Advertisement

ಮಾನವ ಗುರಾಣಿ ಬಳಸಿದ ಆರ್ಮಿ ಆಫೀಸರ್‌ಗೆ ಕ್ಲೀನ್‌ ಚಿಟ್‌; ಪ್ರಶಂಸೆ

03:56 PM May 15, 2017 | udayavani editorial |

ಶ್ರೀನಗರ: ಕಳೆದ ಎ.9ರಂದು ಜಮ್ಮು ಕಾಶ್ಮೀರದ ಬಡಗಾಂವ್‌ನಲ್ಲಿ  ಭಾರತೀಯ ಸೇನಾ ಪಡೆಯನ್ನು  ಪ್ರತ್ಯೇಕತಾವಾದಿ ಪ್ರತಿಭಟನಕಾರರ ಕಲ್ಲೆಸೆತದಿಂದ ರಕ್ಷಿಸುವ ಸಲುವಾಗಿ ಸೇನೆಯ ಅಧಿಕಾರಿಯೋರ್ವರು ಯುವಕನೊಬ್ಬನನ್ನು  ಗುರಾಣಿಯಂತೆ ಬಳಸಿ ಚಲಿಸುವ ಜೀಪಿಗೆ ಕಟ್ಟಿದ್ದ ಪ್ರಕರಣದ ವಿಚಾರಣೆಯನ್ನು ಕೈಗೊಂಡ ನ್ಯಾಯಾಲಯವು ಆರೋಪಿ ಅಧಿಕಾರಿಗೆ ಕ್ಲೀನ್‌ ಚಿಟ್‌ ನೀಡಿದೆಯಲ್ಲದೆ, ಯೋಧರ ಜೀವ ಉಳಿಸುವುದಕ್ಕಾಗಿ ಆತನು ಕಂಡುಕೊಂಡ ಈ ಉಪಾಯವನ್ನು ಬಹುವಾಗಿ ಪ್ರಶಂಸಿಸಿದೆ.

Advertisement

ಈ ಘಟನೆಯ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡದ್ದನ್ನು ಅನುಸರಿಸಿ ಸೇನೆಯು ಆರ್ಮಿ ಕೋರ್ಟ್‌ ಆಫ್ ಇನ್‌ಕ್ವಯರಿ ಮೂಲಕ ತನಿಖೆಗೆ ಆದೇಶಿಸಿತ್ತು. 

ಪ್ರತಿಭಟನಕಾರರು ನಡೆಸುತ್ತಿದ್ದ  ಕಲ್ಲು ತೂರಾಟದಿಂದ ಸಹೋದ್ಯೋಗಿ ಯೋಧರನ್ನು ರಕ್ಷಿಸುವುದಕ್ಕಾಗಿ ಮೇಜರ್‌ ನಿತಿನ್‌ ಗೋಗೋಲ್‌ ಕಂಡುಕೊಂಡ ಈ ಉಪಾಯವನ್ನು ಸೇನಾ ನ್ಯಾಯಾಲಯ ಪ್ರಶಂಸಿಸಿತಲ್ಲದೆ ಗೋಗೋಲ್‌ಗೆ ಕ್ಲೀನ್‌ ಚಿಟ್‌ ನೀಡಿತು ಎಂದು ಸೇನಾ ಮೂಲಗಳು ತಿಳಿಸಿವೆ. 

ಮಾಜಿ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲ ಸಹಿತ ಅನೇಕ ರಾಜಕಾರಣಿಗಳು ಸೇನೆಯು ಮಾನವ ಗುರಾಣಿ ಬಳಕೆಯ ಈ ಪ್ರಕರಣವನ್ನು ವ್ಯಾಪಕವಾಗಿ ಖಂಡಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next