ನವದೆಹಲಿ: ಒಂದೆಡೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚಿನ ಬೆಳವಣಿಗೆಗಳು ನಡೆಯುತ್ತಿವೆ, ಇದರ ಜೊತೆಗೆ ದೆಹಲಿಯ ಆಪ್ ಪಕ್ಷದ ನಾಯಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪದ ನಡುವೆ ಇಂದು ವಿಶ್ವಾಸ ನಿರ್ಣಯ ಮಂಡಿಸಲು ಸಿಎಂ ಕೇಜ್ರಿವಾಲ್ ಮುಂದಾಗಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯ ಮಂಡಿಸಿದರು, ಸದನವು ಮಂತ್ರಿ ಮಂಡಳಿಯಲ್ಲಿ ವಿಶ್ವಾಸ ಹೊಂದಿದೆ ಎಂಬುದನ್ನು ಜನರಿಗೆ ತೋರಿಸಬೇಕಾಗಿದೆ ಎಂದು ಹೇಳಿದೆ ಇದರ ಮುಂದಿನ ಭಾಗವಾಗಿ ಇಂದು ವಿಶ್ವಾಸ ನಿರ್ಣಯ ಮಂಡಿಸಲು ಸಿಎಂ ಸಜ್ಜಾಗಿದ್ದಾರೆ.
ಆಪ್ ಶಾಸಕರನ್ನು ಖರೀದಿಸಲು ಮತ್ತು ಸರ್ಕಾರವನ್ನು ಉರುಳಿಸಲು ಬಿಜೆಪಿ ಪಕ್ಷ ಪ್ರಯತ್ನಿಸಿದೆ ಎಂದು ಸಿಎಂ ಆರೋಪಿಸಿದ ಬೆನ್ನಲ್ಲೇ ಈ ನಿರ್ಣಯ ಮಂಡಿಸಲಾಗಿದೆ. ನಮ್ಮ ಪಕ್ಷದ ನಾಯಕರು ಹಾಗೂ ಶಾಸಕರು ಆಪ್ ಬಿಟ್ಟು ಬೇರೆ ಬೇರೆ ಪಕ್ಷಗಳಿಗೆ ಸೇರುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿದ್ದು ಇದೆಲ್ಲಾ ಶುದ್ದ ಸುಳ್ಳು ನಮ್ಮ ಪಕ್ಷದಲ್ಲಿ ಸಂಖ್ಯಾ ಬಲ ಕಡಿಮೆ ಆಗಿಲ್ಲ ಎಂಬುದನ್ನು ನಾವು ತೋರಿಸಿ ಕೊಡುವ ನಿಟ್ಟಿನಲ್ಲಿ ಇಂದು ವಿಶ್ವಾಸ ನಿರ್ಣಯವನ್ನು ಮಂಡಿಸುತ್ತೇವೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಇಷ್ಟು ಮಾತ್ರವಲ್ಲದೆ ಕೇಂದ್ರ ತನಿಖಾ ಸಂಸ್ಥೆಯಿಂದ ನೀಡುತ್ತಿರುವ ಸಮನ್ಸ್ ವಿಚಾರವಾಗಿಯೂ ಇಂದಿನ ಸಭೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದುವರೆಗೆ ಕೇಂದ್ರ ತನಿಖಾ ಸಂಸ್ಥೆಯಿಂದ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿ ಒಟ್ಟು ಆರು ಸಮನ್ಸ್ ಗಳನ್ನು ನೀಡಲಾಗಿದೆ ಆದರೆ ಅದೆಲ್ಲವನ್ನು ಕೇಜ್ರಿವಾಲ್ ತಿರಸ್ಕರಿಸಿದ್ದಾರೆ ಅಲ್ಲದೆ ನಮ್ಮ ಪಕ್ಷವನ್ನು ಬಲಹೀನ ಗೊಳಿಸುವ ತಂತ್ರ ಇದು ಹಾಗಾಗಿ ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಪಕ್ಷ ಹೇಳಿದೆ.
ಇದನ್ನೂ ಓದಿ: Panchkula Home: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮನೆಯಲ್ಲಿ ಕಳ್ಳತನ… ತಾಯಿಯಿಂದ ದೂರು