ನವದೆಹಲಿ : ಬಿಜೆಪಿ ನಾಯಕಿ ಖುಷ್ಬು ಸುಂದರ್ ಅವರು 2018 ರಲ್ಲಿ ಮಾಡಿದ್ದ ಟ್ವೀಟ್ ಒಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ಸಂಸತ್ತಿನಿಂದ ಅನರ್ಹಗೊಳಿಸಿದ ಬಳಿಕ ವೈರಲ್ ಆಗುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿದ್ದ ವೇಳೆ ಖುಷ್ಬು ಅವರು ಮೋದಿಯ ಅರ್ಥವನ್ನು ಭ್ರಷ್ಟಾಚಾರ ಎಂದು ಬದಲಾಯಿಸಬೇಕು ಎಂದು ಹೇಳಿದ್ದರು. “ಮೋದಿ ಎಲ್ಲೆಡೆ ಇದ್ದಾರೆ, ಆದರೆ ಇದು ಏನು? ಮೋದಿ ಉಪನಾಮವು ಭ್ರಷ್ಟಾಚಾರದೊಂದಿಗೆ ತಳುಕು ಹಾಕಿದೆ” ಎಂದು ಅವರು ಟ್ವೀಟ್ ಮಾಡಿದ್ದರು.
“ಯಹಾ #ಮೋದಿ ವಹಾ #ಮೋದಿ ಜಹಾನ ದೇಖೋ #ಮೋದಿ..ಲೇಕಿನ್ ಯೇ ಕ್ಯಾ?? #ಮೋದಿ ಭ್ರಷ್ಟಾಚಾರಕ್ಕೆ..ಸೂಟ್ ಬೆಟರ್..#ನೀರವ್ #ಲಲಿತ್ #ನಮೋ = ಭ್ರಷ್ಟಾಚಾರ..” ಎಂದು ಹಿಂದಿಯಲ್ಲಿ ಪೋಸ್ಟ್ ಮಾಡಿದ್ದರು.
ನನ್ನ ಹಳೆಯ ಟ್ವೀಟ್ ಅನ್ನು ಕೆದಕಿರುವುದು ಕಾಂಗ್ರೆಸ್ ನವರು ಎಷ್ಟು ಹತಾಶರಾಗಿದ್ದಾರೆಂದು ತೋರಿಸುತ್ತದೆ” ಎಂದು ಖುಷ್ಬು ಸುದ್ದಿ ಸಂಸ್ಥೆ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಪೋಸ್ಟ್ ಮಾಡಿದ ‘ಮೋದಿ’ ಟ್ವೀಟ್‌ಗೆ ನಾನು ನಾಚಿಕೆಪಡುವುದಿಲ್ಲ. ನಾನು ನಾಯಕನನ್ನು ಅನುಸರಿಸುತ್ತಿದ್ದೆ ಮತ್ತು ಪಕ್ಷದ ಭಾಷೆಯಲ್ಲಿ ಮಾತನಾಡುತ್ತಿದ್ದೆ” ಎಂದು ಅವರು ಹೇಳಿದರು.
ನಟಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಸದಸ್ಯರೂ ಆಗಿರುವ ಖುಷ್ಬು ಸುಂದರ್ ಅವರು ಕಾಂಗ್ರೆಸ್ ತೊರೆದ ನಂತರ ಬಿಜೆಪಿಗೆ ಸೇರಿದ್ದರು.