Advertisement
ತಾಲೂಕಿನ 5 ಹೋಬಳಿಗಳಲ್ಲಿಯೂ ನಾಲೆಗಳ ಮೂಲಕ ಬಹುತೇಕ ಕೆರೆಕಟ್ಟೆಗಳಿಗೆ ನೀರುತುಂಬಿಸಲಾಗುತ್ತಿದೆ. ಆದರೆ ತಾಲೂಕಿನ ಕೆಲ ಗ್ರಾಪಂವ್ಯಾಪ್ತಿಯಲ್ಲಿ ಎತ್ತರ ಪ್ರದೇಶದಲ್ಲಿರುವ 8 ರಿಂದ 10ಗ್ರಾಮಗಳಲ್ಲಿ ಸಮಸ್ಯೆ ಗೋಚರಿಸುತ್ತಿದೆ. ಆದರೆಮುಂಗಾರು ಮಳೆ ಪ್ರಾರಂಭ ನಿದಾನಗತಿಯಾದರೆ ಆಗ 30 ರಿಂದ 40 ಗ್ರಾಮಗಳು ಅಂತರ್ಜಲದ ಕೊರತೆಯನ್ನ ಎದುರಿಸಬೇಕಾಗುತ್ತದೆ.
Related Articles
Advertisement
ಮುಂಗಾರು ವಿಳಂಬವಾದರೆ 50 ಗ್ರಾಮಗಳ ಅಂತರ್ಜಲ ಕುಸಿತ: ಬೇಸಿಗೆ ತಾಪಮಾನ ಅಧಿಕವಾದಂತೆ ಕೆರಕಟ್ಟೆಗಳಲ್ಲಿ ನೀರ ಬತ್ತಿ ಹೋದರೆ, ತಾಲೂಕಿನಲ್ಲಿ ಆಗ ಕುಡಿಯುವ ನೀರಿನ ಸಮಸ್ಯೆಉಲ್ಬಣವಾಗುತ್ತದೆ. ಈ ಸಮಸ್ಯೆ ಎದುರಾಗಬೇಕಾದರೆ ಜುಲೈವರೆಗೂ ಮಳೆ ಬೀಳದಿದ್ದಾಗ ಇಂತಹಸಮಸ್ಯೆಕಾಣಿಸಿಕೊಳ್ಳುತ್ತದೆ. 2018-19 ರಲ್ಲಿ 14ಗ್ರಾಮಗಳು ಈ ಸಮಸ್ಯೆಯನ್ನ ಎದುರಿಸಿದ್ದವು.2019-20 ನೇ ಸಾಲಿನಲ್ಲಿ ಒಂದೇ ಒಂದು ಗ್ರಾಮವು ಸಮಸ್ಯೆಗೆ ತುತ್ತಾಗಿರಲಿಲ್ಲ. ಆ ದರೆ ಈಗಿನ ಬಿಸಿಲಿನತಾಪಮಾನ ಅದಿಕವಾಗಿರುವುದರಿಂದ ತಾಲೂಕಿನ ಮೂರು ಗ್ರಾಮಗಳಲ್ಲಿ ಕೊಳವೆ ಬಾವಿಗಳುಸ್ಥಗಿತಗೊಂಡಿದೆ ಎನ್ನುವುದು ಬಿಟ್ಟರೆ ಬೇರೆ ಸಮಸ್ಯೆ ಕಂಡುಬಂದಿಲ್ಲ.
ಸಮಸ್ಯೆ ಎದುರಿಸಲು ಸನ್ನದ್ಧ: 10 ರಿಂದ 15 ಗ್ರಾಮಗಳಲ್ಲಿ ಕೇವಲ ಅಂತರ್ಜಲ ಸಮಸ್ಯೆಯಿಂದ ತೊಂದರೆ ಯಾಗುವ ಸಾಧ್ಯತೆಗಳಿವೆ. ಅಂತಹಗ್ರಾಮಗಳಿಗೆ ಈಗಾಗಲೇ ಗ್ರಾಪಂ ಅಧಿಕಾರಿಗಳಿಗೆ ಜಾಗೃತಿ ವಹಿಸಲು ಆದೇಶಿಸಲಾಗಿದೆ ಎಂದುತಾಲೂಕು ವಿಪತ್ತು ನಿರ್ವಹಣಾ ಸಮಿತಿ ತಿಳಿಸಿದೆ.
