ಇದೀಗ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಫೀವರ್ ಹೆಚ್ಚಾಗಿದ್ದು, ಹೆಚ್ಚಿನ ಚಿತ್ರಗಳು ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಿತ್ತಿದೆ. ಈ ಸಾಲಿಗೆ ತಮಿಳಿನ “ದಿ ಲೆಂಜೆಡ್’ ಚಿತ್ರವೂ ಸೇರಿದ್ದು, ಚಿತ್ರ ಕನ್ನಡದಲ್ಲೂ ಬಿಡುಗಡೆ ಕಾಣಲಿದೆ.
ತಮಿಳುನಾಡಿನ ಖ್ಯಾತ ಉದ್ಯಮಿ ಅರುಲ್ ಸರವಣನ್ “ದಿ ಲೆಜೆಂಡ್’ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದೇ ತಿಂಗಳ 28 ರಂದು ಸಿನಿಮಾ ತೆರೆಗೆ ಬರಲಿದೆ.
ಜಗತ್ತಿನಾದ್ಯಂತ ಪ್ರಚಾರ ನಡೆಸಿರುವ ಲೆಜೆಂಡ್ ಚಿತ್ರತಂಡ ಬೆಂಗಳೂರಿನಲ್ಲಿಯೂ ಪ್ರಚಾರ ಕಹಳೆ ಮೊಳಗಿಸಿದೆ. ಇತ್ತೀಚೆಗೆ ಸಿಲಿಕಾನ್ ಸಿಟಿಗೆ ಬೆಂಗಳೂರಿನಲ್ಲಿ ಮಾಧ್ಯಮಗಳದೊಂದಿಗೆ ನಾಯಕ ಸರವಣನ್, ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲ, ರೈ ಲಕ್ಷ್ಮೀ ಸಿನಿಮಾದ ಬಗ್ಗೆ ಒಂದಷ್ಟು ಅನುಭವ ಹಂಚಿಕೊಂಡಿರು.
ನಾಯಕ ಸರವಣನ್ ಮಾತನಾಡಿ, “ಸಿನಿಮಾ ಮಾಡಬೇಕು ಎಂಬ ಕನಸು ಚಿಕ್ಕ ವಯಸ್ಸಿನಿಂದ ಇತ್ತು. ಬ್ಯುಸಿನೆಸ್ ಮೇಲೆ ಹೆಚ್ಚು ಫೋಕಸ್ ಇತ್ತು. ಎಲ್ಲಾ ಸೆಟಲ್ ಆದ ಮೇಲೆ ಸಿನಿಮಾ ಮಾಡಿದ್ದೇನೆ. ಕಳೆದ ಹದಿನೈದು ವರ್ಷದಿಂದ ನಿರ್ದೇಶಕ ಜೆ.ಡಿ.ಜೆರ್ರಿ ನನ್ನ ಜೊತೆ ಇದ್ದಾರೆ. ಪ್ರತಿಯೊಂದು ದೃಶ್ಯವೂ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾ ನೋಡಿ ಪ್ರೊತ್ಸಾಹಿಸಿ’ ಎಂದರು.
“ಹಾರಿಜನ್ ಸ್ಟುಡಿಯೋಸ್’ ಮೂಲಕ ರಾಜ್ಯದಲ್ಲಿ ಚಿತ್ರ ವಿತರಣೆ ಜವಾಬ್ದಾರಿ ಹೊತ್ತಿರುವ, ಸಿನಿಮಾ ವಿತರಕ ಟೋನಿರಾಜ್, ಕನ್ನಡದಲ್ಲೂ ಸಿನಿಮಾ ಬುಕ್ಕಿಂಗ್ ಆಗುತ್ತಿದೆ. ಪ್ರತಿಯೊಬ್ಬರು ಸಿನಿಮಾ ನೋಡಿ ಬೆಂಬಲಿಸಿ ಎಂದರು.
ಟ್ರೇಲರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ “ದಿ ಲೆಜೆಂಡ್’ ಸಿನಿಮಾಕ್ಕೆ ಜೆ.ಡಿ.ಜೆರ್ರಿ ಆಕ್ಷನ್ ಕಟ್ ಹೇಳಿದ್ದು, ಊರ್ವಶಿ ರೌಟೇಲಾ ಈ ಸಿನಿಮಾ ಮೂಲಕ ಮೊದಲ ಬಾರಿಗೆ ತಮಿಳು ಚಿತ್ರರಂಗ ಪ್ರವೇಶ ಮಾಡಿದ್ದು, ಸರವಣನ್ ಗೆ ಜೋಡಿಯಾಗಿ ನಟಿಸಿದ್ದಾರೆ. ನಸ್ಸಾರ್, ಪ್ರಭು, ಸುಮನ್, ವಿವೇಕ್, ಇಮ್ಮನ್ ಅಣ್ಣಾಚಿ, ಯಶಿಕಾ ಆನಂದ್ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಹ್ಯಾರೀಸ್ ಜಯರಾಜ್ ಸಂಗೀತ ಸಂಯೋಜನೆ ಸಿನಿಮಾಕ್ಕಿದ್ದು, ಜಗತ್ತಿನಾದ್ಯಂತ 2000ಕ್ಕೂ ಹೆಚ್ಚು ಪರದೆಗಳಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