ತೀರ್ಥಹಳ್ಳಿ : ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ 136 ಸೀಟ್ ಬಂದಿದೆ. ನಾವು ಏನೇ ಮಾಡಿದರು ನಡೆಯುತ್ತದೆ ಎಂಬ ಮದದ ಭಾವನೆ ಸಿದ್ದರಾಮಯ್ಯ ಮತ್ತು ತಂಡದ ತಲೆಯಲ್ಲಿ ಹೊಕ್ಕಿದೆ. ಕಳೆದ ಸಾರಿ ಬಜೆಟ್ ನಲ್ಲಿ ದಲಿತರಿಗಾಗಿ ಮೀಸಲಾಗಿಟ್ಟಿದ್ದ 11 ಸಾವಿರ ಕೋಟಿ ಹಣವನ್ನು ಬೇರೆ ಉದ್ದೇಶಕ್ಕೆ ವರ್ಗಾವಣೆ ಮಾಡಿದ್ದಾರೆ. ವಾಲ್ಮೀಕಿ ನಿಗಮಕ್ಕೆ 180 ಕೋಟಿ ಹಣ ನೀಡಿದ್ದಾರೆ ಉಳಿದ ಯಾವ ನಿಗಮದಲ್ಲೂ 180 ರೂಪಾಯಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಶನಿವಾರ ಪಟ್ಟಣದ ಕೊಪ್ಪ ಸರ್ಕಲ್ ನಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಮಾನವ ಸರಪಳಿ ಜೊತೆ ರಸ್ತೆ ತಡೆ, ಹಾಗೂ ಪ್ರತಿಭಟನೆ ನಡೆಸಿ ಮಾತನಾಡಿದ ಅವರು 180 ಕೋಟಿ ಹಣವನ್ನು ತೆಲಂಗಾಣ ರಾಜ್ಯದ ಹೈದರಾಬಾದ್ ನ ರತ್ನಾಕರ ಎಂಬ ಬ್ಯಾಂಕ್ ಗೆ ಹಣ ವರ್ಗಾವಣೆ ಮಾಡಲಾಗಿದೆ. ಅಲ್ಲಿಂದ ಒಂಬತ್ತು ಐಟಿ ಬಿಟಿ ಕಂಪನಿಗಳಿಗೆ ಹಣ ವರ್ಗಾವಣೆ ಆಗಿದೆ.ಶಿವಮೊಗ್ಗದ ಚಂದ್ರಶೇಖರ್ ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಕೊನೆಯದಾಗಿ ಬರೆದ ಡೆತ್ ನೋಟ್ ನಲ್ಲಿ ಸರ್ಕಾರದ ಹಣೆ ಬರಹ ಮತ್ತು ಸರ್ಕಾರದ ದುರುದ್ದೇಶದ ಮಾಹಿತಿ ಬರೆದಿದ್ದಾರೆ ಎಂದು ತಿಳಿಸಿದರು.
ದರೋಡೆ ಮಾಡುವುದನ್ನು ನೋಡಿದ್ದೇವೆ ಆದರೆ ಈ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. 180 ಕೋಟಿಯನ್ನು ವಾಲ್ಮೀಕಿ ನಿಗಮಕ್ಕೆ ಜಮಾ ಮಾಡಿ ಅಲ್ಲಿಂದ ಯೂನಿಯನ್ ಬ್ಯಾಂಕ್ ನಾ ಎರಡನೇ ಶಾಖೆಗೆ ಜಮಾ ಮಾಡಿ ಅಲ್ಲಿಂದ ತೆಲಂಗಾಣಕ್ಕೆ ಹೋಗಿದೆ. ಸಿದ್ದರಾಮಯ್ಯನವರಿಗೆ ಏನಾದರು ಒತ್ತಡ ಬಂತು ಎಂದರೆ ಎಸ್ ಐ ಟಿ ತನಿಖೆ ಮಾಡುವುದು.ಇದೇಲ್ಲವೂ ನಾಮಕವಸ್ಥೆ. ಎಸ್ ಐ ಟಿ ಎಂದರೆ ಅದೇ ಪೊಲೀಸರನ್ನು ಹಾಕಿ ತನಿಖೆ ನಡೆಸುವುದು ಅಷ್ಟೇ, ಯಾವುದೇ ಪ್ರಕರಣವನ್ನು ಸಗಣಿ ಸಾರಿಸಬೇಕು ಎಂದರೆ ಅಥವಾ ಯಾವುದೇ ಪ್ರಕರಣದಲ್ಲಿ ಯಾರನ್ನಾದರೂ ಮುಗಿಸಬೇಕು ಎಸ್ ಐ ಟಿ ಮಾಡುತ್ತದೆ ಎಂದರು.
