Advertisement
ಮತ್ತಿಕೆರೆಯ ವೆಂಕಟರಮಣ್ (57) ಬಂಧಿತ ಆರೋಪಿ.
Related Articles
Advertisement
ಇನ್ನೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ಕಾಲು ನೋವಿನ ಚಿಕಿತ್ಸೆಗೆ ಹೋದಾಗ ಬಟ್ಟೆ ತೆಗೆಸಿ ಚಿಕಿತ್ಸೆ ಕೊಡಲು ಆರಂಭಿಸಿದ್ದಾನೆ. ಅದನ್ನು ಪ್ರಶ್ನಿಸಿದ ಮಹಿಳೆಗೆ ತಮ್ಮ ಮನೆಯವರಿಗೆ ತಿಳಿಸಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ಅದೇ ಮಹಿಳೆ ಮತ್ತೂಮ್ಮೆ ಹೋದಾಗಲೂ ಆರೋಪಿ ಅದೇ ರೀತಿ ನಡೆದುಕೊಂಡಿದ್ದಾನೆ. ಆಗ ಆತನ ಮೊಬೈಲ್ ಕಸಿದುಕೊಂಡು ನೋಡಿದಾಗ ಹತ್ತಾರು ವಿಡಿಯೋಗಳು ಬೆಳಕಿಗೆ ಬಂದಿವೆ. ಬಳಿಕ ಮಹಿಳೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ. ಮತ್ತೂಂದೆಡೆ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಆಗುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿದ ಮಹಿಳಾ ಸಂರಕ್ಷಣಾ ದಳದ ಎಸಿಪಿ ಮಾರ್ಗದರ್ಶನದಲ್ಲಿ ಪಿಐ ಗೋವಿಂದರಾಜು, ಹಜರೇಶ್ ಕಿಲ್ಲೇದಾರ್ ಮತ್ತು ದುರ್ಗ ಮತ್ತು ತಂಡ ಆರೋಪಿಯನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದೆ. ಈತನ ವಿರುದ್ಧ ಯಶವಂತಪುರ, ಬಸವನಗುಡಿ ಮತ್ತು ಸಿಇಎನ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಪೋಕ್ಸೋ ಪ್ರಕರಣ ಕೂಡ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.
ಪಿಯುಸಿ ಮಾತ್ರ ಓದಿದ್ದರೂ ತರಬೇತಿ ಪಡೆದು ಕ್ಲಿನಿಕ್ ತೆರೆದಿದ್ದ
ಆಂಧ್ರಪ್ರದೇಶ ಗುತ್ತಿತಾಡಪತ್ರಿ ಮೂಲದ ವೆಂಕಟರಮಣ್ ಅಲಿಯಾಸ್ ವೆಂಕಟ್, ಜಾಲಹಳ್ಳಿಯ ಬಿಇಎಲ್ ಶಾಲಾ ಮತ್ತು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ನಂತರ ಮಾರತ್‌ಹಳ್ಳಿಯ ಪಿಟಿಲೆಟ್ ಇಂಡಸ್ಟ್ರೀಟ್ ಕಂಪನಿಯಲ್ಲಿ 10 ವರ್ಷ ಕಾಲ ಕಮರ್ಷಿಯಲ್ ಮ್ಯಾನೇಜರ್ ಆಗಿದ್ದ.
ಈ ಮಧ್ಯೆ ವೈದ್ಯರೊಬ್ಬರ ಸಹಾಯದಿಂದ ಮೆಜೆಸ್ಟಿಕ್‌ನಲ್ಲಿನ ಆರ್ಯುರ್ವೇದ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ವೆಂಕಟರಮಣ ಭಾಗವಹಿಸಿದ್ದ. ಆಗ ವ್ಯಕ್ತಿಯೊಬ್ಬರು ಪರಿಚಯವಾಗಿ ಜಯನಗರ 4ನೇ ಹಂತದಲ್ಲಿ ಆಕ್ಯೂಪೈ ಇಎಂ ಇನ್ಸಿಟ್ಯೂಟ್ ಬಗ್ಗೆ ಮಾಹಿತಿ ಪಡೆದು, ಅಲ್ಲಿ 2 ವರ್ಷ ತರಬೇತಿ ಪಡೆದಿದ್ದ. ಈ ಆಧಾರದ ಮೇಲೆ ಮನೆಯ ಬಳಿ 2018ರಲ್ಲಿ ಮನೆಯ ಸಮೀಪದಲ್ಲಿ ಆಕ್ಯೂಪಂಕ್ಚರ್ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಲು ಆರಂಭಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಮೊಬೈಲ್‌ನಲ್ಲಿದ್ದವು ನೂರಾರು ವಿಡಿಯೋಗಳು
ಆರೋಪಿ ಮೊಬೈಲ್ ಜಪ್ತಿ ಮಾಡಿದ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಆರೋಪಿ ಮೊಬೈಲ್‌ನಲ್ಲಿ ಮಾತ್ರವಲ್ಲದೆ, ಒಂದು ಟಿಬಿ ಹಾರ್ಡ್‌ಡಿಸ್ಕ್ ತುಂಬುವಷ್ಟು ವಿಡಿಯೋಗಳನ್ನು ಇಟ್ಟುಕೊಂಡಿದ್ದಾನೆ ಎಂದು ಹೇಳಲಾಗಿದೆ. ಸುಮಾರು 3-4 ವರ್ಷಗಳಿಂದ ಆರೋಪಿ ಕೃತ್ಯ ಎಸಗುತ್ತಿರುವುದರಿಂದ ಆರೋಪಿ ಎಲ್ಲ ವಿಡಿಯೋಗಳನ್ನು ಶೇಖರಿಸಿ ಕೊಂಡಿದ್ದಾನೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯ ಪತ್ನಿ, ಮಗಳು ಈತನನ್ನು ಬಿಟ್ಟು ಬೇರೆಡೆ ವಾಸವಾಗಿದ್ದಾರೆ. ಹೀಗಾಗಿ ತನ್ನ ವೈಯಕ್ತಿಕ ಬಾಧೆಗಳ ಈಡೇರಿಕೆಗೆ ಈ ರೀತಿ ಮಾಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಈತನಿಂದ ವಂಚನೆಗೊಳಗಾದ ಸಂತ್ರಸ್ತರು ದೂರು ನೀಡಬಹುದು ಎಂದು ಪೊಲೀಸರು ಮಾಹಿತಿ ನೀಡಿದರು.