Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಪಿಸಿಸಿ ನೇತೃತ್ವದಲ್ಲಿ, ನನ್ನ ಅಧ್ಯಕ್ಷತೆಯಲ್ಲೇ ಕಾರ್ಯಕ್ರಮ ನಡೆಯಲಿದ್ದು, ಜನ ಕಲ್ಯಾಣ ಸಮಾವೇಶ ಎಂದು ಹೆಸರಿಸಿದ್ದೇವೆ ಎಂದು ಘೋಷಿಸುವ ಮೂಲಕ ಸಿದ್ದರಾಮಯ್ಯ ಅವರಿಗಾಗಿ ನಡೆಸುವ ಸ್ವಾಭಿಮಾನಿ ಸಮಾವೇಶ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದರಲ್ಲದೆ, ಇದು 6 ಜಿಲ್ಲೆಗಳ ವ್ಯಾಪ್ತಿಯ ಸಮಾವೇಶವಲ್ಲ. ಹಾಸನದ್ದೇ ಸಮಾವೇಶ, ಯಾವ ಜಿಲ್ಲೆಯಿಂದ, ಎಷ್ಟು ಜನರು ಬೇಕಾದರೂ ಬರಬಹುದು. ಸೊನ್ನೆಯಿಂದ ಎಷ್ಟು ಲಕ್ಷ ಬೇಕಾದರೂ ಸೇರಬಹುದು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಬೆಂಬಲಿಗರ ಯೋಜನೆ, ಯೋಚನೆಗಳಿಗೆಲ್ಲಾ ಉಲ್ಟಾ ಹೊಡೆದರು.
25 ವರ್ಷಗಳಿಂದ ಹಾಸನದಲ್ಲಿ ಕಾಂಗ್ರೆಸ್ ಸಂಸದರು ಇರಲಿಲ್ಲ. ಈಗ ಜಿಲ್ಲೆಯ ಜನರು ಕಾಂಗ್ರೆಸ್‌ಗೆ ಲೋಕಸಭಾ ಸದಸ್ಯರನ್ನು ಕೊಟ್ಟಿದ್ದಾರೆ. ಉಳಿದ ಕೆಲವು ಜಿಲ್ಲೆಗಳಲ್ಲಿ ಒಂದಕ್ಕಿಂತ ಹೆಚ್ಚಿನ ಶಾಸಕರನ್ನು ಕಾಂಗ್ರೆಸ್ ಹೊಂದಿದೆ. ಒಬ್ಬರೇ ಶಾಸಕರಿರುವ ಹಾಸನದಲ್ಲಿಯೂ ಶಾಸಕರ ಸಂಖ್ಯೆ ಹೆಚ್ಚು ಮಾಡುವ ಉದ್ದೇಶದಿಂದ ಅಲ್ಲಿ ಸಮಾವೇಶ ಮಾಡುತ್ತಿದ್ದೇವೆ ಎಂದರು.