Advertisement

Army ಮುಖ್ಯಸ್ಥ ಮನೋಜ್‌ ಸೇವಾ ಅವಧಿ ವಿಸ್ತರಣೆ

12:45 AM May 27, 2024 | Team Udayavani |

ಹೊಸದಿಲ್ಲಿ: ಭೂಸೇನಾ ಮುಖ್ಯಸ್ಥ ಜ| ಮನೋಜ್‌ ಪಾಂಡೆ ಅವರ ಸೇವಾವಧಿಯನ್ನು ಕೇಂದ್ರ 1 ತಿಂಗಳ ಕಾಲ ವಿಸ್ತರಿಸಿದೆ. ಮಾಸಾಂತ್ಯಕ್ಕೆ ಅವರು ನಿವೃತ್ತಿ ಹೊಂದ ಬೇಕಾಗಿತ್ತು. ನೇಮಕ ವಿಚಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಸಭೆ ಸೇರಿ ಭೂಸೇನಾ ಮುಖ್ಯಸ್ಥರ ಸೇವಾವಧಿ ಯನ್ನು ಜೂ.30ರ ವರೆಗೆ ವಿಸ್ತರಿಸಲು ತೀರ್ಮಾನಿಸಿದೆ. 2022ರ ಎಪ್ರಿಲ್‌ನಲ್ಲಿ ಅವರು ಹಾಲಿ ಹುದ್ದೆಯನ್ನು ವಹಿಸಿಕೊಂಡಿದ್ದರು. 1982ರ ಡಿಸೆಂಬರ್‌ನಲ್ಲಿ ಪಾಂಡೆ ಭೂಸೇನೆಯಲ್ಲಿ ವೃತ್ತಿ ಆರಂಭಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next