Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಕೆಲವೊಂದು ಕಡೆ ಇವರೇ ವಿವಾದ ಹುಟ್ಟು ಹಾಕಿದ್ದಾರೆ. ಉಳಿದ ಕಡೆ ಸೌಹಾರ್ದ ವಾತಾವರಣ ಇದೆ .ಹಲಾಲ್ ವಿಚಾರ ಈಗ ಪ್ರಸ್ತಾಪ ಮಾಡುತ್ತಾರೆ.ಹಲಾಲ್ ಮಾಡಿದ್ದೋ, ಅಲ್ಲವೋ ಎಂಬುದನ್ನು ವರ್ಷದೊಡಕಿನಲ್ಲಿ ಯಾರೂ ನೋಡುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.
ನಾನು ದಲಿತ, ಲಿಂಗಾಯತ, ಒಕ್ಕಲಿಗ ಎಂದು ಹೇಳಿಲ್ಲ.ಮೀಸಲು ಕ್ಷೇತ್ರದಲ್ಲಿ ಗೆದ್ದ ಶಾಸಕರು ಎಷ್ಟು ಸೂಕ್ಷ್ಮವಾಗಿ ಕೆಲಸ ಮಾಡಬೇಕು ಎಂಬುದು ಗೊತ್ತಿದೆ. 1 ಸಾವಿರ ಅರ್ಚಕರು ಇಂದು ರಾಮನಗರಕ್ಕೆ ಬಂದಿದ್ದಾರೆ.ಲೋಕಕಲ್ಯಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಮ್ಮ ಹಿಂದೂ ಧರ್ಮ ಸರ್ವೋ ಜನೋ ಸುಖಿನೋಭವಂತು ಎಂದು ಹೇಳುತ್ತದೆ. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ, ಇದನ್ನ ಹಾಳು ಮಾಡಬೇಡಿ ಎಂದರು. ಕೋಲಾರದ ಶಿವಾರಪಟ್ಟಣದಲ್ಲಿ 35 ವರ್ಷದಿಂದ ಮುಸ್ಲಿಂ ಸಮುದಾಯದ ಬಂಧುಗಳು ವಿಗ್ರಹ ಕೆತ್ತುತಿದ್ದಾರೆ. ಇವರನ್ನ ಯಾವಾಗ ಬಹಿಷ್ಕಾರ ಡುತ್ತೀರಿ ? ಸಭಾಧ್ಯಕ್ಷರ ಪೀಠದಲ್ಲಿ ಕುಳಿತು ನಮ್ಮ ಆರ್ ಎಸ್ ಎಸ್ ಅಂತಾರೆ ಎಂದು ವ್ಯಂಗ್ಯವಾಡಿದರು.