ಅಲಹಾಬಾದ್ : ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ನಡುವೆಯೇ ದುಷ್ಕರ್ಮಿಗಳು ಕೊಲೆ ಮತ್ತು ಲೂಟಿಯಲ್ಲಿ ತೊಡಗಿಕೊಂಡಿರುವುದು ಆಳುವ ಬಿಜೆಪಿ ಸರಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಅತ್ಯಂತ ಆಘಾತಕಾರಿ ತಾಜಾ ಪ್ರಕರಣದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ನಗದು ಹಣ ಸಾಗಾಟದ ವ್ಯಾನೊಂದರ ಗಾರ್ಡ್‌ನನ್ನು ಕೊಂದು ಅಪಾರ ಪ್ರಮಾಣದ ನಗದನ್ನು ಒಯ್ಯುವಲ್ಲಿ ವಿಫಲರಾಗಿ ಬಳಿಕ ಸ್ಥಳದಿಂದ ಪರಾರಿಯಾಗಿರುವ ಘಟನೆ ಅಲಹಾಬಾದ್‌ನಲ್ಲಿ ಇಂದು ಗುರುವಾರ ನಡೆದಿದೆ.
ಕ್ಯಾಶ್ ವ್ಯಾನ್ ಗಾರ್ಡ್ ಮೇಲೆ ಗುಂಡೆಸದ ಹಂತಕನೊಬ್ಬನು ಹೆಲ್ಮೆಟ್‌ಧಾರಿಯಾಗಿದ್ದ ಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬೈಕ್‌ನಲ್ಲಿ ಬಂದಿದ್ದ ಹಂತಕ ದುಷ್ಕಮಿಗಳ ಬಳಿ ಪಿಸ್ತೂಲುಗಳು ಇದ್ದು ಯಾರೂ ಕೂಡ ತಮ್ಮ ಬಳಿ ಬಾರದಂತೆ ಬೆದರಿಸುತ್ತಿದ್ದರು ಎನ್ನಲಾಗಿದೆ.
ಅಲಹಾಬಾದ್ ಜಿಲ್ಲೆಯ ಪರಿಯಾವಾನ್ ಎಂಬಲ್ಲಿನ ಎಸ್‌ಬಿಐ ಬ್ಯಾಂಕ್ ಶಾಖೆಗೆ ನಗದು ಹಣವನ್ನು ಪೂರೈಸಲು ಕ್ಯಾಶ್ ವ್ಯಾನ್ ಬಂದಿದ್ದಾಗ ಈ ಲೂಟಿ-ಕೊಲೆ ಘಟನೆ ನಡೆದಿದೆ.
ಘಟನೆ ನಡೆದಾಗ ಭೀತರಾದ ಜನರು ಚೆಲ್ಲಾಪಿಲ್ಲಿಯಾಗಿ ಪ್ರಾಣಭಯದಿಂದ ಓಡಿದರು. ಈ ಒಟ್ಟು ಘಟನೆ ಸಿಸಿಟಿವಿ ಯಲ್ಲಿ ದಾಖಲಾಗಿದೆ. ಪೊಲೀಸರು ಅದನ್ನೀಗ ಪರಿಶೀಲಿಸುತ್ತಿದ್ದಾರೆ. ದುಷ್ಕರ್ಮಿಗಳ ಬಂಧನಕ್ಕೆ ವ್ಯಾಪಕ ಬಲೆ ಬೀಸಲಾಗಿದೆ.