ದೇವೇಗೌಡರ ಕುಟುಂಬವನ್ನು ಮುಗಿಸಲು ವಿಶೇಷವಾದ ಎಸ್ ಐ ಟಿ ರಚನೆ ಆಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದರಲ್ಲಿ ನಮ್ಮ ಸಮಸ್ಯೆ ಇಲ್ಲ. ಆದರೆ ತನಿಖೆ ನಡೆಯುವ ದಿಕ್ಕು ನೋಡಿದರೆ ಪ್ರಾಮಾಣಿಕವಾದ ತನಿಖೆ ಅಲ್ಲ ಎಂದು ತಿಳಿಯುತ್ತದೆ. ಧಾರವಾಡದಲ್ಲಿ ನಡೆದ ಇಬ್ಬರು ಹೆಣ್ಣುಮಕ್ಕಳ ಖಗ್ಗೊಲೆ ಅದಕ್ಕೂ ಎಸ್ ಐ ಟಿ ರಚನೆ ಮಾಡಿದ್ದಾರೆ. ಇವೆಲ್ಲವೂ ಕಣ್ಣೋರೆಸುವ ತಂತ್ರ ರಾಜ್ಯಸರ್ಕಾರ ಮಾಡುತ್ತಿದೆ. ತೆಲಂಗಾಣ ಚುನಾವಣೆಯ ಜವಾಬ್ದಾರಿ ಡಿ ಕೆ ಶಿವಕುಮಾರ್ ಹೊತ್ತಿದ್ದರು. ಹಣ ವರ್ಗಾವಣೆ ಕೂಡ ತೆಲಂಗಾಣಕ್ಕೆ ಹೋಗಿದೆ ಎಂದ ಮೇಲೆ ಯಾರ ನಿರ್ದೇಶನದ ಮೇಲೆ ಹೋಗಿದೆ ಎಂದು ಗೊತ್ತಾಗುತ್ತದೆ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸ್ವಾಭಿಮಾನ ಇದ್ದರೆ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಸಂತೋಷ್ ಎಂಬ ಅಧಿಕಾರಿಯ ಆತ್ಮಹತ್ಯೆ ಸಂಬಂಧಟ್ಟಂತೆ ಈಶ್ವರಪ್ಪನವರು ರಾಜೀನಾಮೆ ನೀಡಿದ್ದರು. ತನಿಖೆ ನಡೆದ ನಂತರ ಅವರ ತಪ್ಪಿಲ್ಲ ಎಂದು ತಿಳಿಯಿತು. ಈ ಪ್ರಕರಣದಲ್ಲೂ ಹಾಗೆ ನಡೆಯಲಿ. ಇವತ್ತು ಆ ಡೆತ್ ನೋಟ್ ನಲ್ಲಿ ಮಂತ್ರಿಯೊಬ್ಬರ ಮೌಖಿಕ ನಿರ್ದೇಶನದಂತೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಬರೆದಿದ್ದಾರೆ. ತೆಲಂಗಾಣದಲ್ಲೂ ಕಾಂಗ್ರೆಸ್ ಬರಬೇಕು ಎಂಬ ಕಾರಣಕ್ಕೆ ಹಣವನ್ನು ಕಾಂಗ್ರೆಸ್ ಮಾಡಿದ್ದಾರೆ. ಕಾಂಗ್ರೆಸ್ ಎಂದರೆ ಮೋಸ, ದರೋಡೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕುಕ್ಕೆ ಪ್ರಶಾಂತ್, ಬಾಳೆಬೈಲು ರಾಘವೇಂದ್ರ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಸಂತೋಷ್ ದೇವಾಡಿಗ, ಮಧುರಾಜ್ ಹೆಗಡೆ, ಪೂರ್ಣೇಶ್ ಪೂಜಾರಿ, ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ: Kalaburgi; ವಿಪಕ್ಷದವರು ಕೇಳಿದ ಮಾತ್ರಕ್ಕೆ ಸಚಿವರು ರಾಜೀನಾಮೆ ನೀಡಬೇಕೆ: ಪ್ರಿಯಾಂಕ್ ಖರ್ಗೆ