Advertisement

ಕಲೆ ಭಾರತೀಯರಿಗೆ ಆರಾಧನೆಯ ಮಾಧ್ಯಮ 

06:00 AM Apr 15, 2018 | Team Udayavani |

ಉಡುಪಿ: ವಿದೇಶೀಯರಿಗೆ ಕಲೆ ಆನಂದಕ್ಕೆ ಮಾತ್ರ. ಆದರೆ ಭಾರತೀಯರಿಗೆ ಅದು ಆರಾಧನ ಮಾಧ್ಯಮ ಎಂದು ಸಾಹಿತಿ
ಅಂಬಾತನಯ ಮುದ್ರಾಡಿ ಹೇಳಿದರು. ಶನಿವಾರ ಅಂಬಲಪಾಡಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಮೈದಾನದಲ್ಲಿ ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ “ಅರ್ವತ್ತರ ಅರ್ಪಣೆ’ ಸಮ್ಮಾನ, ಪುರಸ್ಕಾರ, ಪ್ರದರ್ಶನ ಮತ್ತು ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಶುಭಾಶಂಸನೆಗೈದರು.

Advertisement

ಕಲಾವಿದರನ್ನು ಗುರುತಿಸುವ ಕಣ್ಣು ಮತ್ತು ಗೌರವಿಸುವ ಹೃದಯ ಇದ್ದಾಗ ಕಲೆ ಬೆಳೆಯುತ್ತದೆ. ಕಲೆಯ ಸಂಸರ್ಗ ನಮಗೆ ಬೇಕು. ಕಲೆಯ ಆಶ್ರಯ ದಾತರು ದೇವರಿಗೆ ಪ್ರಿಯವಾದ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. 
ಕಾರ್ಯಕ್ರಮವನ್ನು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಅಧ್ಯಕ್ಷ ಡಾ| ಜಿ. ಶಂಕರ್‌ ಉದ್ಘಾಟಿಸಿದರು. ಅಂಬಲ ಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು.

 ಹಿರಿಯ ಮದ್ದಳೆವಾದಕ ಗುರು ಹಿರಿಯಡಕ ಗೋಪಾಲ ರಾವ್‌ ಅವರನ್ನು ಸಮ್ಮಾನಿಸಲಾಯಿತು. ಹವ್ಯಾಸಿ ಕಲಾವಿದ ಗುಳ್ಮೆ ನಾರಾಯಣ ಪ್ರಭು ಅವರನ್ನು ಪುರಸ್ಕರಿಸಲಾಯಿತು. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಉಡುಪಿ ಯಕ್ಷಗಾನ ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣ, ಕಿದಿಯೂರು ಉದಯ್‌ಕುಮಾರ್‌ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ ಅಧ್ಯಕ್ಷ ಕೆ. ಉದಯ ಕುಮಾರ್‌ ಶೆಟ್ಟಿ, ಅಂಬಲಪಾಡಿ ಮೆಡಿಕಲ್‌ ಸೆಂಟರ್‌ನ ಡಾ| ನವೀನ್‌ ಬಲ್ಲಾಳ್‌, ಗೋಪಾಲಕೃಷ್ಣ ಭಟ್‌, ತಮ್ಮಯ್ಯ ಸೇರಿಗಾರ್‌ ಉಪಸ್ಥಿತರಿದ್ದರು. ಮಂಡಳಿ ಅಧ್ಯಕ್ಷ ಮುರಲಿ ಕಡೆಕಾರ್‌ ಸ್ವಾಗತಿಸಿ ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next