Advertisement

ಪುತ್ರಿಯಿಂದ ನೋವಾಗಿದ್ದರೆ ಕ್ಷಮೆ ಯಾಚಿಸುವೆ : ಅರವಿಂದ ಲಿಂಬಾವಳಿ

10:29 PM Jun 09, 2022 | Team Udayavani |

ಬೆಂಗಳೂರು : ತಮ್ಮ ಮಗಳ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಶಾಸಕ ಅರವಿಂದ್‌ ಲಿಂಬಾವಳಿ ಸ್ಪಷ್ಟನೆ ನೀಡಿದ್ದು, ಪುತ್ರಿ ತನ್ನ ಸ್ನೇಹಿತರ ಜತೆ ಹೋಗುತ್ತಿದ್ದಾಗ ಕ್ಯಾಪಿಟಲ್‌ ಹೊಟೇಲ್‌ ಬಳಿ ಪೊಲೀಸರು ತಡೆದಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಇರುವುದರಿಂದ ಪೋಲಿಸರ ಬಂದೋಬಸ್ತ್ ಇತ್ತು. ನನ್ನ ಮಗಳು ಮಾಧ್ಯಮಗಳಿಗೆ ಅವಮಾನ ಮಾಡಿದ್ದಾರೆ ಅಂತ ಆರೋಪವಿದೆ. ಆದರೆ ಆಕೆ “ಸರ್‌’ ಅಂತ ಗೌರವದಿಂದ ಮಾತನಾಡಿದ್ದಾರೆ. ಹಾಗಿದ್ದೂ ಆಕೆಯಿಂದ ಮಾಧ್ಯಮಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ ಎಂದು ಹೇಳಿದ್ದಾರೆ.

Advertisement

ಆಕೆ ಅಮಿತ ವೇಗದಲ್ಲಿ ವಾಹನ ಚಲಾಯಿಸಿದ್ದಾಳೆ ಎಂದು ಆರೋಪಿಸಲಾಗಿದ್ದು, ಅದಕ್ಕೂ ದಂಡ ವಿಧಿಸಲಾಗಿದೆ ಎಂದು ಲಿಂಬಾವಳಿ ಹೇಳಿದ್ದಾರೆ.

ಇದನ್ನೂ ಓದಿ : 18 ವರ್ಷದ ಯುವತಿಯನ್ನು 3ನೇ ಮದುವೆಯಾಗಿ ಸುದ್ದಿಯಾಗಿದ್ದ ಪಾಕ್‌ ಸಂಸದ ಆಮಿರ್‌ ನಿಧನ

Advertisement

Udayavani is now on Telegram. Click here to join our channel and stay updated with the latest news.

Next