Advertisement

ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿ ನಿಂತ ಕಲೆ

05:14 PM Mar 01, 2018 | Team Udayavani |

ಸುರತ್ಕಲ್‌ : ಶುಭ್ರ ಆಕಾಶ, ಅಲ್ಲಿ ಹಾರಾಡುತ್ತಿರುವ ಪಕ್ಷಿಗಳು, ಕೆಳ ಭಾಗದಲ್ಲಿ ಸಸಿಗಳನ್ನು ಪೋಷಿಸುತ್ತಿರುವ ಮಕ್ಕಳು, ಸುತ್ತಲೂ ಕಸ ಕಡ್ಡಿಗಳನ್ನು ಗುಡಿಸಿ ಸ್ವಚ್ಛತೆ ಕಾಪಾಡುವ ಜನರು. ಇದು ನೈಜ ಚಿತ್ರಣ ಅಲ್ಲ ಬದಲಾಗಿ ಸ್ವಚ್ಛತೆ, ಪರಿಸರದ ಕುರಿತು ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿ ನಿಂತ ಕಲೆ.

Advertisement

ಸುರತ್ಕಲ್‌ ಫ್ಲೈ ಓವರ್‌ ತಳ ಭಾಗದ ಕೊನೆಯ ಸ್ಲ್ಯಾಬ್ ಗಳನ್ನು ಸ್ವಚ್ಛಗೊಳಿಸಿ, ವಿದ್ಯಾರ್ಥಿಗಳು ಸುಂದರ ಚಿತ್ರ ಬಿಡಿಸಿ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಸುಂದರೀಕರಣದಲ್ಲಿ ಭಾಗಿಯಾದ ಮಕ್ಕಳು ತೈಲವರ್ಣದ ಚಿತ್ರ ಬಿಡಿಸಿದರೆ ಕಲಾ ಶಿಕ್ಷಕರಾದ ಸುಹಾನ್‌ ನಾನಿಲ್‌, ಲಾವಣ್ಯ ಅವರು ಮಾರ್ಗದರ್ಶನ ನೀಡಿದರು.

ಸುರತ್ಕಲ್‌ ಸ್ಲ್ಯಾಬ್ ಉದ್ದಕ್ಕೂ ಇಂತಹ ಬಣ್ಣ ಬಣ್ಣದ ಚಿತ್ರಗಳು ನೋಡುಗರನ್ನು ಆಕರ್ಷಿಸುತ್ತಿದೆ. ಪ್ರತೀ ವರ್ಣ ಚಿತ್ರಗಳು ಸ್ವಚ್ಛತೆ, ಪಾರಂಪರಿಕ ಆಚರಣೆ, ಕಲೆಗಳನ್ನು ಬಿಂಬಿಸುತ್ತಿವೆ.

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
ಚಿತ್ರ ಬಿಡಿಸುವಲ್ಲಿ ಸಂಭ್ರಮಿಸಿದ ಮಕ್ಕಳು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರಲ್ಲದೆ, ಅವರು ಕಲಿಯುತ್ತಿರುವ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ  ವರ್ಗದಿಂದ ಪ್ರೋತ್ಸಾಹವೂ ಲಭಿಸಿತು.

Advertisement

Udayavani is now on Telegram. Click here to join our channel and stay updated with the latest news.

Next