Advertisement

ಅರಳಗೋಡಿನ ನಾಲ್ವರಿಗೆ ಮಂಗನ ಕಾಯಿಲೆ ದೃಢ

11:25 PM Feb 17, 2020 | Team Udayavani |

ಸಾಗರ: ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮಂಡವಳ್ಳಿಯ ಯಶೋಧಾ ಬೀರಪ್ಪ ಅವರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಶಿವಮೊಗ್ಗದ ಪರಿಮಾಣ ಕ್ರಿಮಿ ಪರಿಶೋಧನಾ ಪ್ರಯೋಗಾಲಯ ಭಾನುವಾರ ಪ್ರಕಟಿಸಿರುವ 71 ಮಂದಿ ರಕ್ತದ ಸ್ಯಾಂಪಲ್‌ನ ವರದಿ ಪ್ರಕಾರ, ಯಶೋಧಾ ಅವರನ್ನು ಒಳಗೊಂಡಂತೆ ಜಿಲ್ಲೆಯ ನಾಲ್ವರಲ್ಲಿ ಕೆಎಫ್‌ಡಿ ವೈರಸ್‌ ಪಾಸಿಟಿವ್‌ ದಾಖಲಾಗಿದೆ.

Advertisement

ಉಳಿದ ಮೂರು ಪ್ರಕರಣಗಳು ತೀರ್ಥಹಳ್ಳಿ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿನ ಕನ್ನಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹಿರೇಬೈಲಿನ ಪದ್ಮಾವತಿ ರವೀಂದ್ರ, ಕೋಣಂದೂರು ಪಿಎಚ್‌ಸಿ ವ್ಯಾಪ್ತಿಯ ಕಲ್ಗದ್ದೆಯ ರತೀಶ್‌ ಕುಬೇರ್‌ ಗೌಡ ಹಾಗೂ ಮಂಡಗದ್ದೆ ಮಾವಳ್ಳಿಯ ಚಂದ್ರಕಲಾ ಜಯರಾಮ್‌ ಅವರಿಗೆ ಸೋಂಕು ತಗುಲಿದೆ ಎಂದು ವಿಡಿಎಲ್‌ ವರದಿ ನೀಡಿದೆ. ಸಾಗರದಲ್ಲಿ ಶಂಕಿತ ಕ್ಯಾಸನೂರು ಅರಣ್ಯ ಕಾಯಿಲೆ ಪತ್ತೆಗಾಗಿ ಒಟ್ಟು 16 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಫೆ.15ರಂದು ಯಶೋಧಾ ಅವರಲ್ಲಿ ಜ್ವರ ಕಾಣಿಸಿದ ಹಿನ್ನೆಲೆಯಲ್ಲಿ ರಕ್ತ ಸಂಗ್ರಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next