Advertisement

ರಜನಿ, ಕಮಲ್‌ ದೋಸ್ತಿ?

09:15 AM Feb 09, 2018 | Team Udayavani |

ಚೆನ್ನೈ: ರಾಜಕೀಯಕ್ಕೆ ಪದಾರ್ಪಣೆ ಮಾಡಿದ ತಮಿಳು ನಾಡಿನ ಇಬ್ಬರು ನಟರು ಕೈಜೋಡಿಸುತ್ತಾರೆಯೇ ಎಂಬುದು ಅವರ ಅಭಿಮಾನಿಗಳಿಗೆ ಇನ್ನಿಲ್ಲದ ಕುತೂ ಹಲಕ್ಕೆ ಕಾರಣವಾಗಿದೆ. ಈ ಸಂಬಂಧ ಮಾತನಾಡಿದ ನಟ ಕಮಲ್‌ ಹಾಸನ್‌, ನಾವು ರಾಜಕೀಯದಲ್ಲಿ ಕೈಜೋಡಿಸಬೇಕೆ ಎಂಬ ಬಗ್ಗೆ ಸೂಪರ್‌ಸ್ಟಾರ್‌ ರಜನಿ ಕಾಂತ್‌ ನಿರ್ಧರಿಸಬೇಕು ಎಂದಿದ್ದಾರೆ. ಇನ್ನೊಂದೆಡೆ ಇದನ್ನು ಕಾಲವೇ ನಿರ್ಧರಿಸುತ್ತದೆ ಎಂದು ರಜನಿ ಹೇಳಿದ್ದಾರೆ. ಹೀಗಾಗಿ ತಮಿಳುನಾಡಿನ ರಾಜಕಾರಣ ದಲ್ಲಿ ಕಮಲ್‌ ಮತ್ತು ರಜನಿಕಾಂತ್‌ ಪ್ರತ್ಯೇಕ ಪಕ್ಷ ಸ್ಥಾಪಿಸುವುದು ಖಚಿತವಾಗಿದ್ದು, ಸದ್ಯಕ್ಕಂತೂ ಒಂದಾಗುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಕಳೆದ ಡಿಸೆಂಬರ್‌ 31 ರಂದು ರಾಜಕೀಯಕ್ಕೆ ಪ್ರವೇಶಿಸಿರು ವುದನ್ನು ರಜನಿಕಾಂತ್‌ ಘೋಷಿಸಿದ್ದು, ಅದಕ್ಕೂ ಕೆಲವು ತಿಂಗಳು ಮೊದಲೇ ಕಮಲ್‌ ಹಾಸನ್‌ ಕೂಡ ರಾಜಕೀಯ ಸೇರುವ ನಿರ್ಧಾರ ಪ್ರಕಟಿಸಿದ್ದರು. ಆದರೆ ಇಬ್ಬರೂ ನಾಯಕರ ಪಕ್ಷ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next