Advertisement

ಪ್ರತ್ಯೇಕ ರಾಜ್ಯವಾದರೆ 371(ಜೆ) ಸೌಲಭ್ಯಕ್ಕೆ ಧಕ್ಕೆಯಾಗದು

05:09 PM Aug 04, 2018 | Team Udayavani |

ಹಾವೇರಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಅಸ್ತಿತ್ವಕ್ಕೆ ಬಂದರೆ 371(ಜೆ) ಸೌಲಭ್ಯಕ್ಕೆ ಯಾವುದೇ ಧಕ್ಕೆಯಾಗದು ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನೂತನ ಅಧ್ಯಕ್ಷ ವಿ.ಎಫ್‌. ಕಟ್ಟೆಗೌಡ್ರ ಹೇಳಿದರು.

Advertisement

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿರುವ ವಕೀಲರ ಕೊಠಡಿಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೈದ್ರಾಬಾದ್‌-ಕರ್ನಾಟಕ ಭಾಗದ ಜನರಲ್ಲಿ 371(ಜೆ) ತೊಂದರೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ, 371(ಜೆ) ಪ್ರಕಾರ ಶೇ. 10 ಉದ್ಯೋಗ ಮೀಸಲಾತಿ ದೊರೆಯಲಿದೆ. ಜೊತೆಗೆ ಉಳಿದ ಶೇ. 90ರಷ್ಟು ಭಾಗದಲ್ಲಿ ಮೀಸಲಾತಿ ದೊರೆಯಲಿದೆ. ಅದಕ್ಕೆ ಯಾವ ತೊಂದರೆಯಾಗಲ್ಲ. ಬಗ್ಗೆ ಆ ಭಾಗದ ಜನರೊಂದಿಗೆ ಸಮಾಲೋಚನೆ ನಡೆಸುವೆ ಎಂದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ವ್ಯವಸ್ಥಿತವಾಗಿ ಮಾಡಬೇಕು. ಅದಕ್ಕೆ ಮೊದಲು ಹೋರಾಟ ಸಮಿತಿಯನ್ನು ನೋಂದಣಿ ಮಾಡಿಸಬೇಕು. ಈ ಹಿಂದೆ ರಾಜ್ಯಾಧ್ಯಕ್ಷರಾಗಿದ್ದ ಕೊತಂಬರಿ ವಕೀಲರು ಹೋರಾಟ ಸಮಿತಿಯನ್ನು ನೋಂದಣಿ ಮಾಡಿಸದೆ, ಆ. 2ರಂದು ಬಂದ್‌ ಕರೆ ನೀಡಿದ್ದರು. ಬಂದ್‌ ಹಿಂದಿನ ದಿನ ಬಂದ್‌ ವಾಪಸ್‌ ಪಡೆಯುವ ಮೂಲಕ ಈ ಭಾಗದ ಜನರಿಗೆ ನೋವು ತರುವ ಕೆಲಸ ಮಾಡಿದರು. ಹೋರಾಟ ಸಂದರ್ಭದಲ್ಲಿಯೇ ರೈತರು, ವಿವಿಧ ಸಂಘಟನೆಗಳ ಮುಖಂಡರು ತಮ್ಮನ್ನು ಹೋರಾಟ ಸಮಿತಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡುವೆ. ಹೋರಾಟ ಸಮಿತಿ ನೋಂದಣಿಯಾದ ಬಳಿಕ ಎಲ್ಲ 13 ಜಿಲ್ಲೆಗಳಿಗೆ ಸಂಚರಿಸಿ ಸಂಘಟನೆ ಹಾಗೂ ಜಾಗೃತಿ ಮೂಡಿಸುವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್‌.ಎಸ್‌. ಪಾಟೀಲ, ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ಇಂದು ಅನಿವಾರ್ಯವಾಗಿದೆ. ಈ ಹೋರಾಟಕ್ಕೆ ಕಟ್ಟೇಗೌಡ್ರರಂಥ ಹಿರಿಯ ವಕೀಲರ ಮುಂದಾಳತ್ವ ವಹಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ಹೋರಾಟ ಯಶಸ್ವಿಯಾಗಲು ಸಹಕಾರ ನೀಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಎಂ.ವಿ. ಕುಂಟೆ, ಸಿ.ಟಿ. ಜಾವಗಲ್‌, ಪಿ.ಆರ್‌. ಮುಂಜೋಜಿ, ಎನ್‌.ಬಿ. ಕಾಯಕದ, ಎ.ಎಚ್‌. ಕುಲಕರ್ಣಿ, ಎನ್‌.ಎಸ್‌. ಪ್ರಕಾಶ, ವಿ.ಎಲ್‌. ಅರ್ಕಾಚಾರಿ ಇನ್ನಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next