Advertisement

ಕಾಂಗ್ರೆಸ್‌ನಿಂದ ಎ.ಎಸ್‌.ಪಾಟೀಲ್‌ ನಡಹಳ್ಳಿ ಉಚ್ಚಾಟನೆ

06:55 AM Oct 14, 2017 | Team Udayavani |

ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಡಳಿತ ಪಕ್ಷ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿದ್ದ ದೇವರ ಹಿಪ್ಪರಗಿ ಶಾಸಕ ಎ.ಎಸ್‌. ಪಾಟೀಲ್‌ ನಡಹಳ್ಳಿಯನ್ನು ಕೆಪಿಸಿಸಿ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ.

Advertisement

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ನಡಹಳ್ಳಿಯನ್ನು ಪಕ್ಷದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದು, ತಾವು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣ ಮಾಡುವಂತೆ ಮಧ್ಯಮಗಳ ಮೂಲಕ ಸ್ವಹಿತಾಸಕ್ತಿಯಿಂದ ಆಗ್ರಹಿಸಿ, ಕಾಂಗ್ರೆಸ್‌ ಪಕ್ಷದ ನೀತಿ ನಿಯಮಗಳನ್ನು ಉಲ್ಲಂ ಸಿ ಕಾಂಗ್ರೆಸ್‌ ಪಕ್ಷದ ಸರ್ಕಾರದ ಬಗ್ಗೆ ಟೀಕೆಗಳನ್ನು ಮಾಡಿದ್ದಿರಿ. ಆ ಕಾರಣದಿಂದ 2015 ರ ಏಪ್ರಿಲ್‌ನಿಂದ ತಮ್ಮನ್ನು ಅಮಾನತ್ತಿಲ್ಲಿಡಲಾಗಿತ್ತು.

ತಮ್ಮನ್ನು ಅಮಾನತುಗೊಳಿಸಿರುವ ಕ್ರಮಕ್ಕೆ ತಾವು ಲಿಖೀತ ಉತ್ತರ ನೀಡಿರುವುದು ಸಮಂಜಸವಾಗಿಲ್ಲ. ಅಲ್ಲದೆ ಆಗಿನಿಂದಲೂ ಪಕ್ಷದ ನಿಯಮಗಳನ್ನು ಉಲ್ಲಂಘನೆ ಮಾಡಿ ಪಕ್ಷದ ಘನತೆಗೆ ಹಾನಿಯುಂಟು ಮಾಡುವ ಕೆಲಸಗಳನ್ನು ಮುಂದುವರೆಸಿರುವುದು ಕಂಡು ಬಂದಿರುವುದರಿಂದ ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪರಮೇಶ್ವರ್‌ ಆದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next