Advertisement

ಜಮ್ಮು –ಕಾಶ್ಮೀರ ಉರಿಯಲ್ಲಿ ಡ್ರಗ್ಸ್‌ ಸಾಗಾಟ?

10:20 PM Oct 03, 2021 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದಲ್ಲಿ ಶನಿವಾರ ಮಾದಕದ್ರವ್ಯ ಕಳ್ಳಸಾಗಣೆ ಯತ್ನವನ್ನು ಭಾರತೀಯ ಸೇನೆ ವಿಫ‌ಲಗೊಳಿಸಿದೆ.

Advertisement

ಜತೆಗೆ, 25 ಕೋಟಿ ರೂ. ಮೌಲ್ಯದ 30 ಕೆಜಿ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದೆ. ಉರಿ ಪ್ರದೇಶದ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಬಳಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವುದನ್ನು ಯೋಧರು ಗಮನಿಸಿದ್ದರು.

ಅದನ್ನಾಧರಿಸಿ ಶೋಧ ಕಾರ್ಯ ನಡೆಸಿದಾಗ, ಅಲ್ಲಿ ಎರಡು ಬ್ಯಾಗ್‌ಗಳಲ್ಲಿ ಡ್ರಗ್ಸ್‌ ರೀತಿಯ ವಸ್ತು ಇರುವುದು ಪತ್ತೆಯಾಗಿದೆ. ಅದನ್ನು ಭಾರತದತ್ತ ಸಾಗಿಸುತ್ತಿದ್ದ ಪೆಡ್ಲರ್‌ಗಳು ಪರಾರಿಯಾಗಿದ್ದಾರೆ.

ಇದನ್ನೂ ಓದಿ:ಯುಎಇಗಿಂತ ಮುನ್ನ ಭಾರತದಲ್ಲಿ ಹೈಪರ್‌ಲೂಪ್‌? ಸುಲ್ತಾನ್‌ ಅಹ್ಮದ್‌ ಸುಳಿವು

ಇನ್ನೊಂದೆಡೆ, ಪಂಜಾಬ್‌ನ ಅಮೃತಸರದ ಪಾಕ್‌-ಭಾರತ ಗಡಿಯಲ್ಲಿ ಹೆರಾಯಿನ್‌ ಕಳ್ಳಸಾಗಣೆಗೆ ಯತ್ನಿಸುತ್ತಿದ್ದ ಪಾಕ್‌ ಸ್ಮಗ್ಲರ್‌ನನ್ನು ಯೋಧರು ಬಂಧಿಸಿದ್ದಾರೆ. 6 ಕೆಜಿ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next