Advertisement
ಈಗ ಇವರ ವಿಷಯ ಪ್ರಸ್ತಾಪಿಸುವುದಕ್ಕೂ ಕಾರಣವಿದೆ. ದೀಪಾ ಕರ್ಮಾಕರ್ ದಾರಿಯಲ್ಲಿ ಭಾರತಕ್ಕೆ ಮತ್ತೂಂದು “ದೀಪ’ ಸಿಕ್ಕಂತಾಗಿದೆ. ಅವರೇ ಹೈದರಾಬಾದ್‌ನ ಅರುಣಾ ಬುದ್ಧ ರೆಡ್ಡಿ. ಇತ್ತೀಚಿಗೆ ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ ನಡೆದ ವಿಶ್ವ ಜಿಮ್ನಾಸ್ಟಿಕ್ಸ್ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಕಂಚಿನ ಪದಕ ಗಳಿಸುವ ಮೂಲಕ ಭಾರತದ ಮತ್ತೂಂದು “ದೀಪ’ವಾಗಿ ಬೆಳಗುವ ಹಾದಿಗೆ ಮುನ್ನುಡಿ ಬರೆದಿದ್ದಾರೆ.
ಜಿಮ್ನಾಸ್ಟಿಕ್ಸ್ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಪಡೆದ ಅರುಣಾ ಸ್ಪರ್ಧಿಸಿದ್ದು ಅತ್ಯಂತ ಕಠಿಣ ವಿಭಾಗದ ವಾಲ್ಟ್ನಲ್ಲಿ. ಇದರಲ್ಲಿ ಅಮೋಘ ಪ್ರದರ್ಶನ ನೀಡಿದ್ದರಿಂದ ಆಕೆಗೆ ದೊರೆತದ್ದು ಕಂಚಿನ ಪದಕ. ಆ ಮೂಲಕ ಈ ಸ್ಪರ್ಧೆಯಲ್ಲಿ ಪದಕ ಗೆದ್ದು ಸಾಧನೆ ಮಾಡಿದ ಮೊದಲ ಭಾರತೀಯ ಜಿಮ್ನಾಸ್ಟಿಯನ್ ಎಂಬ ದಾಖಲೆ ಮಾಡಿದರು. ಇದಕ್ಕೂ ಮುನ್ನ ಭಾರತದ ಯಾವ ಜಿಮ್ನಾಸ್ಟಿಯನ್ ಸ್ಪರ್ಧಿಯೂ ವಿಶ್ವಕಪ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಿಲ್ಲ. ಕರಾಟೆ ಬಿಟ್ಟು, ಜಿಮ್ನಾಸ್ಟಿಕ್‌ಗೆ ಬಂದ್ರು
ಚಿಕ್ಕ ವಯಸ್ಸಿನಲ್ಲೇ ಕ್ರೀಡೆ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಅರುಣಾ ಕರಾಟೆ ಅಭ್ಯಾಸ ನಡೆಸುತ್ತಿದ್ದರು. ನಂತರದ ದಿನಗಳಲ್ಲಿ ಕರಾಟೆಗೆ ಗುಡ್ ಬೈ ಹೇಳಿ ಅರುಣಾ ಜಿಮ್ನಾಸ್ಟಿಕ್ಸ್ ಕಡೆ ವಾಲಿದರು. ಅಲ್ಲಿಂದ ಜಿಮ್ನಾಸ್ಟಿಕ್ ಅಭ್ಯಾಸ ಶುರು ವಾಯಿತು. ಹಲವು ಏಳು ಬೀಳುಗಳ ನಡುವೆ ಹೈದರಾಬಾದಿನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದ ಜಿಮ್ನಾಸ್ಟಿಕ್ ತರಬೇತಿಗೆ ಸೇರ್ಪಡೆಗೊಂಡರು. ಮುಂದೊಂದು ದಿನ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಬೇಕೆಂಬ ಕನಸು ಹೊತ್ತರು.
Related Articles
ಮೊದಲು ಸ್ವರ್ಣಲತಾ ಹಾಗೂ ರವೀಂದ್ರ ಎಂಬುವರ ಮಾರ್ಗದರ್ಶನಲ್ಲಿ ತರಬೇತಿ ಪಡೆದರು. ಈಗ ಗಿರಿರಾಜ್, ಬ್ರಿಜ್ ಕಿಶೋರ್ ಅವರಿಂದ ಕೋಚಿಂಗ್ ಪಡೆಯುತ್ತಿದ್ದಾರೆ.
Advertisement
ದೇವಲಾಪುರ ಮಹದೇವಸ್ವಾಮಿ