Advertisement

ಕಲಬುರಗಿ ಪೌರ ಕಾರ್ಮಿಕರೇ ಅದೃಷ್ಟವಂತರು: ವೆಂಕಟೇಶ

09:13 AM Jul 05, 2017 | |

ಕಲಬುರಗಿ: ರಾಜ್ಯದ ಎಲ್ಲ ಪೌರ ಕಾರ್ಮಿಕರಿಗಿಂತ ಕಲಬುರಗಿ ಕಾರ್ಮಿಕರು ನಿಜಕ್ಕೂ ಅದೃಷ್ಟವಂತರು. ನಿಮಗೆ ಒಳ್ಳೆಯ ಆಯುಕ್ತರು ಸಿಕ್ಕಿದ್ದಾರೆ. ಗ್ಯಾಸ್‌, ಜೀವ ವಿಮೆ ಸೇರಿದಂತೆ ಹಲವಾರು ಸೌಕರ್ಯ ಮಾಡಿಕೊಟ್ಟಿದ್ದಾರೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್‌. ವೆಂಕಟೇಶ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಇಲ್ಲಿನ ಟೌನ್‌ ಹಾಲ್‌ನಲ್ಲಿ ಮಂಗಳವಾರ ಪೌರಕಾರ್ಮಿಕರ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ಇನ್ನು ಮುಂದೆ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಸ್ಥಾಪನೆ ಆಗಿರುವುದರಿಂದ ನಿಮಗೆ ಅಗತ್ಯ ಎಲ್ಲ ಸಾಲಗಳನ್ನು ನೇರವಾಗಿ ನಿಗಮದಿಂದಲೇ ಪಡೆಯಬಹುದು. ಇಲ್ಲಿ ಎಲ್ಲಾ ಕಾರ್ಮಿಕರಿಗೆ ಅವಕಾಶವಿದೆ. ಈಗಾಗಲೇ 1024 ಕಾರ್ಮಿಕರು ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕೆಲಸ ಮಾಡಿದ್ದರೂ, ಅವರನ್ನು ಕೈ ಬಿಡಲಾಗಿದ್ದರೆ
ದೂರು ಕೊಡಿ. ಅದರ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡು ಪುನಃ ನೇಮಕ ಮಾಡಿಕೊಳ್ಳಲು ಏರ್ಪಾಡು ಮಾಡುವುದಾಗಿ ಹೇಳಿದರು.

ಈ ವೇಳೆ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲಕುಮಾರ ಮಾತನಾಡಿ, ಪೌರ ಕಾರ್ಮಿಕರ ಎಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡಿದ್ದೇವೆ. 85 ಗುತ್ತಿಗೆ ಕಾರ್ಮಿಕರಿಗೆ ಗ್ಯಾಸ್‌ ಸ್ಟೌಗಳನ್ನು ನೀಡಲಾಗಿದೆ. 40 ಜನರಿಗೆ ಜೀವ ವಿಮೆ
ಮಾಡಿಸಲಾಗಿದೆ. ಅವರಿಗೆ 2 ಲಕ್ಷ ರೂ. ಪರಿಹಾರ ಸಿಗಲಿದೆ. ಎಲ್ಲ ಪೌರ ಕಾರ್ಮಿಕರಿಗಾಗಿ ಮುಂದಿನ 8-10 ತಿಂಗಳಿಗೆ ಆಗುವಷ್ಟು ಸಂಬಳವನ್ನು ಇಡಲಾಗಿದೆ. ಸಾರ್ವಜನಿಕವಾಗಿ ಕಾರ್ಮಿಕರ ಬಟ್ಟೆಗಳನ್ನು ಒಗೆದು ಶುಚಿಯಾಗಿರುವಂತೆ
ನೋಡಿಕೊಳ್ಳಲು ದೊಡ್ಡ ವಾಷಿಂಗ್‌ ಮಷಿನ್‌ ಹಾಕಲಾಗಿದೆ. ಬಯೋಮೆಟ್ರಿಕ್‌ ವ್ಯವಸ್ಥೆಯ ಮೂಲಕ ಹಾಜರಾತಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ನಿಮಗೆ ಸಂಬಳ ಕಡಿತದ ಭಯವಿಲ್ಲ. ಮೊದಲು 741 ಪೌರ ಕಾರ್ಮಿಕರಿದ್ದರೂ,
ಅವಶ್ಯಕತೆ ಇಲ್ಲದೆ ಇದ್ದರೂ ಈಗ 1024 ಜನರಿದ್ದಾರೆ. ಅಲ್ಲದೆ, ಇನ್ನೂ ಕೆಲವರಿಗೆ ಅವಕಾಶ ಮಾಡಿ ಕೊಡಲಾಗುತ್ತಿದೆ. ಇದೆಲ್ಲವೂ ಪೌರ ಕಾರ್ಮಿಕರಿಗಾಗಿ ಮಾಡಿದ್ದಾಗಿದೆ ಎಂದರು. ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ
ರಮಾನಂದ ಉಪಾಧ್ಯ, ಮಂಗರವಾಡಿಯ ಪ್ರಶಸ್ತಿ ಪಡೆದ ಕಾರ್ಮಿಕನನ್ನೆ ಕೆಲಸದಿಂದ ತೆಗೆದು  ಹಾಕಿದ್ದಾರೆ. ಅದರೊಂದಿಗೆ 60 ಜನರನ್ನು ಕೈ ಬಿಡಲಾಗಿದೆ. ಕೂಡಲೇ ನ್ಯಾಯ ಕೊಡಬೇಕು ಎಂದು ಮನವಿ ಮಾಡಿದರು. ಕಾರ್ಮಿಕ ಶರಣಪ್ಪ ನಮಗೆ ಸಂಬಳ ಹಾಗೂ ಕಾಯಂ ಮಾಡಬೇಕು ಎಂದಾಗ ಈ ಕುರಿತು ವಿವರವಾದ ಪತ್ರ ಬರೆದು ಆಯೋಗಕ್ಕೆ ನೀಡುವಂತೆ ಸೂಚನೆ ನೀಡಿದರು.

