Advertisement

ಗಡಿಯಲ್ಲಿ ಮೂಲಸೌಕರ್ಯ: ಚೀನಗೆ ಸೇನೆಯ ಟಾಂಗ್‌

07:35 AM Nov 24, 2017 | Team Udayavani |

ಹೊಸದಿಲ್ಲಿ: ಡೋಕ್ಲಾಂ ಪ್ರಸ್ಥಭೂಮಿಯಲ್ಲಿ 73 ದಿನಗಳ ಕಾಲ ಸೇನಾ ನಿಯೋಜನೆಯಿಂದ ಚೀನ-ಭಾರತ ನಡುವಿನ ಗಡಿ ಪ್ರದೇಶದ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣದ ಬಳಿಕ ಈಗ ಭಾರತೀಯ ಸೇನೆ ಎಚ್ಚರಿಕೆಯ ಹೆಜ್ಜೆಯಿಡುತ್ತಿದೆ. ಅಗತ್ಯವೆನಿಸಿದಾಗ ಸೇನಾ ಪಡೆಗಳ ನಿಯೋಜನೆಗೆ ಮೂಲಭೂತವಾಗಿ ಯಾವುದೇ ತೊಂದರೆ ಆಗದಂತೆ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.

Advertisement

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈಗಾಗಲೇ ಎಂಜಿನಿಯರ್‌ಗಳು ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದು, ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗುವ ಗುಡ್ಡಗಳನ್ನು ಕೊರೆಯುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಸೇನಾ ಪ್ರಧಾನ ಕಚೇರಿ ಈಗಾಗಲೇ ಕಾಮಗಾರಿಗೆ ಅಡ್ಡಿಯಾಗುವಂಥ ಕಲ್ಲುಬಂಡೆಗಳ ತೆರವು ಮಾಡಲಿಕ್ಕಾಗಿ ಗಣಿ ಕೊರೆಯುವ ಹಾಗೂ ಪತ್ತೆ ಮಾಡುವ ಸಾಮರ್ಥ್ಯದ 1000ಕ್ಕೂ ಹೆಚ್ಚು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಕಳುಹಿಸಿದೆ ಎಂದು ಹೇಳಲಾಗಿದೆ. ಜೊತೆಗೆ 100ಕ್ಕೂ ಹೆಚ್ಚು ಉತVನನಕಾರರನ್ನೂ ಕಳುಹಿಸಿಕೊಟ್ಟಿದೆ ಎಂದು ಸೇನೆ ತಿಳಿಸಿದೆ. ಭದ್ರತಾ ಲೋಪಕ್ಕೆ ಕಾರಣವಾಗದ ರೀತಿ ಮೂಲಸೌಕರ್ಯ ಒದಗಿಸುವುದು ಎಂಜಿನಿಯರ್‌ಗಳಿಗೆ ದೊಡ್ಡ ಸವಾಲೇ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next