ಕಾರ್ಯಕರ್ತೆಯರ ಗೌರವ ಧನ ಮತ್ತು ಇನ್ಸೆಂಟಿವ್‌ ಹೆಚ್ಚಿಸಬೇಕು. ಅವರನ್ನು ಸರಕಾರಿ ಉದ್ಯೋಗಿಗಳಾಗಿ ಪರಿಗಣಿಸಬೇಕು ಎಂದು ಕಾಸರಗೋಡು ಸಂಸದ ರಾಜಮೋಹನ್‌ ಉಣ್ಣಿತ್ತಾನ್‌ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದರು.

Advertisement

ಜಿಲ್ಲೆಯಲ್ಲೇ ಸಾವಿರದಷ್ಟು ಆಶಾ ಕಾರ್ಯಕರ್ತೆಯರಿದ್ದಾರೆ. ಅವರು ಮನೆ ಮನೆಗಳಿಗೆ ತೆರಳಿ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರನ್ನು ಅರೆಕಾಲಿಕ ನೆಲೆಯಲ್ಲಿ ನೇಮಕಗೊಳಿಸಿ ಇದೀಗ ಪೂರ್ಣಕಾಲಿಕ ನೌಕರರಾಗಿ ದುಡಿಸುತ್ತಿರುವುದು ತರವಲ್ಲ ಎಂದು ತಿಳಿಸಿದರು.

ಲೋಕಸಭೆಯಲ್ಲಿ ಶೂನ್ಯವೇಳೆ ಈ ವಿಷಯ ಪ್ರಸ್ತಾವಿಸಿದ ಸಂಸದರು ಆಶಾ ಕಾರ್ಯಕರ್ತೆತರು ಕೆಲವು ವರ್ಷಗಳಿಂದ ಗರ್ಭಿಣಿಯರ ಪತ್ತೆ ಹಚ್ಚಿ ಅವರಿಗೆ ಔಷಧ ವಿತರಣೆ, ಸ್ಥಳೀಯಾಡಳಿತೆಗಳ ಸಮಾಜಕ್ಷೇಮ ಯೋಜನೆಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅವರ ಸಮಸ್ಯೆಯತ್ತ ಈ ತನಕ ಗಮನ ಹರಿಸಿಲ್ಲ. ಹಾಗಾಗಿ ಆಶಾ ಕಾರ್ಯಕರ್ತೆಯರ ಬೇಡಿಕೆ ಯನ್ನು ಪರಿಗಣಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next