ಕೃಷ್ಣನ ಮನೆಗೆ ಭೇಟಿ: ನಗರದ ಬಸ್‌ ನಿಲ್ದಾಣ, ಇಂದಿರಾ ನಗರ, ವಸಂತ ನಗರಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ ಮಾಡಿದ ಆಯೋಗದ ಅಧ್ಯಕ್ಷ ವೆಂಕಟೇಶ ಅವರು, ಜು.24ರಂದು ಗಾಜಿಪುರದ ಮೆಹತರ್‌ ಗಲ್ಲಿನ ಚರಂಡಿಯಲ್ಲಿ ಕೊಚ್ಚಿ ಹೋದ ಬಾಲಕ ಕೃಷ್ಣ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾತ್ವಂನ ಹೇಳಿದರು.

ಈ ರೀತಿಯಾಗಿ ಮಳೆಗಾಲದಲ್ಲಿ ಚರಂಡಿಯಲ್ಲಿ ಹರಿದು ಹೋಗಿ ಸಾವನ್ನಪ್ಪುವ ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತು ಸಮಗ್ರ ತನಿಖೆ ಮಾಡಲಾಗುವುದು. ಆಯೋಗದಿಂದ ಪರಿಹಾರ ನೀಡಲು ಸಾಧ್ಯವಾದರೆ ಖಂಡಿತ ಪರಿಹಾರ
ದೊರಕಿಸುವುದಾಗಿ ಹೇಳಿದರು. ಅಲ್ಲದೆ, ಕೃಷ್ಣನ ತಂದೆಗೆ ಸಾರ್ವಜನಿಕ ಶೌಚಾಲಯ ನಿರ್ವಹಣೆ ಗುತ್ತಿಗೆ ನೀಡುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು, ಹೆಚ್ಚಿನ ಪರಿಹಾರಕ್ಕೆ ಪ್ರಯತ್ನವನ್ನು ಮಾಡೋಣ ಎಂದರು.
ಆಯೋಗದ ಸದಸ್ಯ ಗೋಕುಲ ನಾರಾಯಣ ಸ್ವಾಮಿ, ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ, ಆರೋಗ್ಯ ಅಧಿಕಾರಿ, ಪರಿಸರ ಅಧಿಕಾರಿಗಳು ಇದ್ದರು.

Advertisement

ರಜೆ ಕೊಡಿ, ಗುತ್ತಿಗೆ ರದ್ದು ಮಾಡಿ
ನಮಗೆ ವಾರಕ್ಕೊಮ್ಮೆಯಾದರೂ ರಜೆ ಕೊಡಿ.. ಮಳೆ, ಗಾಳಿ ಬಿಸಿಲು ಎನ್ನದೇ ವರ್ಷದ ಎಲ್ಲಾ ದಿನಗಳು ನಾವು ಕೆಲಸ ಮಾಡುತ್ತೇವೆ. ತುರ್ತು ಅಗತ್ಯಗಳಿಗೆ ರಜೆ ಹಾಕಿದರೆ ಸಂಬಳ ಕಡಿತ ಆಗುತ್ತದೆ. ಆದ್ದರಿಂದ ಗುತ್ತಿಗೆ ಪದ್ಧತಿ ರದ್ದು ಮಾಡಿ ಕಾಯಂ ಮಾಡಿ. ಈಗಾಗಲೇ ಸರಕಾರ ಈ ಕುರಿತು ನಿರ್ಣಯ ಕೈಗೊಂಡಿದ್ದರೂ ಇನ್ನೂ ಜಾರಿ ಆಗಿಲ್ಲ ಎಂದು ಕರ್ನಾಟಕ ರಾಜ್ಯ ಪೌರಕಾರ್ಮಿಕರಮಹಾ ಸಂಘದ ಅಧ್ಯಕ್ಷ ಶರಣು ಅತನೂರು ತಿಳಿಸಿದರು. ಆಯೋಗದ ಅಧ್ಯಕ್ಷರು ಮಾತನಾಡಿ, ಈ ಕುರಿತು ಆದಷ್ಟು ಬೇಗ ಪರಿಹಾರ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next