Advertisement

ತಾಯಿಗೆ ಸೇವಾವಧಿಯ ಕೊನೆ ಸೆಲ್ಯೂಟ್‌!- ವಿಡಿಯೋ ವೈರಲ್

05:56 PM Dec 24, 2022 | Team Udayavani |

ತಾಯಿ ಮತ್ತು ಮಗನದ್ದು ಕರಳುಬಳ್ಳಿಯ ಸಂಬಂಧ. ಅದು ಪ್ರೀತಿಯ ಬಂಧ. ಮಗ ಚಿಕ್ಕವನಿದ್ದಾಗ ತಾಯಿ ಆತನನ್ನು ಮಮತೆಯಿಂದ, ವಾತ್ಸಲ್ಯದಿಂದ ನೋಡಿಕೊಳ್ಳುತ್ತಾಳೆ. ಅದೇ ತಾಯಿಗೆ ವಯಸ್ಸಾದಾಗ ಆಕೆಯನ್ನು ಮಗ ಕಾಳಜಿಯಿಂದ ನೋಡಿಕೊಳ್ಳುತ್ತಾನೆ. ಇದೇ ರೀತಿ ತಾಯಿ-ಮಗನ ಪ್ರೀತಿಯ ಬಂಧದ ಸುದ್ದಿ ಇದಾಗಿದೆ.

Advertisement

ಭಾರತೀಯ ಸೇನೆಯಲ್ಲಿ ದೀರ್ಘಾವಧಿ ಸೇವೆಯ ನಂತರ ಮೇಜರ್‌ ಜನರಲ್‌ ರಂಜನ್‌ ಮಹಾಜನ್‌ ನಿವೃತ್ತಿಯಾಗುವವರಿದ್ದರು.

ನಿವೃತ್ತಿಗೂ ಮುನ್ನ ಸೇನಾ ಸಮವಸ್ತ್ರದಲ್ಲಿ ಮನೆಗೆ ತೆರಳಿದ ಅವರು, ತಾಯಿಗೆ ತಮ್ಮ ಸೇವಾವಧಿಯ ಕೊನೆಯ ಸೆಲ್ಯೂಟ್‌ ಸಲ್ಲಿಸಿದರು. ಇದನ್ನು ಕಂಡು ಇಳಿವಯಸ್ಸಿನ ತಾಯಿ ಹರ್ಷದಿಂದ ಕಣ್ಣೀರು ಸುರಿಸಿದರು. ಈ ವಿಡಿಯೋ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next