Advertisement
ಚಿಕ್ಕೋಡಿ ಯಲ್ಲಿ ಮಾತನಾಡಿದ ಸಿಎಂ ‘ಮಹಿಳೆ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರ ಜಾಮೀನು ಅರ್ಜಿ ವಜಾ ಆಗಿದ್ದಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕಾಗಿದೆ. ಅಪಹರಣ ವಾದ ಮಹಿಳೆ ಪತ್ತೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಈ ಬಗ್ಗೆ ಮಾಹಿತಿ ಇಲ್ಲ ಎಂದರು.
ಗದಗ: ಮಾಜಿ ಸಚಿವ ಎಚ್.ಡಿ. ರೇವಣ್ಣ ಬಂಧನ ಕುರಿತಂತೆ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ‘ನ್ಯಾಯಾಲಯವುಂಟು, ಕೋರ್ಟ್ ಉಟು, ಕಾನೂನುಂಟು. ನಾವು ಯಾವುದಕ್ಕೂ ಭಾಗಿಯಾಗೊದಿಲ್ಲ. ನಮಗೆ ಅವಶ್ಯಕಥೆಯಿಲ್ಲ. ಅವರು ಕೋರ್ಟ್, ಕಾನೂನಿನಲ್ಲಿ ಏನು ಬೇಕೋ ರಕ್ಷಣೆ ಪಡೆದುಕೊಳ್ಳಲಿ’ ಎಂದಿದ್ದಾರೆ.
Related Articles
Advertisement
ಎಕ್ಸ್ ಪೋಸ್ಟ್ ನಲ್ಲಿ ವ್ಯಂಗ್ಯ
ಕರ್ನಾಟಕ ಕಾಂಗ್ರೆಸ್ ಎಕ್ಸ್ ಪೋಸ್ಟ್ ನಲ್ಲಿ ರೇವಣ್ಣ ಬಂಧನವನ್ನು ವ್ಯಂಗ್ಯವಾಗಿ ಟೀಕಿಸಿದ್ದು, “ಮೋದಿಯವರ ಪ್ರಜ್ವಲ ಗ್ಯಾರಂಟಿ”ಯಲ್ಲಿ ಮೊದಲ ಬಂಧನ!. ಈ “ಬಂಧನ” ಯಾವ ಜನುಮದ ಅನುಬಂಧನ?!. ಮಹಿಳಾ ಪೀಡಕರು, ಮಹಿಳೆಯ ಅಪಹರಣಕಾರರು, ಅತ್ಯಾಚಾರಿಗಳನ್ನು ಕಂಡರೆ ಮೋದಿಯವರಿಗೆ ಎಲ್ಲಿಲ್ಲದ ಪ್ರೀತಿ.ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೇವಣ್ಣನೊಂದಿದೆ NDA ಮೈತ್ರಿಕೂಟದ ಸ್ಟಾರ್ ಪ್ರಚಾರಕ ರೇವಣ್ಣ ಅವರೂ ಮಹಿಳೆಯರನ್ನು ಕಾಡಿಸಿ, ಪೀಡಿಸಿ, ಅಪಹರಿಸಿದ್ದರಲ್ಲಿ ಪ್ರಮುಖ ಆರೋಪಿ.ಮಹಿಳಾ ಪೀಡಕ ಆರೋಪಿಯ ಕೈಯನ್ನು ಗಟ್ಟಿಯಾಗಿ ಹಿಡಿದಿರುವ ನರೇಂದ್ರ ಮೋದಿ ಅವರು ದೇಶಕ್ಕೆ ಯಾವ ಸಂದೇಶ ನೀಡಲು ಹೊರಟಿದ್ದರು?” ಎಂದು ರೇವಣ್ಣ ಮತ್ತು ಮೋದಿ ಅವರು ಜತೆಯಾಗಿ ನಿಂತಿರುವ ಫೋಟೋ ಪೋಸ್ಟ್ ಮಾಡಿದೆ.
”ಮಹಿಳೆಯರ ಮಾನ, ಪ್ರಾಣ, ಘನತೆ ಎತ್ತಿ ಹಿಡಿಯುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ನಮ್ಮ ಸರ್ಕಾರ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಹೆಚ್.ಡಿ ರೇವಣ್ಣರನ್ನು ಬಂಧಿಸಿದ SIT ತಂಡ ಮಹಿಳಾ ಪೀಡನೆಯ ವಿಕೃತ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆ.ಮಹಿಳೆಯರ ರಕ್ಷಣೆಗೆ ನಮ್ಮ ಸರ್ಕಾರದ ಬದ್ಧತೆ ಆಚಲವಾಗಿರುತ್ತದೆ” ಎಂದು ಇನ್ನೊಂದು ಪೋಸ್ಟ್ ಮಾಡಿದೆ.