ಒಂದು ಕಾಲದಲ್ಲಿ ಬರೀ ಹಾಲಿವುಡ್ ಸಿನಿಮಾಗಳ ಕಲ್ಪನೆಯ ಸರಕಾಗಿದ್ದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇಲ್ಲವೇ “ಎ.ಐ.’ ಇವತ್ತು ವಾಸ್ತವದ ಹೊಸ್ತಿಲಲ್ಲಿ ನಿಂತಿದೆ. ಮುಂಬರುವ ದಿನಗಳಲ್ಲಿ ನಮ್ಮ ಬದುಕನ್ನು ಹಿಂತಿರುಗಲಾಗದ ರೀತಿಯಲ್ಲಿ ಮಾರ್ಪಡಿಸಿಬಿಡುವ ಕಡೆಗೆ ಮೆಲ್ಲ ಮೆಲ್ಲಗೆ ಆದರೆ ಖಚಿತವಾಗಿ ಹೆಜ್ಜೆ ಹಾಕುತ್ತಿದೆ.
ಹಾಗಿದ್ದರೆ ಏನಿದು “ಎ.ಐ.? ಇದೊಂದು ಯಂತ್ರವೇ? ಒಂದು ಬಗೆಯ ಸಾಫ್ಟ್ವೇರೇ? ಇಲ್ಲವೇ ಬರೀ ಒಂದು ಪರಿಕಲ್ಪನೆಯೇ? ಇಪ್ಪತ್ತೂಂದನೇ ಶತಮಾನದ ಸಾಮಾಜಿಕ ಮತ್ತು ಆರ್ಥಿಕ ಸಮೀಕರಣಗಳನ್ನು ಬುಡಮೇಲು ಮಾಡಿಬಿಡಬಹುದು ಎಂದು ಹೇಳಲಾಗುವ ಇದರ ಒಳಿತು ಕೆಡುಕುಗಳೇನು? ಮನುಕುಲದ ಒಳಿತಿಗೆ ಇದನ್ನು ಜಾಣ್ಮೆಯಿಂದ ಬಳಸುವ ದಾರಿ ಯಾವುದು?
ಯಾವ ಯಾವ ಕ್ಷೇತ್ರಗಳಲ್ಲಿ ಇದನ್ನು ಬಳಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ? ಇದರ ಅಪಾರ ಸಾಧ್ಯತೆಗಳ ಬಗ್ಗೆ ಹರಡಿರುವ ಕೆಲವು ತಪ್ಪು ಅನಿಸಿಕೆಗಳಾವುವು? ಇವೆಲ್ಲ ಪ್ರಶ್ನೆಗಳಿಗೂ ಉತ್ತರ ಈ ಬಾರಿಯ “ಮುನ್ನೋಟ ಮಾತುಕತೆ’ಯಲ್ಲಿದೆ. ಟಬೋì ಪಾಸ್ ಸಾಫ್ಟ್ವೇರ್ ಸಂಸ್ಥೆಯ ಎಂಜಿನಿಯರಿಂಗ್ ಮುಖ್ಯಸ್ಥರಾದ ಪವಮಾನ್ ಅಥಣಿ ಈ ಕುರಿತು ಉಪನ್ಯಾಸ ನೀಡಲಿದ್ದಾರೆ.
ಎಲ್ಲಿ?: ಮುನ್ನೋಟ ಪುಸ್ತಕ ಮಳಿಗೆ, ಡಿ.ವಿ.ಜಿ. ರಸ್ತೆ, ಬಸವನಗುಡಿ
ಯಾವಾಗ?: ಜು.8, ಭಾನುವಾರ, ಬೆ.11.30
ಪ್ರವೇಶ: ಉಚಿತ
ಸಂಪರ್ಕ: 080- 26603000