Advertisement

ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ : ಸಚಿವ ಅರವಿಂದ ಲಿಂಬಾವಳಿ ಆಗ್ರಹ

11:28 PM Feb 25, 2021 | Team Udayavani |

ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ಕೈವಾಡವಿರುವುದು ರಾಷ್ಟ್ರೀಯ ತನಿಖಾ ದಳ ಸಲ್ಲಿಸಿರುವ ಆರೋಪ ಪಟ್ಟಿಯಿಂದ ಸ್ಪಷ್ಟವಾಗಿದ್ದು, ಎರಡೂ ಸಂಘಟನೆಗಳನ್ನು ನಿಷೇಧ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಒತ್ತಾಯಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ಜನ್ಮಾಷ್ಟಮಿ ದಿನ ಅವಹೇಳನಕಾರಿ ಪೋಸ್ಟ್‌ ಮಾಡಿದಕ್ಕೆ ನವೀನ್‌ ಎನ್ನುವವರು ಸಾಮಾಜಿಕ ಜಾಲ ತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ನವೀನ್‌ರ ಕಮೆಂಟನ್ನು ತೆಗೆದುಕೊಂಡು ಫೈರೋಜ್‌ ಪಾಷಾ ಇತರರಿಗೆ ಹಂಚಿಕೆ ಮಾಡಿ ದಂಗೆ ಎಬ್ಬಿಸಿ¨ªಾನೆ. ಇದನ್ನು ನಾವು ನಮ್ಮ ವರದಿಯಲ್ಲಿ ಹೇಳಿದ್ದೆವು. ಈಗ ಅದನ್ನೇ ರಾಷ್ಟ್ರೀಯ ತನಿಖಾ ದಳ ಸಲ್ಲಿಕೆ ಮಾಡಿರುವ ಏಳು ಸಾವಿರ ಪುಟದ ಆರೋಪಪಟ್ಟಿಯಲ್ಲಿ ಉಲ್ಲೇಖ ಮಾಡಿದೆ ಎಂದು ಮಾಹಿತಿ ನೀಡಿದರು.

ರಾಮಜನ್ಮಭೂಮಿ ಶಿಲಾನ್ಯಾಸ ಸಮಾರಂಭ, ತ್ರಿವಳಿ ತಲಾಖ್‌, ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕಾರವಾಗುವ ಸಂದರ್ಭದಲ್ಲಿ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಸಂದರ್ಭದಲ್ಲಿ ಗಲಾಟೆ ಎಬ್ಬಿಸುವುದು ಅವರ ಉದ್ದೇಶವಾಗಿತ್ತು. ಆದರೆ ಆ ಸಂದರ್ಭದಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದರಿಂದ ಕೃಷ್ಣ ಜನ್ಮಾಷ್ಟಮಿ ದಿನವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ ಎಸ್‌ಡಿಪಿಐ ಕಚೇರಿಯಲ್ಲಿ ಆಯುಧಗಳು ದೊರೆತಿವೆ. ಹೀಗಾಗಿ ರಾಷ್ಟ್ರವಿರೋಧಿ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದರು.

ಇದನ್ನೂ ಓದಿ :ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ

ಈಗ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಕುರಿತು ರಾಷ್ಟ್ರೀಯ ತನಿಖಾ ದಳ ಆರೋಪಪಟ್ಟಿ ಸಲ್ಲಿಕೆ ಮಾಡಿದೆ. ತನಿಖೆ ಮುಗಿದು ಅನೇಕ ಸಂಗತಿಗಳು ಇನ್ನೂ ಹೊರಬರಬೇಕಿದೆ. ಆದರೆ,ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮಾತ್ರ ಎಸ್‌ಡಿಪಿಐ ಬಿಜೆಪಿಯ ಬಿ ಟೀಂ ಎಂದು ಪದೇಪದೇ ನಮ್ಮನ್ನು ಆರೋಪಿಸುತ್ತಿದ್ದಾರೆ. ಆದರೆ, ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಸ್‌ಡಿಪಿಐ ಮತ್ತು ಕರ್ನಾಟಕ ಫೋರಂ ಫಾರ್‌ ಡಿಗ್ನಿಟಿ ಮೇಲಿರುವ 1600 ಪ್ರಕರಣಗಳನ್ನು ಸಚಿವ ಸಂಪುಟಕ್ಕೆ ತಂದು ವಾಪಸ್ಸು ಪಡೆದಿದ್ದರು. ಆಗ ಯಡಿಯೂರಪ್ಪ ಹಿಂದೂ ವಿರೋಧಿಗಳು, ದೇಶ ವಿರೋಧಿಗಳು ,ಜಾತಿಯನ್ನು ಎತ್ತಿ ಕಟ್ಟುವ ಸಂಘಟನೆಗಳ ಮೇಲಿನ ಪ್ರಕರಣ ರದ್ದು ಮಾಡಿದ್ದಾರೆ ಎಂದು ವಿರೋಧ ಮಾಡಿದ್ದರು ಎಂದು ಹೇಳಿದ್ದಾರೆ.

Advertisement

ಕೇರಳದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರೊಬ್ಬರನ್ನು ಎಸ್‌ಡಿಪಿಐ ಮತ್ತು ಪಿಎಫ್ಐ ಸಂಘಟನೆಯ ಗೂಂಡಾಗಳೆ‌ ಕೊಲೆ ಮಾಡಿದ್ದಾರೆ ಇಂತಹ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬಿಜೆಪಿ ಒತ್ತಾಯಿಸುತ್ತದೆ. ದೇಶವಿರೋಧಿ ಕೃತ್ಯದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಈ ಸಂಘಟನೆಗಳು ದೇಶಕ್ಕೂ ಮಾರಕ, ರಾಜ್ಯಕ್ಕೂ ಮಾರಕ ಹಾಗಾಗಿ ಇವುಗಳನ್ನು ನಿಷೇಧ ಮಾಡಬೇಕು ಎನ್ನುವ ಒತ್ತಾಯವನ್ನು ಮಾಡುತ್ತೇವೆ. ಈ ಸಂಘಟನೆಗಳ ಜೊತೆ ನಂಟು ಹೊಂದಿರುವ ಸಂಘಟನೆಗಳು ಮತ್ತು ಕಾರ್ಯಕರ್ತರ ಮೇಲೆ ನಿರ್ದಾಕ್ಷಿಣ್ಯವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದರೂ ಈ ಸಂಘಟನೆಗಳ ನಿಷೇಧದಕ್ಕೆ ವಿಳಂಬವಾಗುತ್ತಿರುವುದಕ್ಕೆ ನಮಗೆ ಬೇಸರವಿದೆ, ಅಗತ್ಯ ಬಿದ್ದಲ್ಲಿ ಪಕ್ಷದ ನಿಯೋಗ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಮಾಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next