ನಾಲೆಗಳ ಮೂಲಕ ಕೆರೆಕಟ್ಟೆಗಳಿಗೆ ನೀರು: ತಾಲೂಕಿನಎರಡು ದಡದಲ್ಲಿಯೂ ಹೇಮಾವತಿ ಕಾವೇರಿ ಸಾಗುತ್ತಿರುವುದರಿಂದ ಈ ಎರಡು ನದಿಗಳಮಧ್ಯಭಾಗದ ಎತ್ತರ ಪ್ರದೇಶಗಳಲ್ಲಿ ಇರುವಗ್ರಾಮಗಳಿಗೆ ಕುಡಿವ ನೀರು ಹಾಗೂ ಅಂತರ್ಜಲಬತ್ತದಂತೆ ನಾಲೆಗಳ ಮೂಲಕ ಕೆರೆಕಟ್ಟೆಗಳಿಗೆ ನೀರುತುಂಬಿಸಲಾಗುತ್ತದೆ. ಹೇಮಾವತಿ ನದಿಯ ಆಶ್ರಯದಲ್ಲಿ ಬಲದಂಡಾ ನಾಲಾ, ಬೋರಣ್ಣ ಗೌಡನಾಲೆಗಳನ್ನ ಒಳಗೊಂಡಂತೆ, ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ, ಮುದಿಗೆರೆ ಏತನೀರಾವರಿ, ಗಂಗನಾಳು ಏತ ನೀರಾವರಿ ಹಾಗೂ ಮಲ್ಲಿಪಟ್ಟಣ ಏತ ನೀರಾವರಿ ಮೂಲಕ ಮಳೆ ಆಶ್ರಯ ಕೆರೆಗಳಿಗೆ ನದಿಯ ನೀರು ಹರಿಸಲಾಗುತ್ತದೆ. ಇನ್ನೂ ಮಲ್ಲಿಪಟ್ಟಣ ಏತ ನೀರಾವರಿ ಹಾಗೂ ಗಂಗನಾಳು ಏತನೀರಾವರಿಯ ಕಾಮಗಾರಿ ಪ್ರಗತಿಯಲ್ಲಿವೆ.ರಾಮನಾಥಪುರ ಮತ್ತು ಕೊಣನೂರು ಹೋಬಳಿಗಳಿಗೆ ಹಾರಂಗಿ ಎಡದಂಡೆ ನಾಲೆಯಿಂದ ನೀರು ಆಎರಡು ಹೋಬಳಿಗಳಿಗೆ ಹರಿಯುತ್ತಿರುವುದರಿಂದ ಆ ವ್ಯಾಪ್ತಿಗೂ ನೀರಿಗೆ ತೊಂದರೆಯಾಗುತ್ತಿಲ್ಲ.
ಅರಕಗೂಡು ತಾಲೂಕಿನಲ್ಲಿ ಮಲ್ಲಿಪಟ್ಟಣಹಾಗೂ ಗಂಗನಾಳು ಏತನೀರಾವರಿಯ ಕಾಮಗಾರಿ ಪ್ರಗತಿಯಲ್ಲಿದ್ದು, ಇವುಗಳುಪೂರ್ಣಗೊಂಡರೆ ಶೇ. 85 ತಾಲೂಕು ನೀರಾವರಿಪ್ರದೇಶವಾಗುತ್ತದೆ. ಇಷ್ಟೆಲ್ಲಾನೀರಾವರಿ ಸೌಲಭ್ಯವಿರುವಕಾರಣ ಸಮಸ್ಯೆ ಎದರಾಗಿಲ್ಲ. ಅದರೂ, ಪ್ರತಿಗ್ರಾಪಂಗೆ 15ನೇಹಣಕಾಸಿನಲ್ಲಿ ಕುಡಿಯುವನೀರಿಗೆ ಅನುದಾನಬಳಸಿಕೊಳ್ಳುವಂತೆ ಆದೇಶಿಸಿರುವುದರಿಂದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು. ● ಎ.ಟಿ. ರಾಮಸ್ವಾಮಿ, ಶಾಸಕರು
ಎರಡು ನದಿಗಳು ತಾಲೂಕಿನಲ್ಲಿಹರಿಯುತ್ತಿರುವುದರಿಂದ ಉಪನಾಲೆಗಳುಏತ ನೀರಾವರಿ ಮೂಲಕ ಕೆರೆಕಟ್ಟೆಗಳಿಗೆ ನೀರುತುಂಬಿಸಲಾಗಿದೆ. ಆದರೆ, ಕೆಲ ಗ್ರಾಮಗಳು ಎತ್ತರಪ್ರದೇಶದಲ್ಲಿರುವ ಕಾರಣಕುಡಿವ ನೀರಿನ ಸಮಸ್ಯೆಕಾಣಸಿಗುತ್ತದೆ. ಆದಕ್ಕೆ ಪರಿಹಾರಕಲ್ಪಿಸಲಾಗುವುದು.ತಾಲೂಕಿನಲ್ಲಿ 1,066ಕೆರೆಗಳಿದ್ದು, ಇವುಗಳಲ್ಲಿ160 ಕೆರೆಗಳ ಹೂಳೆತ್ತಿಸುವ ಮೂಲಕ ನೀರು ಸಂಗ್ರಹಿಸಲಾಗಿದೆ. ● ರೇಣುಕುಮಾರ್, ತಹಶೀಲ್ದಾರ್
– ಅರಕಲಗೂಡು ಶಂಕರ್