Advertisement

ಶೋಪಿಯಾನ್‌ ಫೈರಿಂಗ್‌: ಸೇನೆಯಿಂದಲೂ FIR, ಬಲಿ ಸಂಖ್ಯೆ 3ಕ್ಕೆ

04:47 PM Jan 31, 2018 | Team Udayavani |

ಶ್ರೀನಗರ : ಶೋಪಿಯಾನ್‌ ಫೈರಿಂಗ್‌ ಘಟನೆಗೆ ಸಂಬಂಧಿಸಿ ಪೊಲೀಸರಿಂದ ಸೇನೆಯ ಮೇಜರ್‌ ವಿರುದ್ಧ ಎಫ್ಐಆರ್‌ ದಾಖಲಾಗಿರುವುದಕ್ಕೆ ಪ್ರತಿಯಾಗಿ ಸೇನೆ ಕೂಡ ಇಂದು ಬುಧವಾರ ಎಫ್ಐಆರ್‌ ದಾಖಲಿಸಿದೆ.

Advertisement

ಈ ನಡುವೆ ಶೋಪಿಯಾನ್‌ ಫೈರಿಂಗ್‌ನಲ್ಲಿ ಮೃತಪಟ್ಟವರ ಸಂಖ್ಯೆ ಇಂದು ಬುಧವಾರ ಮೂರಕ್ಕೆ ಏರಿದೆ. ಫೈರಿಂಗ್‌ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳದ. ಈತನನ್ನು ರಯೀಸ್‌ ಅಹ್ಮದ್‌ ಎಂದು ಗುರುತಿಸಲಾಗಿದೆ. ಈತನು ಒಂಬತ್ತು ಗಾಯಾಳುಗಳಲ್ಲಿ ಒಬ್ಬನಾಗಿದ್ದ ಎಂದು ಮಾಧ್ಯಮ ವರದಿ ತಿಳಿಸಿದೆ.

ಜಮ್ಮು ಕಾಶ್ಮೀರದ ಶೋಪಿಯಾನ್‌ನಲ್ಲಿ ಕಳೆದ ಜನವರಿ 27ರ ಶನಿವಾರದಂದು ತನ್ನ ಮೇಲೆ ಕಲ್ಲೆಸೆತದಲ್ಲಿ ತೊಡಗಿದ್ದ ಉದ್ರಿಕ್ತ ಗುಂಪೊಂದರ ಮೇಲೆ ಫೈರಿಂಗ್‌ ನಡೆಸಿತ್ತು. ಕಲ್ಲೆಸೆತದಿಂದ ತನ್ನ 7 ಯೋಧರು ಗಾಯಗೊಂಡದ್ದನ್ನು ಅನುಸರಿಸಿ ತಾನು ಆತ್ಮರಕ್ಷಣೆಗಾಗಿ ಫೈರಿಂಗ್‌ ನಡೆಸಬೇಕಾಯಿತು ಎಂದು ಸೇನೆ ಹೇಳಿದೆ. 

ರಾಜ್ಯ ಸರಕಾರ ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಸರಕಾರ ಕೊಲೆ ಪ್ರಕರಣವನ್ನು ಹಿಂದೆಗೆದುಕೊಳ್ಳಬೇಕೆಂಬ ಬಿಜೆಪಿಯ ಆಗ್ರಹಕ್ಕೆ ಪ್ರತಿಯಾಗಿ ಸೇನಾ ಘಟಕದ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್ಐಆರ್‌ ತಾರ್ಕಿಕ ಅಂತ್ಯ ಕಾಣಲಿದೆ ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮೊನ್ನೆ ಸೋಮವಾರ ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next