ಸಾಗರ: ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಯ ಚುನಾವಣೆಯಲ್ಲಿ ಒಟ್ಟು 18 ಅಭ್ಯರ್ಥಿಗಳು 11 ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ನಾಮಪತ್ರ ವಾಪಾಸು ಪಡೆಯುವ ದಿನವಾಗಿದ್ದ ಸೋಮವಾರ ಒಟ್ಟು 30 ಜನ ತಮ್ಮ ನಾಮಪತ್ರ ವಾಪಾಸು ಪಡೆದರು.
ಹೊಸನಗರದ ಮೂರು ಕ್ಷೇತ್ರಗಳ ಮೂವರು ಸೇರಿದಂತೆ ಐದು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಚುನಾವಣೆ ಸೆ. 10 ರಂದು ಎಪಿಎಂಸಿ ಪ್ರಾಂಗಣದ ಆಪ್ಸ್‌ಕೋಸ್ ಕೇಂದ್ರ ಕಚೇರಿಯ ಹಿಂಭಾಗದ ಗೋಡೌನ್ ಕಟ್ಟಡಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 4 ರವರೆಗೆ ನಡೆಯಲಿದೆ.
ಇಂದೂದರ ಬಿ.ಎ., ಕೃಷ್ಣಮೂರ್ತಿ ಬಿ.ಎಸ್., ಕೃಷ್ಣಮೂರ್ತಿ ಟಿ.ಆರ್., ನರಹರಿ ಕೆ.ವಿ., ನಾಗರತ್ನ ಎ.ಎಸ್., ನಂದನಕುಮಾರ, ಭಾರತಿ ಎಂ.ಡಿ., ಭಾಸ್ಕರ ಭಟ್ಟ ಕೆ.ಎಸ್., ರತ್ನ ಶ್ರೀಧರಮೂರ್ತಿ ಗಡಿಕಟ್ಟೆ, ರಮೇಶ್ ಎಂ.ಬಿ., ರಾಘವೇಂದ್ರ ಎಚ್.ಕೆ., ಶ್ರೀಧರ ಭಟ್ ಕೆ.ಆರ್., ಸತ್ಯನಾರಾಯಣ ಕೆ.ಟಿ., ಸಿದ್ದವೀರಪ್ಪ ಎಂ.ಜಿ., ಸುರೇಶ್ ವೈ.ಎನ್., ಸುಬ್ಬರಾವ್ ಕೆ.ಎಸ್., ಸುಬ್ರಾವ್ ಪಿ.ಎನ್. ಹಾಗೂ ಸೂರ್ಯನಾರಾಯಣ ಕೆ.ಎಂ. ಕಣದಲ್ಲಿ ಉಳಿದಿದ್ದಾರೆ.
ಸಾಗರದ 5 ಸಾಮಾನ್ಯ ಸ್ಥಾನಗಳು, ಸೊರಬದ 2 ಸಾಮಾನ್ಯ ಸ್ಥಾನಗಳು, ಮಹಿಳಾ ಮೀಸಲಿನ 2 ಸ್ಥಾನಗಳು, ಪರಿಶಿಷ್ಟ ಪಂಗಡ ಹಾಗೂ ಬಿಸಿಎಂ ಬಿನ ಒಂದು ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ.
ಈ ಹಿಂದಿನ ಉಪಾಧ್ಯಕ್ಷ ಎ.ಓ.ರಾಮಚಂದ್ರ ಅಂಬ್ಲಾಡಿ, ಎಚ್.ಬಿ.ಕಲ್ಯಾಣಪ್ಪಗೌಡ ಹೆಬ್ಬೈಲು, ಎಚ್.ಓಮಕೇಶ್ ಹರತಾಳು ಹೊಸನಗರ ಕ್ಷೇತ್ರದಿಂದ ಹಾಗೂ ಪರಿಶಿಷ್ಟ ಜಾತಿ ಕ್ಷೇತ್ರದ ಚೌಡಪ್ಪ ಹುಲಿಮನೆ, ಬಿಸಿಎಂ ಎ ಕ್ಷೇತ್ರದ ಕೆ.ಎಂ.ಸತ್ಯನಾರಾಯಣ ಕೆಳದಿ ತಮ್ಮ ತಮ್ಮ ಮೀಸಲು ಕ್ಷೇತ್ರದಲ್ಲಿ ಎದುರಾಳಿಗಳಿಲ್ಲದ ಹಿನ್ನೆಲೆಯಲ್ಲಿ ಅವರ ಅವಿರೋಧ ಆಯ್ಕೆ ನಡೆದಿದೆ.
ಸ್ಪರ್ಧೆಯಲ್ಲಿ ಒಟ್ಟು 53 ನಾಮಪತ್ರ ಸಲ್ಲಿಕೆಯಾಗಿತ್ತು. ಒಂದು ನಾಮಪತ್ರ ತಿರಸ್ಕೃತವಾಯಿತು. ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಹೊಳಿಯಪ್ಪ, ಮ್ಯಾಮ್‌ಕೋಸ್ ಮಾಜಿ ನಿರ್ದೇಶಕ ತಿರುಮಲ ಮಾವಿನಕುಳಿ, ಇಜೆ ಮನೆ ಗ್ರಾಪಂ ಮಾಜಿ ಉಪಾಧ್ಯಕ್ಷ ಗಿರೀಶ್ ಎನ್. ಹೆಗಡೆ, ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರಭಟ್, ಮಾಜಿ ಆಪ್ಸ್‌ಕೋಸ್ ಅಧ್ಯಕ್ಷ ಬಿ.ಆರ್.ಶೇಷಗಿರಿ ಮೊದಲಾದ ಪ್ರಮುಖರು ನಾಮಪತ್ರವನ್ನು ವಾಪಾಸು ಪಡೆದರು.